ಕೊಲೆ ಬೆದರಿಕೆ ಬಂದ್ರೂ ಭದ್ರತೆ ಕೊಟ್ಟಿಲ್ಲ: ಸರ್ಕಾರಿ ಸ್ಪಾನ್ಸರ್ಡ್ ಭಯೋತ್ಪಾದನೆ ಇದು ಎಂದು ಹರಿಪ್ರಸಾದ್​ ಕಿಡಿ

threat
Published on

ನವದೆಹಲಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಹಲವು ಜನರಿಗೆ ಕೊಲೆ ಬೆದರಿಕೆ ಬಂದಿದೆ. ನನಗೂ ಕೊಲೆ ಬೆದರಿಕೆ ಬಂದಿದ್ದರೂ ನಮಗೆ ಯಾವುದೇ ಭದ್ರತೆ ಇದುವರೆಗೆ ಕೊಟ್ಟಿಲ್ಲ ಎಂದು ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ.

ದೆಹಲಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಹರಿಪ್ರಸಾದ್​, ಬಿಜೆಪಿ ಮತ್ತು ಆರ್​ಎಸ್​ಎಸ್​ ವಿರುದ್ಧ ಹೇಳಿಕೆ ನೀಡುವ ವಿಪಕ್ಷ ನಾಯಕರು, ಸಾಹಿತಿ, ಬುದ್ಧಿಜೀವಿಗಳಿಗೆ ಕೊಲೆ ಬೆದರಿಕೆ ಫ್ಯಾಷನ್ ಆಗಿದೆ. ಎಫ್ಐಆರ್ ದಾಖಲಿಸಿಕೊಳ್ಳದೆ ಪೊಲೀಸರಿಂದ ಲಜ್ಜೆಗೆಡಿತನ ಪ್ರದರ್ಶನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಂವಿಧಾನಿಕವಾಗಿ ಮೋಹನ್ ಭಾಗವತ್ ಏನೂ ಅಲ್ಲ. ಆದರೆ ಅವರಿಗೋಸ್ಕರ ಹೈವೆಗಳನ್ನು ಬಂದ್ ಮಾಡಿ ಭದ್ರತೆ ಕೊಡುತ್ತಾರೆ. ನನಗೆ ಯಾವುದೇ ಭದ್ರತೆಯನ್ನು ಕೊಟ್ಟಿಲ್ಲ. ಮರ್ಡರ್ ಕೇಸ್ ಇದ್ದವರಿಗೂ ವೈ ಪ್ಲಸ್ ಸೆಕ್ಯೂರಿಟಿ ಕೊಟ್ಟಿರೋದು ನೋಡಿದರೆ ಇದೊಂದು ರೀತಿಯ ಸರ್ಕಾರಿ ಸ್ಪಾನ್ಸರ್ಡ್ ಭಯೋತ್ಪಾದನೆ ಎಂದರು ತಪ್ಪಾಗಲಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ಒಟ್ಟು 61 ಜನರಿಗೆ ಕೊಲೆ ಬೆದರಿಕೆ ಬಂದಿದೆ . ಸಿದ್ದರಾಮಯ್ಯ ಕುಮಾರಸ್ವಾಮಿ ಸೇರಿ ಹಲವು ಜನರು ಇದರಲ್ಲಿ ಸೇರಿದ್ದಾರೆ. ಆದರೆ ಯಾರೊಬ್ಬರಿಗೂ ಭದ್ರತೆಯನ್ನು ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net