ಕೊನೇ ಕ್ಷಣದಲ್ಲಿ ಮೋದಿಗೆ ತಪ್ಪಿಹೋಯ್ತು ಡಿಸಿಎಂ ಪಟ್ಟ!

modi
Published on

ಪಟ್ನಾ: ಕುತೂಹಲದ ಬೆಳವಣಿಗೆಯಲ್ಲಿ ಬಿಹಾರದ ಉಪಮುಖ್ಯಮಂತ್ರಿ ಸ್ಥಾನದಿಂದ ಸುಶೀಲ್​ಕುಮಾರ್​ ಮೋದಿ ಅವರನ್ನು ಕೈಬಿಡಲಾಗಿದೆ.

ಮುಖ್ಯಮಂತ್ರಿ ಹುದ್ದೆಗೆ ಶಾಸಕಾಂಗ ನಾಯಕನ ಆಯ್ಕೆಗಾಗಿ ನಡೆದ ಎನ್.ಡಿ.ಎ. ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಕೊನೆ ಕ್ಷಣದವರೆಗೂ ಮೋದಿ ಅವರ ಹೆಸರೇಹೇಳಿಬಂದಿತ್ತು. ಅವರೇ ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿತ್ತು.

ಆದರೆ ಕೊನೆಯ ಕ್ಷಣದಲ್ಲಿ ಉಪ ಮುಖ್ಯಮಂತ್ರಿಗಳಾಗಿ ತಾರ್ ಕಿಶೋರ್ ಪ್ರಸಾದ್, ರೇಣು ದೇವಿ ಅವರನ್ನು ಆಯ್ಕೆಮಾಡಲಾಗಿದೆ. ಈ ಮೂಲಕ ಸುಶೀಲ್​ಕುಮಾರ್​ ಮೋದಿ ಅವರ ಹೆಸರನ್ನು ಕೈಬಿಟ್ಟಿರುವುದಾಗಿ ಮೂಲಗಳು ಹೇಳಿವೆ.

ಈ ಕುರಿತು ವಿಷಯ ತಿಳಿಯುತ್ತಲೇ ಟ್ವೀಟ್​ ಮಾಡಿದ ಸುಶೀಲ್​ಕುಮಾರ್ ಮೋದಿ, ಬಿಜೆಪಿ ಹಾಗೂ ಸಂಘ ಪರಿವಾರ ನನಗೆ ಬಹಳಷ್ಟು ಕೊಟ್ಟಿದೆ. 40 ವರ್ಷದ ರಾಜಕೀಯದಲ್ಲಿ ಬಿಜೆಪಿ ನನಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಟ್ಟಿದೆ. ಕಾರ್ಯಕರ್ತ ಎಂಬ ಹುದ್ದೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಜತೆಗೆ, ಪಕ್ಷ ನೀಡುವ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net