More

    ಪುನೀತ್‌ ಸಮಾಧಿ ಬಳಿ ಅಚ್ಚರಿ: ಎಲ್ಲಿಂದಲೋ ಬಂದು ಪ್ರದಕ್ಷಿಣೆ ಹಾಕಿ ಮರೆಯಾದ ನಾಟಿ ಕೋಳಿ..!

    ಬೆಂಗಳೂರು: ಕರುನಾಡ ಕಣ್ಮಣಿ, ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ 20 ದಿನಗಳೇ ಕಳೆದುಹೋದವು. ಬದುಕಿದ್ದಾಗ ಅವರು ನಡೆದುಕೊಂಡ ರೀತಿ, ಅವರ ಆದರ್ಶಗಳು, ಅವರೊಂದಿಗಿನ ಒಡನಾಟದ ಕುರಿತಾಗಿ ಇನ್ನೂ ಅವರ ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. ಇದೇ ಸ್ಮರಣೆಯೊಂದಿಗೇ ನಿನ್ನೆ ’ಪುನೀತ ನಮನ’ ಕಾರ್ಯಕ್ರಮವೂ ನಡೆದಿದೆ.

    ಆದರೆ ಅಚ್ಚರಿಯ ಘಟನೆಯೊಂದು ಇದೇ ವೇಳೆ ನಡೆದಿದೆ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ನಾಟಿ ಕೋಳಿ ಸಾಂಬಾರು ತುಂಬಾ ಇಷ್ಟ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ತೀರಾ ಅಚ್ಚರಿಯ ವಿಷಯ ಎಂದರೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇರುವ ಅವರ ಸಮಾಧಿ ಬಳಿ ಬಂದ ನಾಟಿ ಕೋಳಿಯೊಂದು ಸಮಾಧಿ ಮುಂದೆ ಕುಳಿತು ಕೊನೆಗೆ ಅದಕ್ಕೆ ಪ್ರದಕ್ಷಿಣೆ ಹಾಕಿ ಹೋಗಿದೆ.

    ಇದನ್ನು ಕಂಡು ಅಭಿಮಾನಿಗಳು ಆಶ್ಚರ್ಯಪಟ್ಟುಕೊಂಡಿದ್ದಾರೆ. ಅಪ್ಪುವಿಗೆ ದೊಡ್ಡವರು ಮಾತ್ರವಲ್ಲದೇ ತೀರಾ ಚಿಕ್ಕ ಚಿಕ್ಕ ಪುಟಾಣಿಗಳು ಕೂಡ ಅಭಿಮಾನಿಗಳೇ. ತಮ್ಮ ನೆಚ್ಚಿನ ಅಪ್ಪು ಇನ್ನಿಲ್ಲ ಎಂದು ತಿಳಿದಾಗ ಕಣ್ಣೀರು ಸುರಿಸಿದ ಮಕ್ಕಳು ಅದೆಷ್ಟೋ ಮಂದಿ. ಪುನೀತ್‌ ಅವರ ಅಂತಿಮ ದರ್ಶನಕ್ಕೆ ಬಂದವರಲ್ಲಿ ಮಕ್ಕಳು ಕೂಡ ಅಧಿಕ ಮಂದಿ ಇದ್ದರು.

    ಆದರೆ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿ‍-ಪಕ್ಷಿಗಳು ಕೂಡ ಅಪ್ಪು ಅವರನ್ನು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಆದರೂ ಈ ಕೋಳಿ ಎಲ್ಲಿಂದ ಬಂತು, ನಂತರ ಎಲ್ಲಿಗೆ ಹೋಯ್ತು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ!

    ‘ಈಜೋದನ್ನು, ಮೀನು ಹಿಡಿಯೋದನ್ನು ಚಡ್ಡಿದೋಸ್ತ್‌ಗೆ ಕಲಿಸಿದ್ದೆ… 30ಕ್ಕೆ ಬರ್ತೇನೆ, ನಾಟಿಕೋಳಿ ಸಾಂಬಾರ್‌ ಮಾಡು ಎಂದಿದ್ರು… ’

    VIDEO: ಅಪ್ಪುವಿನ ಆತ್ಮದ ಜತೆಗೆ ಮಾತನಾಡಿದ ಸ್ಟೀವ್‌ ಹಫ್‌? ವಿಡಿಯೋ ಇಲ್ಲಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts