ಬೆಂಗಳೂರಿನ ಹೋಟೆಲ್​ನಲ್ಲಿ ಡ್ರಗ್ಸ್​ ನಶೆಯಲ್ಲಿ ಸಿಕ್ಕಿಬಿದ್ದು ಅರೆಸ್ಟ್​ ಆದ ಖ್ಯಾತ ನಟ ಇವರೇ ನೋಡಿ…

1 Min Read

ಬೆಂಗಳೂರು: ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಬೆಂಗಳೂರಿನ ಪಂಚತಾರಾ ಹೋಟೆಲ್ ಹಲಸೂರು ಪೊಲೀಸರು ದಾಳಿನಡೆಸಿದ್ದಾರೆ. ಪಾರ್ಟಿಯಲ್ಲಿ ಬಾಲಿವುಡ್​ ನಟ, ರಾಜಕೀಯ ನಾಯಕರ ಮಕ್ಕಳು ಸಹ ಪಾರ್ಟಿಯಲ್ಲಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದೀಗ ಆ ನಟ ಯಾರು ಎಂಬ ಬಗ್ಗೆ ತನಿಖೆಯಿಂದ ತಿಳಿದುಬಂದಿದೆ.

ಬಾಲಿವುಡ್​ನ ಖ್ಯಾತ ನಟ ಶಕ್ತಿ ಕಪೂರ್​ ಅವರ ಮಗ ಸಿದ್ಧಾಂತ್​ ಕಪೂರ್​ ಡ್ರಗ್ಸ್​ ಸೇವನೆ ಮಾಡುತ್ತಿದ್ದುದು ದೃಢಪಟ್ಟಿದ್ದು ಹಲಸೂರು ಪೊಲೀಸರು ಠಾಣೆಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ.

ಹಲಸೂರು ಬಳಿಯ ಜಿ.ಟಿ ಮಾಲ್ ಬಳಿಯ ಪಾರ್ಕ್ ಹೋಟೆಲ್​ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆಗೆ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಹಲಸೂರು ಇನ್ ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದು, 50ಕ್ಕೂ ಹೆಚ್ಚು ಯುವಕ ಮತ್ತು ಯುವತಿಯರನ್ನು ವಶಕ್ಕೆ ಪಡೆದು ಮೂರು ಟಿಟಿ ವಾಹನದಲ್ಲಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

35 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಸದ್ಯ ಪಾರ್ಟಿಯಲ್ಲಿ ಐವರು ಡ್ರಗ್ಸ್ ಸೇವನೆ ಮಾಡಿರುವುದು ಧೃಡಪಟ್ಟಿದೆ. ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಸಚಿವನ ಪುತ್ರನ ಮೇಲೆ ರೇಪ್​, ಗರ್ಭಪಾತ ಆರೋಪ ಹೊರಿಸಿದಾಕೆಗೆ ಸಾರ್ವಜನಿಕವಾಗಿ ಮಸಿ ಬಳಿದು ವಿಕೃತಿ!

VIDEO: ಬಣ್ಣದ ಲೋಕ ತಲ್ಲಣ- ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಶವವಾದ ಫ್ಯಾಷನ್​ ಡಿಸೈನರ್!

ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ನೀರು ಕುಡಿದು ಬರ್ತೇನೆಂದು ಹೋದ ವರ ನಾಪತ್ತೆ! ಬರಿಗೈನಲ್ಲಿ ವಧು ವಾಪಸ್​

Share This Article