More

    ಫ್ಯಾನ್ಸಿ​ ನಂಬರ್​ನಲ್ಲಿ ಸಾರಿಗೆ ಇಲಾಖೆ ದಾಖಲೆ: 0001 ಸಂಖ್ಯೆಗೆ ಎಷ್ಟು ಹಣ ಕೊಟ್ರು ಗೊತ್ತಾ?

    ಬೆಂಗಳೂರು: ತಮಗೆ ಇಷ್ಟವಾದ ವಾಹನಗಳ ನೋಂದಣಿ ಸಂಖ್ಯೆಗಾಗಿ ಕೋಟ್ಯಂತರ ರೂಪಾಯಿ ಹಣ ವ್ಯಯಿಸುವವರು ಕೆಲವು ಕಡೆಗಳಲ್ಲಿ ಇದ್ದಾರೆ. ಆದರೆ ಸದ್ಯ ಕರ್ನಾಟಕದಲ್ಲಿ ಅಷ್ಟು ಹಣ ಅಲ್ಲದಿದ್ದರೂ, ಈ ಬಾರಿ ಸಾರಿಗೆ ಇಲಾಖೆ ಒಂದು ಫ್ಯಾನ್ಸಿ ನಂಬರ್​ ನೀಡಿಕೆಯಲ್ಲಿ ದಾಖಲೆ ಸೃಷ್ಟಿಸಿಬಿಟ್ಟಿದೆ!

    ಸಾಮಾನ್ಯವಾಗಿ ಫ್ಯಾನ್ಸಿ ನಂಬರ್​ಗಳನ್ನು ಹೀಗೆಯೇ ಎಲ್ಲರಿಗೂ ಕೊಡುವುದಿಲ್ಲ. ಕೆಲವೊಂದು ಸಂಖ್ಯೆಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಸಾರಿಗೆ ಇಲಾಖೆ, ಅವುಗಳಿಗಾಗಿ ಹರಾಜು ಕೂಗುತ್ತದೆ. ಅತಿ ಹೆಚ್ಚು ಹಣವನ್ನು ನೀಡಲು ಮುಂದೆ ಬರುವವರಿಗೆ ಈ ಸಂಖ್ಯೆಯನ್ನು ನೀಡಲಾಗುತ್ತದೆ.

    ಇದೀಗ, ಬೆಂಗಳೂರಿನ ಕೋರಮಂಗಲ ಆರ್​ಟಿಒ ಕಚೇರಿ ಲಘು ಮೋಟಾರು ವಾಹನಗಳಿಗಾಗಿ ಪ್ರಾರಂಭಿಸಿರುವ KA 01 MV ಸರಣಿಯ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಪೈಕಿ 0001 ಸಂಖ್ಯೆಗೆ 10.75 ಲಕ್ಷ ರೂಪಾಯಿ ಬಿಡ್​ ಮಾಡಲಾಗಿದೆ. ಗುಮಾಲ್ ಮುಸ್ತಾಪ ಎಂಬುವರು ತಮ್ಮ ಹೊಸ ಬೆಂಜ್ ಕಾರಿಗೆ 0001 ಸಂಖ್ಯೆಯನ್ನು 10.75 ಲಕ್ಷ ರೂ. ಗೆ ಬಿಡ್ ಮಾಡಿ ಖರೀದಿಸಿದ್ದಾರೆ. ಇದು ಸಾರಿಗೆ ಇತಿಹಾಸದಲ್ಲೇ ದುಬಾರಿ ಬಿಡ್ ಎನ್ನಲಾಗಿದೆ.

    ಇನ್ನು ಒಟ್ಟು 50 ನೋಂದಣಿ ಸಂಖ್ಯೆಗಳನ್ನು ಬಹಿರಂಗ ಹರಾಜಿಗೆ ಇರಿಸಲಾಗಿತ್ತು. ಈ ಪೈಕಿ 15 ಸಂಖ್ಯೆಗಳು ಮಾರಾಟಗೊಂಡಿದೆ. ನಿಗದಿತ ಶುಲ್ಕದಿಂದ 11.25 ಲಕ್ಷ ರೂ. ಮತ್ತು ಹರಾಜಿನಿಂದ 18.30 ಲಕ್ಷ ರೂ. ಸೇರಿ ಒಟ್ಟು 29.55 ಲಕ್ಷ ರೂ. ಆದಾಯವಾಗಿದೆ ಎಂದು ಇಲಾಖೆ ಹೇಳಿದೆ.

    ಇದನ್ನೂ ಓದಿ: ಸೌತ್​ ಬೇಡ ನಾರ್ತ್​ ಬೇಕು… ಅಯ್ಯೋ ನಂಗೆ ಅಮ್ಮನ ನೋಡ್ಬೇಕು…

    ಹಾಗಿದ್ದರೆ ಯಾವ್ಯಾವ ಸಂಖ್ಯೆ ಎಷ್ಟೆಷ್ಟು ಮೊತ್ತಕ್ಕೆ ಹರಾಜಾಗಿದೆ ಎಂದು ಇಲ್ಲಿದೆ ನೋಡಿ..
    KA 01 MV 0001 10.75 ಲಕ್ಷ
    KA 01 MV 9999 -4.15 ಲಕ್ಷ
    KA 01 MV 0009 – 3.75 ಲಕ್ಷ
    KA 01 MV 0999 – 2.05 ಲಕ್ಷ
    KA 01 MV 0555 – 1.16 ಲಕ್ಷ
    KA 01 MV 0011 – 1.16 ಲಕ್ಷ
    ಇನ್ನು KA 01 MV 0005, KA 01 MV 5555, KA 01 MV 1989, KA 01 MV 1111, KA 01 MV 3333, KA 01 MV 0003, KA 01 MV 0777, KA 01 MV 0099 ಸಂಖ್ಯೆಗಳು 76 ಸಾವಿರ ರೂಪಾಯಿಗೆ ಹರಾಜುಗೊಂಡಿದೆ.

    ನಟಿಯರನ್ನು ಬಿಡುಗಡೆ ಮಾಡದಿದ್ರೆ ಬಾಂಬ್​ ಬ್ಲಾಸ್ಟ್​: ಉಗ್ರ ಸಂಘಟನೆ ಹೆಸರಲ್ಲಿ ಪತ್ರ!

    ಅಮ್ಮಾ ನನ್ನನ್ನು ಕ್ಷಮಿಸಿಬಿಡು… ನಾನು ಬದುಕಿದ್ದರೆ ಅವನಿಂದ ನಿಮಗೆ ಬರೀ ಹಿಂಸೆ…

    ಲಡಾಖ್​ ಗಡಿಯೊಳಗೆ ನುಸುಳಿದ ಚೀನಿ ಸೈನಿಕ- ಬೆಚ್ಚಗಿನ ಆಹಾರ, ಬಟ್ಟೆ ನೀಡಿದ ಯೋಧರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts