ಕಿವಿನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆ: ಸ್ಕ್ಯಾನಿಂಗ್‌ ಮಾಡಿದ ವೈದ್ಯರು ಶಾಕ್‌!

spider
Published on

ಝೂಝೂ (ಚೀನಾ): ಕಿವಿಯಲ್ಲಿ ಸಮಸ್ಯೆ ಎಂದುಕೊಂಡು ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು, ಅವರ ಕಿವಿಯನ್ನು ಸ್ಕ್ಯಾನಿಂಗ್‌ ಮಾಡಿದಾಗ ಅದರಲ್ಲಿ ಜೀವಂತ ಜೇಡರ ಬಲೆ ಇರುವುದನ್ನು ನೋಡಿ ವೈದ್ಯರೇ ಕಂಗಾಲಾಗಿರುವ ಘಟನೆ ನಡೆದಿದೆ.

ಇದು ನಡೆದಿರುವುದು ಚೀನಾದ ಚೀನಾದ ದಕ್ಷಿಣದಲ್ಲಿರುವ ಹುನಾನ್ ಪ್ರಾಂತ್ಯದ ಝೂಝೂ ಎಂಬ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಯೀ ಎಂಬ ಹೆಸರಿನ ಮಹಿಳೆಯೊಬ್ಬರು ಕಿವಿನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ದಿನ ತೀವ್ರವಾಗಿ ಹಿಂಸೆ ಅನುಭವಿಸಿದ ಅವರು, ಕಿವಿಯಲ್ಲಿ ವಿಪರೀತ ಸೆಳೆತ ತಡೆದುಕೊಳ್ಳಲು ಆಗದೇ ವೈದ್ಯರ ಬಳಿ ಬಂದಿದ್ದರು. ತಮಗೆ ತುಂಬಾ ನೋವಾಗುತ್ತಿದೆ, ಕಿವಿಯೊಳಕ್ಕೆ ಏನೋ ಇದೆ ಎನ್ನಿಸುತ್ತಿದೆ, ಕಿವಿ ಕೂಡ ಸರಿಯಾಗಿ ಕೇಳುತ್ತಿಲ್ಲ ಎಂದು ಅವರು ಹೇಳಿದ್ದರು.

ವೈದ್ಯರು ಸ್ಕ್ಯಾನಿಂಗ್‌ ಮಾಡಿದಾಗ ಅಲ್ಲಿ ಕ್ರಿಮಿಯೊಂದು ಕಂಡುಬಂದಿದೆ. ನಂತರ ಪರೀಕ್ಷೆ ಮಾಡಿದಾಗ ಅದು ಜೇಡರ ಹುಳು ಎಂದು ತಿಳಿದಿದೆ. ಮಾತ್ರವಲ್ಲದೇ ಒಂದು ದಿನ ಅದು ಕಿವಿಯೊಳಕ್ಕೆ ಜೀವಂತ ಆಗಿರುವುದೂ ತಿಳಿದಿದೆ. ಇದನ್ನು ನೋಡುತ್ತಿದ್ದಂತೆಯೇ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಂತರ ವೈದ್ಯರು ಜೇಡರ ಹುಳುವನ್ನು ಇಲೆಕ್ಟ್ರಿಕ್ ಓಟೋಸ್ಕೋಪ್ ಬಳಸಿ ಹೊರ ತೆಗೆದಿದ್ದಾರೆ. ಇದು ಗಾತ್ರದಲ್ಲಿ ಬಹಳ ದೊಡ್ಡದಾಗಿ ಇರುವುದು ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net