VIDEO: ಡ್ರೋನ್‌ v/s ಕಾಗೆ- ಆಹಾರ ಒಯ್ಯುತ್ತಿದ್ದ ಡ್ರೋನ್‌ ಜತೆ ಕಾಗೆ ಫೈಟಿಂಗ್‌: ವಿಡಿಯೋ ವೈರಲ್

crow
Published on

ಗ್ರಾಹಕರಿಗೆ ಆಹಾರ ಪೂರೈಕೆ ಮಾಡಲು ಬೈಕ್‌ಗಳ ಮೇಲೆ ನಮ್ಮಲ್ಲಿ ಡೆಲಿವರಿ ಬಾಯ್‌ಗಳು ಬಂದರೆ ಕೆಲವು ದೇಶಗಳಲ್ಲಿ ಆಹಾರಗಳನ್ನು ಡ್ರೋನ್ ಮೂಲಕ ಸಾಗಿಸಲಾಗುತ್ತದೆ. ಅದೇ ರೀತಿ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ ಕೂಡ ಡ್ರೋನ್‌ ಮೂಲಕ ಆಹಾರ ತೆಗೆದುಕೊಂಡು ಹೋಗಲಾಗುತ್ತಿದೆ. ಆದರೆ ಇದೀಗ ಅದರ ವಿಡಿಯೋ ಒಂದು ವೈರಲ್‌ ಆಗಿದೆ.

ಅದೇನೆಂದರೆ ಹೀಗೆ ಆಹಾರ ತೆಗೆದುಕೊಂಡು ಹೋಗುತ್ತಿರುವ ಡ್ರೋನ್‌ ಮತ್ತು ಕಾಗೆಯ ಜತೆಗೆ ಜಗಳವಾಗಿರುವ ವಿಡಿಯೋ ಇದಾಗಿದೆ. ಆಹಾರ ತೆಗೆದಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಅದರಲ್ಲಿ ಆಹಾರ ಇದೆ ಎಂದು ತಿಳಿದ ಕಾಗೆಯೊಂದು ಹಾರಿಬಂದು ಡ್ರೋನ್ ಅನ್ನು ಮೂತಿಯಿಂದ ಕುಕ್ಕಿ ಎಳೆದಾಡಿದೆ.

ಈ ಸಂದರ್ಭದಲ್ಲಿ ಅದೃಷ್ಟವಶಾತ್‌ ಡ್ರೋನ್‌ಗೆ ಏನೂ ಆಗಲಿಲ್ಲ. ಕಾಗೆ ಕುಕ್ಕಿದ ರಭಸಕ್ಕೆ ಡ್ರೋನ್‌ ಅತ್ತಿತ್ತ ಅಲುಗಾಡಿದರೂ ಅದಕ್ಕೆ ಹಾನಿಯಾಗಲಿಲ್ಲ. ಆದರೆ ಅದರಲ್ಲಿದ್ದ ಆಹಾರ ಕೆಳಕ್ಕೆ ಬಿದ್ದಿದೆ. ಆಹಾರ ಕೆಳಗೆ ಬೀಳುತ್ತಿದ್ದಂತೆಯೇ ಕಾಗೆ ಹಾರಿ ಹೋಗಿದೆ. ಇದರ ವಿಡಿಯೋ ಇದೀಗ ನೋಡುಗರನ್ನು ಅಚ್ಚರಿಗೊಳಿಸುತ್ತಿದೆ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net