

ಭಾರತೀಯರು ದೇವರು ಎಂದು ಪೂಜಿಸುವ ಹಸುಗಳ ಕಳ್ಳಸಾಗಣೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ದನ ಕರುಗಳನ್ನು ಕದ್ದು, ಪೊಲೀಸರ ಕಣ್ಣು ತಪ್ಪಿಸಿ ಅವುಗಳನ್ನು ಕಸಾಯಿ ಖಾನೆಗಳಿಗೆ ತಳ್ಳಿ ಅವುಗಳ ಹತ್ಯೆ ಮಾಡುವುದು ಒಂದೆಡೆಯಾದರೆ ಬೇರೆ ಬೇರೆ ದೇಶಗಳಿಗೆ ಅಕ್ರಮವಾಗಿ ಇವುಗಳನ್ನು ಸಾಗಾಟ ಮಾಡುವುದು ಇನ್ನೊಂದೆಡೆ.
ಅಂಥದ್ದೇ ಒಂದು ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಾರತದ ಗಡಿಯಿಂದ ಇನ್ನೊಂದು ದೇಶಕ್ಕೆ ಹಸುಗಳನ್ನು ನಿರಾಯಾಸವಾಗಿ ಸಾಗಣೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಬಾಂಗ್ಲಾದೇಶಕ್ಕೆ ಈ ಹಸುಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂದು ವೈರಲ್ ಸುದ್ದಿಯಲ್ಲಿ ಹೇಳಲಾಗುತ್ತಿದ್ದರೂ, ಯಾವ ದೇಶ ಎನ್ನುವುದು ಸ್ಪಷ್ಟವಾಗಿಲ್ಲ.
ಆದರೆ ಹಗ್ಗ ಮತ್ತು ಕೋಲಿನ ಸಹಾಯದಲ್ಲಿ ಹಸುವನ್ನು ಇತ್ತ ಕಡೆಯಿಂದ ಎತ್ತಿ ಗಡಿಯ ಆಚೆ ಇರುವವರಿಗೆ ಯಾವುದೇ ಖರ್ಚು ಇಲ್ಲದೇ ಸಾಗಣೆ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಗಡಿ ಕಾಯುವ ಯೋಧರ ಕಣ್ಣು ತಪ್ಪಿಸಿ ಇಂಥದ್ದೊಂದು ಕೃತ್ಯ ನಡೆಯುತ್ತಿರುವುದು ಮಾಮೂಲಾಗಿದೆ ಎಂದು ಹೇಳಲಾಗುತ್ತಿದೆ. ಹಸುವಿಗೆ ಪ್ರಜ್ಞೆ ತಪ್ಪಿಸಿ ಅದನ್ನು ಎತ್ತಿ ಸಾಗಣೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಿಸುತ್ತದೆ. ನಂತರ ಈ ಕಳ್ಳಸಾಗಣಿಕೆದಾರರು ಬೇಲಿಯನ್ನು ದಾಟಿ ನಿರಾಯಾಸವಾಗಿ ಅತ್ತ ಕಡೆ ಹೋಗುತ್ತಿರುವುದನ್ನೂ ಇದರಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ: