More

    ಅತ್ತ ವರ.. ಇತ್ತ ವಧು… ಮಧ್ಯೆ ಪ್ರವಾಹ… ಹಾರಿಬಂದು ಮದುಮಗನಿಗೆ ಕಿಸ್‌ ಕೊಟ್ಟಳು ಮದುಮಗಳು…

    ವಿಂಗ್‌ಹ್ಯಾಮ್‌ (ಆಸ್ಟ್ರೇಲಿಯಾ): ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವಾಗ ಭಯಾನಕವಾಗಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ಮದುವೆ ಮಂಟಪಕ್ಕೆ ಹೋಗುವ ರಸ್ತೆಗಳೇ ಬಂದ್‌ ಆದರೆ ಏನಾಗಬೇಡ ಮದುಮಕ್ಕಳ ಪರಿಸ್ಥಿತಿ?

    ಅಂಥದ್ದೇ ಒಂದು ಸ್ಥಿತಿ ಆಸ್ಟ್ರೇಲಿಯಾದ ವಿಂಗ್‌ಹ್ಯಾಮ್‌ನಲ್ಲಿ ನಡೆದಿದೆ. ನಮ್ಮ ಹಳ್ಳಿಪ್ರದೇಶಗಳಲ್ಲಿ ಇಂಥ ಘಟನೆಗಳು ಅವೆಷ್ಟೋ ನಡೆದರೂ ಅದು ವೈರಲ್‌ ಆಗುವುದಿಲ್ಲ ಅನ್ನಿ. ಆದರೆ ವಿಂಗ್‌ಹ್ಯಾಮ್‌ನಲ್ಲಿ ನಡೆದಿರುವ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ.

    ಇದಕ್ಕೆ ಕಾರಣ, ಮದುವೆಯ ದಿನ ಒಂದು ಕಡೆ ವರ ವೇಯ್ನ್ ಬೆಲ್ ಇದ್ದರೆ, ಇನ್ನೊಂದು ಕಡೆ ವಧು ಕೇಟ್‌ ಇದ್ದಾಳೆ. ನಡುವೆ ಮಳೆಯಿಂದಾಗಿ ರಸ್ತೆ ಬಂದಾಗಿ ಹೋಗಿದೆ. ಭಾರೀ ಮಳೆಯ ಕಾರಣದಿಂದ ಉಂಟಾದ ಪ್ರವಾಹದ ಕಾರಣ ಕೇಟ್ ಪಾಲಕರಿಗೂ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಅತ್ತ ಮದುಮಗ ಚರ್ಚ್‌ನಲ್ಲಿ ಉಂಗುರ ಹಿಡಿದು ಕಾದು ಕುಳಿತಿದ್ದ. ಅಲ್ಲಿಂದ ಇಲ್ಲಿ ಇದ್ದುದು ಕೇವಲ ಐದು ನಿಮಿಷದ ದಾರಿ. ಆದರೆ ಅಷ್ಟು ಕೂಡ ಪ್ರವಾಹದಿಂದ ಹೋಗಲು ಸಾಧ್ಯವಾಗಲಿಲ್ಲ.

    ಮಧ್ಯಾಹ್ನ 3 ಗಂಟೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಮದುವೆಯನ್ನು ಯಾವುದೇ ಕಾರಣಕ್ಕೂ ಮುಂದೂಡಲು ಈ ಜೋಡಿ ಹಾಗೂ ಕುಟುಂಬಸ್ಥರಿಗೆ ಇಷ್ವವಿರಲಿಲ್ಲ. ಇದೇ ಕಾರಣಕ್ಕೆ .ಈ ಜೋಡಿಗೆ ಐಡಿಯಾ ಒಂದು ಹೊಳೆದಿದೆ. ನಂತರ ತುರ್ತು ವಿಮಾನವನ್ನು ತರಿಸಿಕೊಂಡು ವರ ಇದ್ದಲ್ಲಿಗೆ ವಧು ಹೋಗಿದ್ದಾಲೆ.
    ಕೇವಲ 5 ನಿಮಿಷದ ದಾರಿ ಸವೆಸಲು ವಿಮಾನವೇರಿ ಹೊರಟ ವಧು, ನಿಗದಿಯ ಮುಹೂರ್ತಕ್ಕಿಂತ ತುಸು ಲೇಟಾಗಿ, ವರನಲ್ಲಿಗೆ ಹೋಗಿ ಕಿಸ್‌ ಕೊಟ್ಟು ನಂತರ ಉಂಗುರು ಬದಲಾಯಿಸಿಕೊಂಡು ಮದುವೆ ಶಾಸ್ತ್ರ ಮುಗಿಸಿದ್ದಾಳೆ.

    ತಮ್ಮ ಮದುವೆಯ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಕೇಟ್ ಜೀವನದುದ್ದಕ್ಕೂ ಸ್ಮರಿಸಬಲ್ಲ ಘಟನೆಯ ಅನುಭವವನ್ನು ಹಂಚಿಕೊಂಡಿದ್ದಾಳೆ. ಇದೀಗ ಭಾರಿ ವೈರಲ್‌ ಆಗಿದೆ.

    ಆಗ ಸಿಡಿ ಕೇಸ್‌ ಅಂದ್ರು… ಈಗ ಒಂದೇ ಹೆಂಡ್ತಿ ಅಂದ್ರು… ಒಟ್ನಲ್ಲಿ ಪಲಾಯನ ಮಾಡಲು ಏನೋ ಒಂದ್‌ ಬೇಕು…

    ನನ್ನ ಜೇಬಲ್ಲಿ ಬಾಂಬ್‌ ಇದೆ… ತಡ್ಕೊಳಿ… ಸದ್ಯ ಗಪ್‌ಚುಪ್‌ ಇದ್ದೇನೆ… ಹೊರಹಾಕಿದ್ರೆ ಅಷ್ಟೇ…

    ಬ್ಯಾಂಕ್‌ನಲ್ಲಿ ಕೆಲಸ ಇದೆಯಾ? ಬೇಗ ಬೇಗ ಮುಗಿಸಿಕೊಳ್ಳಿ: ಶುರುವಾಗಲಿದೆ ಸರಣಿ ರಜೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts