

ಬೆಂಗಳೂರು: ಕೋವಿಡ್- 19 ಸಮಯದಲ್ಲಿ ಹೊಸ ವ್ಯಾಪಾರ ಶುರು ಮಾಡಲು ಹೊರಟ ಉದ್ಯಮಿಗೆ ಮತ್ತು ಕರೊನಾ ಚಿಕಿತ್ಸೆಗೆ ಯಂತ್ರ, ಔಷಧ ಖರೀದಿಗೆ ಮುಂದಾಗುವರಿಗೂ ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ. ಆಕ್ಸಿಜನ್ ಪೂರೈಕೆ ಯಂತ್ರ ಕೊಡುವುದಾಗಿ ವ್ಯಕ್ತಿಯೊಬ್ಬರಿಂದ 12.69 ಲಕ್ಷ ರೂ. ಪಡೆದು ವಂಚನೆ ಮಾಡಿದ್ದರೇ ಮತ್ತೊಂದು ಪ್ರಕರಣದಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದು ಏಜೆನ್ಸಿ ಆಮಿಷವೊಡ್ಡಿ ವ್ಯಾಪಾರಿಯಿಂದ 4.70 ಲಕ್ಷ ರೂ. ಪಡೆದು ಮಾಡಿದ್ದಾರೆ.
ಭೂಪಸಂದ್ರದ 48 ವರ್ಷದ ವ್ಯಕ್ತಿ, ಕೋವಿಡ್ ಚಿಕಿತ್ಸೆ ಕೊಡುವಾಗ ಬಳಸುವ ಆಕ್ಸಿಜನ್ ಯಂತ್ರ ಖರೀದಿಸಲು ಆನ್ಲೈನ್ನಲ್ಲಿ ಸರ್ಚ್ ಮಾಡಿ ಸುರಭಿ ಎಂಟರ್ ಪೆ.ಲಿ.ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ಆಕ್ಸಿಜನ್ ಯಂತ್ರ ಕಳುಹಿಸುವುದಾಗಿ ಹೇಳಿ ಮೇ 2ರಿಂದ 8ವರೆಗೂ ಹಂತ ಹಂತವಾಗಿ ನಾನಾ ಕಾರಣ ಹೇಳಿ 12.69 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ಮತ್ತೆ ಹಣ ಕೇಳಿದ್ದಾಗ ಅನುಮಾನ ಬಂದು ತಾನು ಕೊಟ್ಟಿರುವ ಹಣ ವಾಪಸ್ ಕೇಳಿದ್ದಾರೆ. ಆರೋಪಿ ಕರೆ ಸ್ಥಗಿತ ಮಾಡಿದ್ದಾನೆ. ನೊಂದ ವ್ಯಕ್ತಿ, ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜಾಲಹಳ್ಳಿಯ 42 ವರ್ಷದ ವ್ಯಕ್ತಿ, ತನ್ನ ತಾಯಿಗೆ ಅನಾರೋಗ್ಯದ ಆನ್ಲೈನ್ನಲ್ಲಿ ಔಷಧ ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಔಷಧ 20 ಸಾವಿರ ರೂ. ಆಗುತ್ತದೆ. ಮೊದಲು ಹಣ ನೀಡಿದರೇ ಮನೆಗೆ ಪಾರ್ಸೆಲ್ ಕಳುಹಿಸುವುದಾಗಿ ಹೇಳಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ, ಎಷ್ಟು ಹೊತ್ತಾದರೂ ಔಷಧ ಬಾರದೆ ಇದ್ದಾಗ ವಾಪಸ್ ಕರೆ ಮಾಡಿದ್ದಾರೆ. ಅಷ್ಟೊತ್ತಿಗೆ ಅಪರಿಚಿತ ವ್ಯಕ್ತಿ ಮೊಬೈಲ್ ನಂಬರ್ ಸ್ವಿಚ್ ಆ್ ಆಗಿತ್ತು. ಕೊನೆಗೆ ಗ್ರಾಹಕ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಎಲ್ಲ ಪ್ರಕರಣಗಳು ಒಂದೇ ದಿನ ನಡೆದಿದ್ದು, ಉತ್ತರ ವಿಭಾಗ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆಮ್ಡೆಸಿವಿರ್ ಏಜೆನ್ಸಿ ಸೋಗದಲ್ಲಿ ವಂಚನೆ
ಬನಶಂಕರಿ 2ನೇ ಹಂತದಲ್ಲಿ ಔಷಧ ಸರಬರಾಜು ಏಜೆನ್ಸಿ ನಡೆಸುವ ವ್ಯಾಪಾರಿ, ಕರೊನಾ ಸೋಂಕಿಗೆ ನೀಡುತ್ತಿರುವ ರೆಮ್ಡೆಸಿವಿರ್ ಚುಚ್ಚುಮದ್ದು ಏಜೆನ್ಸಿ ಪಡೆಯಲು ಹುಡುಕಾಟ ನಡೆಸುತ್ತಿದ್ದರು. ಆಗ ಗುಜರಾತ್ ಮೂಲದ ಕೌಶಲ್ ಮಹೇಂದ್ರ ಕುಮಾರ್ ಎಂಬಾತ ಕರೆ ಮಾಡಿ ರೆಮ್ಡೆಸಿವಿರ್ ಏಜೆನ್ಸಿ ಕೊಡಿಸುವುದಾಗಿ ಹೇಳಿ ನಂಬಿಸಿ 4.70 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆನಂತರ ವ್ಯಾಪಾರಿಯ ಕರೆ ಸ್ವೀಕರಿಸಿದೆ ಇದ್ದಾಗ ಅವರ ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ದಣ ವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.