ಸೋಂಕಿತರ ಶವ ಪಡೆಯಲು ಕುಟುಂಬಸ್ಥರೇ ಹೆದರುವಾಗ, ಉಚಿತ ಸೇವೆಯಲ್ಲಿ ತೊಡಗಿದ್ದಾರೆ ಈ ಮಹಿಳೆ...

versha
Published on

ಲಖನೌ: ಕರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಸಾಗಿದೆ. ಕ್ಷಣ ಕ್ಷಣಕ್ಕೂ ಈ ವೈರಸ್‌ ತನ್ನ ಎರಡನೆಯ ಅಲೆಯ ಮೂಲಕ ಭೀತಿ ಸೃಷ್ಟಿಸುತ್ತಿದೆ. ವೈರಸ್‌ನಿಂದ ಮೃತಪಟ್ಟರೆ, ಭಯದಿಂದ ಅವರ ಕುಟುಂಬಸ್ಥರೇ ಆಸ್ಪತ್ರೆಯ ಕಡೆ ಸುಳಿಯದ, ಶವಗಳನ್ನು ತೆಗೆದುಕೊಂಡ ಹೋಗದ ಘಟನೆಗಳಿಗೆ ಲೆಕ್ಕವೇ ಇಲ್ಲ.

ಇಂಥ ಸ್ಥಿತಿಯ ನಡುವೆ ಇಲ್ಲೊಬ್ಬ ಮಹಿಳೆ ಕರೊನಾ ಸೋಂಕಿತರ ಶವವನ್ನು ಉಚಿತವಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಸೇವೆಯಲ್ಲಿ ನಿರತರಾಗಿದ್ದಾರೆ! ‌

ಲಖನೌದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ಸೋಂಕಿತರ ಶವಗಳನ್ನು ಉಚಿತವಾಗಿ ಕೊಂಡೊಯ್ಯುವ ಸೇವೆಯಿಂದ ಇಂಥದ್ದೊಂದು ಸೇವೆ ಆರಂಭಿಸಿರುವ ಕರೊನಾ ವಾರಿಯರ್‌ ಹೆಸರು ವರ್ಷಾ ವರ್ಮಾ. ಮೃತಪಟ್ಟವರ ಸಂಬಂಧಿಯನ್ನು ಚಿತಾಗಾರದ ಬಳಿ ಕರೆದುಕೊಂಡು ಹೋಗಿ ಕೊನೆಯದಾಗಿ ಮುಖದ ದರ್ಶನ ಮಾಡಿಸುತ್ತಿದ್ದಾರೆ ಕೂಡ. ಯಾರೇ ಕರೆ ಮಾಡಿದರೂ ಅವರಿಗೆ ಸಹಾಯ ಮಾಡುತ್ತಾರೆ ಇವರು.

ಕೆಲ ದಿನಗಳ ಹಿಂದೆ ವರ್ಷಾ ಅವರ ಸ್ನೇಹಿತರೊಬ್ಬರು ಮೃತಪಟ್ಟಿದ್ದರು, ಆಗ ಆಸ್ಪತ್ರೆಯಿಂದ ಶವ ಸಾಗಿಸಲು ವಾಹನವಿಲ್ಲದೆ ಪರದಾಡುವಂತಾಯಿತು, ಅದನ್ನು ನೋಡಿದ ವರ್ಷಾ ಇಂಥದ್ದೊಂದು ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಒಂದು ಕಾರನ್ನು ಪಡೆದಿರುವ ವರ್ಷಾ ಅದಕ್ಕಾಗಿ ಚಾಲಕರನ್ನು ನೇಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net