

ನಾಸಿಕ್ (ಮಹಾರಾಷ್ಟ್ರ): ಟೋಲ್ ಪ್ಲಾಜಾ ಒಂದರಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿ ಟ್ರಾಫಿಕ್ ಜಾಮ್ ಉಂಟು ಮಾಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಭಾರಿ ವೈರಲ್ ಆಗಿದ್ದು ಥಹರೇವಾರಿ ಕಮೆಂಟ್ಗಳು ಬರುತ್ತಿವೆ.
ನಾಸಿಕ್ ಜಿಲ್ಲೆಯ ಪಿಂಪಲಗಾಂವ್ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಪತಿಯೊಂದಿಗೆ ಬಂದ ಮಹಿಳೆಯೊಬ್ಬರು ಟೋಲ್ ಪ್ಲಾಜಾದ ಮಹಿಳಾ ಸಿಬ್ಬಂದಿ ಜತೆ ಜಗಳಕ್ಕಿಳಿದಿದ್ದಾರೆ. ಟೋಲ್‌ನಲ್ಲಿ ಹಣ ನೀಡುವ ಸಲುವಾಗಿ ಮಹಿಳೆ ಮತ್ತು ಟೋಲ್ನ ಮಹಿಳಾ ಸಿಬ್ಬಂದಿ ನಡುವೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಇಬ್ಬರೂ ಜುಟ್ಟುಹಿಡಿದು ಜಗಳ ಮಾಡಿದ್ದಾರೆ. ಅದು ಸಾರ್ವಜನಿಕ ರಸ್ತೆ ಎನ್ನುವುದನ್ನೂ ಮರೆತು, ಪರಸ್ಪರ ಜುಟ್ಟು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಎಳೆದಾಡಿದ್ದಾರೆ.
ಅಲ್ಲಿ ಇದ್ದವರ ಪೈಕಿ ಕೆಲವರು ಜಗಳ ತಪ್ಪಿಸೋದಕ್ಕೆ ಬಂದರೂ ಅವರ ಮಾತನ್ನು ಮಹಿಳೆಯರು ಕೇಳಲಿಲ್ಲ. ಇನ್ನು ಕೆಲವರು ಜಗಳದ ಮಜ ನೋಡುತ್ತಾ ಇದ್ದರೆ ಮತ್ತೆ ಕೆಲವರು ವಿಡಿಯೋ ಮಾಡಿ ಈಗ ಹರಿಬಿಟ್ಟಿದ್ದಾರೆ. 2 ನಿಮಿಷ, 47 ಸೆಕೆಂಡ್ನ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ವೈರಲ್ ಆಗಿದೆ. ಈ ಮಹಿಳೆಯರ ಜಗಳದಿಂದಾಗಿ ಟೋಲ್‌ನಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಈ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)‘
ಇಲ್ಲಿದೆ ನೋಡಿ ವಿಡಿಯೋ: