More

    ಚುನಾವಣೆಗೆ ವಾರದ ಮೊದಲೇ ಆರು ಕೋಟಿ ಮತ ಚಲಾವಣೆ!

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಲೇ ಸಾಗಿದೆ. ನವೆಂಬರ್​ 3ರಂದು ಚುನಾವಣೆ ನಡೆಯಲಿದೆ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಚುನಾವಣೆಗೆ ಇನ್ನೂ ಎಂಟು ಇರುವಾಗಲೇ ಸುಮಾರು ಆರು ಕೋಟಿಯಷ್ಟು ಮತಗಳು ಚಲಾವಣೆಯಾಗಿವೆ!

    ಇದು ಅಚ್ಚರಿ ಎನಿಸಿದರೂ ಸತ್ಯ. ಎಕೆಂದರೆ, ಅಮೆರಿಕದಲ್ಲಿ ಮೇಲ್​-ಇನ್​ ಪತ್ರಕ್ಕೆ ಅವಕಾಶವಿದೆ. ಇದರ ಬಗ್ಗೆ ಈಗಾಗಲೇ ಸಾಕಷ್ಟು ಆರೋಪ-ಪ್ರತ್ಯಾರೋಪಗಳು ಬರುತ್ತಿದ್ದರೂ, ಇಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೇಲ್​-ಇನ್​ ಮೂಲಕ ಇದಾಗಲೇ ಆರು ಕೋಟಿಯಷ್ಟು ಮತಗಳು ಚಲಾವಣೆಯಾಗಿವೆ ಎಂದು ಅಮೆರಿಕದ ಹೇಳಿದೆ.

    ಆದ್ದರಿಂದ ಇವುಗಳ ಮತ ಎಣಿಕೆ ಕಾರ್ಯ ನಡೆಯಬೇಕಿರುವುದರಿಂದ ಚುನಾವಣಾ ಫಲಿತಾಂಶ ವಿಳಂಬ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಇದನ್ನೂ ಓದಿ: ಕಲ್ಲಿದ್ದಲು ಹಗರಣ: ಕೇಂದ್ರದ ಮಾಜಿ ಸಚಿವನಿಗೆ ಮೂರು ವರ್ಷ ಜೈಲು

    ವಾಷಿಂಗ್ಟನ್ ಡಿಸಿ ಮತ್ತು ಎಲ್ಲಾ 50 ರಾಜ್ಯಗಳಲ್ಲಿ ಅಮೆರಿಕ ಮೂಲದ ನೆಟ್​ವರ್ಕ್ ಎಡಿಸನ್ ರಿಸರ್ಚ್ ಮತ್ತು ಕ್ಯಾಟಲಿಸ್ಟ್ ನಡೆಸಿದ ಚುನಾವಣೆ ಸಮೀಕ್ಷೆ ಪ್ರಕಾರ, 2016ರ ಚುನಾವಣೆಯಲ್ಲಿ ಸುಮಾರು 5.8 ಕೋಟಿ ಮತದಾನವು ಚುನಾವಣಾ ಪೂರ್ವದಲ್ಲಿ ಚಲಾವಣೆಯಾಗಿದ್ದವು. ಆದರೆ ಇದೀಗ ಇನ್ನೂ ವಾರ ಇರುವಾಗಲೇ ಅದನ್ನು ಮೀರಿಸುವಷ್ಟು ರೀತಿಯಲ್ಲಿ ಚಲಾವಣೆಯಾಗಿದೆ. ಆದ್ದರಿಂದ ಚುನಾವಣೆಗೆ ಇನ್ನೂ ಸಮಯ ಇರುವ ಹಿನ್ನೆಲೆಯಲ್ಲಿ ಇನ್ನಷ್ಟು ಮೇಲ್​-ಇನ್​ ಮತದಾನ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಕರೊನಾವೈರಸ್​ನ ಹಾಟ್​ಸ್ಟಾಟ್​ಗಳಲ್ಲಿ ಅಮೆರಿಕವೂ ಒಂದಾಗಿದೆ. ಈ ನಡುವೆಯೇ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಈ ಚುನಾವಣೆ ಬಹು ಮಹತ್ವ ಪಡೆದಿದೆ. ಮೇಲ್​-ಇನ್​ ಮತದಾನದಲ್ಲಿ ಯಾರಿಗೆ ಅಧಿಕ ಮತ ಚಲಾವಣೆ ಆಗಿದೆ ಎಂಬುದು ತಿಳಿಯಬೇಕಾದರೂ ಚುನಾವಣೆ ಮುಗಿಯುವವರೆಗೆ ಕಾಯಲೇಬೇಕು. ಆದ್ದರಿಂದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡನ್ ನಡುವೆ ಯಾರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಪೂರ್ಣ ಫಲಿತಾಂಶಗಳು ಚುನಾವಣೆ ನಡೆದ ರಾತ್ರಿಯೇ ತಿಳಿಯಲು ಆಗದು.

    ಕೆಲಸಕ್ಕೆ ಅಡ್ಡಿಬಂತು ‘ನಿಯಮ ಉಲ್ಲಂಘನೆ’ ಗಡ್ಡ: ಸಬ್ ಇನ್ಸ್‌ಪೆಕ್ಟರ್ ಅಮಾನತು

    ಚಿನ್ನ ತಂದರಷ್ಟೇ ಸೀಮಂತ: ಲಕ್ಷ ಲಕ್ಷ ಕೊಟ್ಟರೂ ಮುಗಿಯದ ಧನದಾಹ- ಟೆಕ್ಕಿ‌ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts