ಕಾಮೆಡ್​-ಕೆ ಪರೀಕ್ಷಾರ್ಥಿಗಳಿಗೆ ಗುಡ್​ನ್ಯೂಸ್​: ಕೌನ್ಸೆಲಿಂಗ್​ ವೇಳಾಪಟ್ಟಿ ಗೊಂದಲ ಈ ವರ್ಷ ಇರಲ್ಲ...

COMEDK
Published on

ಬೆಂಗಳೂರು: ಈ ವರ್ಷ ನಾವು ಸರ್ಕಾರ ನೀಡುವ ವೇಳಾಪಟ್ಟಿಗೆ ಕಾಯ್ದು ಕುಳಿತುಕೊಳ್ಳುವುದಿಲ್ಲ. ನಾವು ನಿಗದಿ ಮಾಡಿದ ದಿನಾಂಕದಲ್ಲೇ ಕೌನ್ಸೆಲಿಂಗ್ ನಡೆಸುತ್ತೇವೆಂದು ಕಾಮೆಡ್-ಕೆ ಕಾರ್ಯಕಾರಿ ಕಾರ್ಯದರ್ಶಿ ಡಾ.ಕುಮಾರ್ ಹೇಳಿದ್ದಾರೆ.

ಪ್ರತಿ ವರ್ಷ ನಾವು ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಒಪ್ಪಂದ ಮಾಡಿಕೊಂಡು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಅನುಗುಣವಾಗಿ ನಾವು ಕೌನ್ಸೆಲಿಂಗ್ ದಿನಾಂಕ ಪ್ರಕಟಿಸುತ್ತಿದ್ದೆವು.

ಆದರೆ, ಕೆಇಎ ನಿಗದಿ ಪಡಿಸಿದ್ದ ದಿನಾಂಕದಂದು ಕೌನ್ಸೆಲಿಂಗ್ ನಡೆಸುತ್ತಿರಲಿಲ್ಲ. ಪ್ರತಿ ಬಾರಿ ಮುಂದೂಡಿಕೆ ಮಾಡಿಕೊಂಡು ಬರುತ್ತಿತ್ತು. ಇದರಿಂದ ನಮ್ಮ ಕೌನ್ಸೆಲಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಇದೇ ಕಾರಣದಿಂದ ಹೆಚ್ಚು ಸೀಟುಗಳು ಭರ್ತಿಯಾಗುತ್ತಿರಲಿಲ್ಲ. ಆದರೆ, ಈ ಬಾರಿ ನಾವು ಸರ್ಕಾರದ ವೇಳಾಪಟ್ಟಿಗೆ ಕಾಯ್ದುಕುಳಿತುಕೊಳ್ಳುವುದಿಲ್ಲ. ನಾವು ಕೌನ್ಸೆಲಿಂಗ್ ನಡೆಸುವ ವೇಳಾಪಟ್ಟಿಯನ್ನು ರೂಪಿಸಿ ಪ್ರಕಟಿಸುತ್ತೇವೆ. ಆ ಪ್ರಕಾರವಾಗಿಯೇ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕಳೆದ ಬಾರಿ ಕೌನ್ಸೆಲಿಂಗ್ ಮಾಡುವುದು ವಿಳಂಬವಾದ ಕಾರಣ ಬಹುತೇಕರು ಕೆಇಎ ಮೂಲಕ ಸೀಟು ಪಡೆದುಕೊಂಡರು. ಇದರಿಂದಾಗಿ ಕಳೆದ ವರ್ಷ ಕೇವಲ 4,900 ಸೀಟುಗಳು ಮಾತ್ರ ಭರ್ತಿಯಾಗಿದ್ದವು. ಈ ಹಿಂದೆ 7-8 ಸಾವಿರ ಸೀಟುಗಳು ಭರ್ತಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾವು 3ರಿಂದ 4 ಬಾರಿ ಕೌನ್ಸೆಲಿಂಗ್ ನಡೆಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net