More

    ಡಿಜೆಹಳ್ಳಿ ಗಲಭೆ: ಕಾಲ್​ ರೆಕಾರ್ಡ್ಸ್​ ಲೀಕ್​ ಆದ್ರೇನು? ಹೆದರಬೇಡಿ ಎಂದು ಕೈ ನಾಯಕರಿಗೆ ಡಿಕೆಶಿ ಅಭಯ

    ಬೆಂಗಳೂರು: ಆಗಸ್ಟ್​ 11ರಂದು ನಡೆದಿರುವ ಡಿ.ಜೆ.ಹಳ್ಳಿ, ಕೆ.ಜಿಹಳ್ಳಿ ಭಯಾನಕ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್​ನ ಮಾಜಿ ಮೇಯರ್​ ಸಂಪತ್​ಕುಮಾರ್​ ಅವರು ಗಲಭೆಕೋರರ ನಡುವೆ ನಡೆಸಿರುವ ಕಾಲ್​ ರೆಕಾರ್ಡ್​ಗಳು ಲೀಕ್​ ಆಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.

    ಇದು ಬಿಜೆಪಿ ನಡೆಸುತ್ತಿರುವ ಕುತಂತ್ರ. ಡಿಜೆಹಳ್ಳಿ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ, ಪೊಲೀಸರು ಸರ್ಕಾರದ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಗಲಭೆ ನಡೆದ ದಿನ ಸಂಪತ್​ರಾಜ್​ ಮೊಬೈಲ್​ಫೋನ್​ನಿಂದ ಹೊರಹೋಗಿರುವ ಮತ್ತು ಒಳಬಂದಿರುವ ಕರೆಗಳ ದಾಖಲೆಗಳು ಪೊಲೀಸರಿಗೆ ಸಿಕ್ಕಿದ್ದು ಅದು ಲೀಕ್​ ಆಗಿದೆ. ಸಂಪತ್​ರಾಜ್​ ಹಾಗೂ ಗಲಭೆ ನಡೆಸಿ, ದಾಂಧಲೆ ಸೃಷ್ಟಿಸಿ, ಸುತ್ತಮುತ್ತಲೂ ಬೆಂಕಿ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪ ಹೊತ್ತ ಕೆಲವರ ನಡುವೆ ನಡೆದಿರುವ ಅಂದು ನಡೆದಿರುವ ಮಾತುಕತೆಯ ಕಾಲ್​ ರೆಕಾರ್ಡ್ಸ್​ ಇದಾಗಿದೆ.

    ಕಾಲ್​ ರೆಕಾರ್ಡ್ಸ್​ ಫುಲ್​ ಡಿಟೇಲ್ಸ್​ ಇಲ್ಲಿದೆ ನೋಡಿ: ಡಿಜೆಹಳ್ಳಿ ಗಲಭೆಕೋರರೊಂದಿಗೆ ಸಂಪರ್ಕ- ಕಾಲ್​ ರೆಕಾರ್ಡ್ಸ್​ನಿಂದ ‘ಸಿಕ್ಕಿಬಿದ್ದ’ ಸಂಪತ್​ರಾಜ್​

    ಇದರ ಬಗ್ಗೆ ಕಿಡಿಕಾರಿರುವ ಡಿ.ಕೆ.ಶಿವಕುಮಾರ್​ ಸಂಪತ್ ರಾಜ್ ಫೋನ್​ಕಾಲ್ ಡಿಟೇಲ್ ಲೀಕ್ ಆಗಿದ್ದು ಹೇಗೆ? ತಮ್ಮ ವೈಫಲ್ಯಗಳನ್ನು ಮುಚ್ಚೋಕೆ ಬಿಜೆಪಿ ಇಂತಹ ಪ್ರಯತ್ನ ಮಾಡುತ್ತಿದೆ, ಮೊದಲೇ ಕಾಲ್​ ರೆಕಾರ್ಡ್​ಗಳನ್ನು ಲೀಕ್​ ಮಾಡಿದರೆ ತನಿಖೆ ನಡೆಸುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ.ಶಿ, ಈ ಘಟನೆಯಿಂದ ಯಾರೂ ವಿಚಲಿತರಾಗಬೇಕಿಲ್ಲ. ಕಾಂಗ್ರೆಸ್ ಪಕ್ಷ ಹೆದರುವ ಪ್ರಶ್ನೆ ಇಲ್ಲ ಎಂದು ಅಭಯ ನೀಡಿದರು.

    ಇದೇ ವೇಳೆ, ಗಲಭೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಸಂಪತ್​ರಾಜ್​ ಅವರ ನೆರವಿಗೆ ಡಿ.ಕೆ.ಶಿವಕುಮಾರ್​ ನಿಂತಿದ್ದಾರೆ ಎನ್ನಲಾಗುತ್ತಿದೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದಾರೆ ಎಂಬ ಮಾತೂ ಕೇಳಿಬರುತ್ತಿರುತ್ತದೆ. ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್​, ಸಂಪತ್ ರಾಜ್ ಉಚ್ಛಾಟನೆಗೆ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಒತ್ತಾಯವನ್ನು ಮಾಧ್ಯಮಗಳ ಮುಂದೆ ಮಾಡುವುದಲ್ಲ, ಪಕ್ಷದ ವೇದಿಕೆಯಲ್ಲಿ ಚರ್ಚಿಸಲಿ, ಆಮೇಲೆ ನೋಡೋಣ ಎಂದಿದ್ದಾರೆ.

    ಇದೇ ವೇಳೆ, ಗಲಭೆ ವಿಚಾರದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರನ್ನು ಪಕ್ಷ ಕೈಬಿಟ್ಟಿದ್ದು, ಸಂಪತ್​ರಾಜ್​ ನೆರವಿಗೆ ಧಾವಿಸಿರುವುದಾಗಿ ಕೆಲವು ಮೂಲಗಳು ಹೇಳುತ್ತಿವೆ.

    ಬಿಎಸ್​ವೈ ಅಧಿಕಾರ ಮುಗೀತು- ಉ.ಕದವರೇ ಮುಂದಿನ ಸಿಎಂ: ಯತ್ನಾಳ್​ ಸಿಡಿಸಿದರು ಬಾಂಬ್​

    ಬ್ರಿಟನ್​ ಪ್ರಧಾನಿಗೆ ಸಂಬಳ ಸಾಕಾಗುತ್ತಿಲ್ಲವಂತೆ! ಇನ್ಫಿ ಅಳಿಯನಿಗೆ ಒಲಿಯಲಿದೆಯೇ ಈ ಪಟ್ಟ?

    ರೈಲಲ್ಲಿ ಹೋದ ಕಳ್ಳನನ್ನು ಹಿಡಿಯಲು ವಿಮಾನವೇರಿ ಹೊರಟ ಬೆಂಗಳೂರು ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts