ಕಾಂಗ್ರೆಸ್​ ನಾಯಕನಿಗೆ ವಿದಾಯ- ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ಪ್ರಧಾನಿ ನರೇಂದ್ರ ಮೋದಿ

modi
modi
Published on

ನವದೆಹಲಿ: ಕೇಂದ್ರ ಸರ್ಕಾರದ ಕಾರ್ಯವನ್ನು ಹೊಗಳಿದ್ದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರನ್ನು ಮುಕ್ತಕಂಠದಿಂದ ನಿನ್ನೆಯಷ್ಟೇ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಕೇಂದ್ರ ಸರ್ಕಾರವನ್ನು ಆಜಾದ್​ ಹೊಗಳಿದ್ದರು.

‘ಆಜಾದ್‌ ಅವರ ಹೊಗಳಿಕೆಯ ಮಾತುಗಳನ್ನು ಕಾಂಗ್ರೆಸ್‌ ಸಕಾರಾತ್ಮಕವಾಗಿ ನೋಡಬೇಕೇ ಹೊರತೂ ಅವರನ್ನು ಜಿ-23ರ ಗುಂಪಿಗೆ ಸೇರಿಸಬಾರದು’ ಎಂದು ಹೇಳಿದ್ದರು. ಮೂಲಕ ಪಕ್ಷದಲ್ಲಿ ಆಂತರಿಕ ಸುಧಾರಣೆ ಕೋರಿ ಪತ್ರ ಬರೆದು 23 ನಾಯಕರು ‘ಬಂಡಾಯ’ ಎದ್ದಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು.

ಈ ನಡುವೆ ಗುಲಾಮ್ ನಬಿ ಆಜಾದ್ ಸದಸ್ಯತ್ವ ಸ್ಥಾನದ ಅವಧಿ ಮುಕ್ತಾಯವಾಗಿದ್ದು, ಅವರನ್ನು ಇಂದು ಬೀಳ್ಕೊಡಲಾಯಿತು. ಅವರ ಕುರಿತು ಹೇಳುವಾಗ ಪ್ರಧಾನಿ ಮೋದಿ ಕಣ್ಣೀರು ಹಾಕಿದರು. ಅವರ ಕುರಿತು ಮಾತನಾಡುವ ಸಮಯದಲ್ಲಿ ಗದ್ಗದಿತರಾಗಿ ಒಂದು ಕ್ಷಣ ಮೌನಕ್ಕೆ ಜಾರಿದರು.

ಗುಲಾಂ ನಬಿ ಆಜಾದ್​ರಂಥ ನಾಯಕರು ಮತ್ತೆ ಸಿಗುವುದು ತುಂಬಾ ವಿರಳ. ಅವರು ತಮ್ಮ ಪಕ್ಷದ ಬಗ್ಗೆ ಮಾತ್ರವಲ್ಲ, ಹೈಕಮಾಂಡ್ ಮತ್ತು ದೇಶದ ಬಗ್ಗೆಯೂ ಗಮನ

ಹರಿಸಿದ್ದಾರೆ. ಆಜಾದ್ ಅವರು ನನ್ನ ನಿಜವಾದ ಸ್ನೇಹಿತ, ಅಧಿಕಾರ ಬಂದಾಗ ಹೇಗೆ ಎಲ್ಲವನ್ನು ನಿರ್ವಹಿಸಬೇಕು ಎಂಬುದನ್ನು ಅವರನ್ನು ನೋಡಿ ನಾವು ಕಲಿಯಬೇಕು. ಇವರನ್ನು ಬೀಳ್ಕೊಡುತ್ತಿರುವುದಕ್ಕೆ ದುಃಖವಾಗುತ್ತದೆ ಎಂದು ಭಾವುಕರಾದರು.

ಭಯೋತ್ಪಾದಕ ದಾಳಿಯಿಂದಾಗಿ ಗುಜರಾತ್‌ನ ಜನರು ಕಾಶ್ಮೀರದಲ್ಲಿ ಸಿಲುಕಿಕೊಂಡಾಗ ಆಜಾದ್ ಮತ್ತು ಪ್ರಣಬ್ ಮುಖರ್ಜಿ ಅವರ ಪ್ರಯತ್ನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಗುಲಾಂ ನಬಿ ಆಜಾದ್ ಅವರು ನಿರಂತರವಾಗಿ ಪಾಲೋ ಅಪ್ ಮಾಡುತ್ತಿದ್ದರು. ತಮ್ಮದೇ ಕುಟುಂಬದ ಸದಸ್ಯರೇ ಸಿಲುಕಿಕೊಂಡಿದ್ದಾರೆ ಎಂಬ ರೀತಿ ಅವರು ಚಡಪಡಿಸಿ ಕೆಲಸಮಾಡಿದ್ದರು ಎಂದು ಆಜಾದ್ ಅವರನ್ನು ಪ್ರಧಾನಿ ಶ್ಲಾಘಿಸಿದರು.

ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹಾಗೂ ಮೂವರು ಸದಸ್ಯರು ಮಂಗಳವಾರ ವಿದಾಯ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net