VIDEO: ಒಳಗೆ ಸೇರಿದರೆ ಗುಂಡು... ರಸ್ತೆ ಮಧ್ಯೆ ಫುಲ್​ ಟೈಟ್​- ಪೊಲೀಸರೂ ಸುಸ್ತು, ಕ್ಯಾಬ್​ ಚಾಲಕನೂ ಬೇಸ್ತು- ವಿಡಿಯೋ ವೈರಲ್

women
Published on

ಮುಂಬೈ: ಮೂವರು  ಮಹಿಳೆಯರು ಫುಲ್​ ಟೈಟ್​ ಆಗಿ ಮಧ್ಯರಾತ್ರಿ ರಸ್ತೆಯ ಮಧ್ಯೆ ಭಾರಿ ಗಲಾಟೆ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ಕಳೆದ ತಿಂಗಳು ಮುಂಬೈನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೋ ಈಗ ವೈರಲ್​ ಆಗಿದೆ. ಮೂವರು ಮಹಿಳೆಯರು ಕುಡಿದು ಓಲಾ ಕ್ಯಾಬ್​ನ ಚಾಲಕ, ಅಲ್ಲಿಗೆ ಬಂದ ಪೊಲೀಸ್​ ಎಲ್ಲರನ್ನೂ ಸುಸ್ತು ಮಾಡಿರುವ ಘಟನೆ ಇದಾಗಿದೆ.

ಮುಂಬೈನಲ್ಲಿ ಪಾರ್ಟಿ ಮುಗಿಸಿ ತಡರಾತ್ರಿ ವಾಪಾಸಾಗುತ್ತಿದ್ದ ವೇಳೆ ಮೂವರು ಯುವತಿಯರು ಈ ಹಂಗಾಮಾ ಸೃಷ್ಟಿಸಿದ್ದಾರೆ. ಓಲಾ ಕ್ಯಾಬ್‌ ಏರಿದ್ದ ಒಬ್ಬಾಕೆ, ನಂತರ ಕ್ಯಾಬ್​ ಚಾಲಕನನ್ನು ನಿಂದಿಸಿ ತಾನೇ ಡ್ರೈವ್​ ಮಾಡಲು ಮುಂದಾಗಿದ್ದಾಳೆ. ಗಲಾಟೆ ಆಗುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ಇನ್ನೊಬ್ಬ ಯುವತಿ ಪೊಲೀಸ್​ ಅಧಿಕಾರಿಯ ಕಾಲರ್ ಹಿಡಿದುಕೊಂಡು ಬೆದರಿಕೆ ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

"ಹಲೋ, ನನ್ನ ಹೆಸರು ಅರ್ಚಿತಾ.." ಎಂದು ಒಬ್ಬಾಕೆ ಕಿರುಚಿಕೊಂಡಿದ್ದಾಳೆ. ನೀವು ಪೊಲೀಸರನ್ನಾದರೂ ಕರೆಯಿರಿ, ಮೀಡಿಯಾದವರನ್ನಾದರೂ ಕರೆಯಿರಿ ಯಾರಿಗೂ ನಾವು ಡೋಂಟ್​ ಕೇರ್​ ಎಂದಿದ್ದಾಳೆ. ಒಬ್ಬಾಕೆಯ ಪ್ಯಾಂಟ್​ ಕೂಡ ಒದ್ದೆಯಾಗಿದ್ದು, ಈಕೆ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾಳೆ ಎಂದು ಸಾಕಷ್ಟು ಕಮೆಂಟಿಗರು ಕಮೆಂಟ್​ ಮಾಡಿದ್ದನ್ನು ಕಾಣಬಹುದು!

ಅದರಲ್ಲಿ ಒಬ್ಬಾಕೆಯನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆಕೆ ಕುಡಿದು ರಸ್ತೆಯ ಮೇಲೆ ಬಿದ್ದುಕೊಂಡಿದ್ದಾಳೆ.

ಕುಂಗಫೂ ಪಾಂಡೆ ಎನ್ನುವವರು ಶೇರ್​ ಮಾಡಿರುವ ವಿಡಿಯೋಗಳೆಲ್ಲಾ ಇಲ್ಲಿವೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net