More

    ವಿದೇಶದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ವಿವೇಕಾನಂದರು

    ಸವಣೂರ: ಭಾರತ ಮಾತೆಗೆ ವಿಶ್ವದಲ್ಲಿ ಗೌರವ ಹೆಚ್ಚಿಸಿದ ಕೀರ್ತಿ ಶ್ರೀ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ವಾಗ್ಮಿ ಸವೀನಕುಮಾರ ಸಾಸನೂರ ತಿಳಿಸಿದರು.


    ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಪಟ್ಟಣದ ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ, ಸಾಂಸ್ಕೃತಿಕ ಮತ್ತು ಎನ್​ಎಸ್​ಎಸ್ ವಿಭಾಗಗಳ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಸಂಪನ್ನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


    ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ಬಸವರಾಜ ಚಳ್ಳಾಳ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಯುವ ಜನತೆಗಾಗಿ ವಿಚಾರ ವಿನಿಮಯ, ಪದವಿ ನಂತರ ಹಾಗೂ ಭವಿಷ್ಯತ್ತಿಗಾಗಿ ತರಬೇತಿ ನೀಡಲಾಯಿತು.


    ಜೆಸಿಐ ಪದಾಧಿಕಾರಿಗಳು, ಎನ್​ಎಸ್​ಎಸ್ ಶಿಬಿರಾರ್ಥಿಗಳು, ಕಾಲೇಜ್ ಸಿಬ್ಬಂದಿ ಹಾಗೂ ಇತರರಿಂದ ಶ್ರಮದಾನ ಕೈಗೊಳ್ಳಲಾಯಿತು. ಇದೇ ವೇಳೆ ಯುವಜನತೆಗೆ ಸಾಮಾಜಿಕ ಜಾಲತಾಣ ಪೂರಕವೋ? ಮಾರಕವೋ? ಚರ್ಚಾ ಸ್ಪರ್ಧೆ ಏರ್ಪಡಿಸಲಾಯಿತು.
    ಕಾಲೇಜ್ ಪ್ರಾಚಾರ್ಯ ಗಂಗಾ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.


    ಜೆಸಿಐ ಪದಾಧಿಕಾರಿಗಳಾದ ಪ್ರಕಾಶಸಿಂಗ್ ಜಮಾದಾರ, ವಿದ್ಯಾಧರ ಕುತನಿ, ಯೋಗೇಂದ್ರ ಜಂಬಗಿ, ಶಂಕ್ರಯ್ಯ ಹಿರೇಮಠ, ತೇಜಸ್ವಿನಿ ಕೊಂಡಿ, ಪ್ರೇಮಾ ಚಳ್ಳಾಳ, ಮಧುಕರ ಜಾಲಿಹಾಳ, ಮಹೇಶ ಆರೇರ, ಗಣೇಶಗೌಡ ಪಾಟೀಲ, ಡಾ. ಪರಶುರಾಮ ಹೊಳಲ, ಇತರರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಹಜ್ಜುಮಾ ನದಾಫ ಹಾಗೂ ಆನಂದ ಮತ್ತಿಗಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


    ಚರ್ಚಾ ಸ್ಪರ್ಧೆಯಲ್ಲಿ ಹಜ್ಜುಮಾ ನದಾಫ್ ಪ್ರಥಮ, ಕಾವ್ಯಾ ಹೈಗರ್ ದ್ವಿತೀಯ ಹಾಗೂ ಅಜಯ್ ಕನವಳ್ಳಿಮಠ ತೃತೀಯ ಸ್ಥಾನ ಪಡೆದರು.
    ಭಾಷಣ ಸ್ಪರ್ಧೆಯಲ್ಲಿ ಕಾವ್ಯಾ ಹೈಗರ್ ಪ್ರಥಮ, ಕವಿತಾ ಸೂರಣಗಿ ದ್ವಿತೀಯ ಹಾಗೂ ಹಜ್ಜುಮಾ ನದಾಫ್ ತೃತೀಯ ಸ್ಥಾನ ಪಡೆದರು.
    ದೇಶಭಕ್ತಿ ಗೀತೆ ಸ್ಪರ್ಧರ್ೆಯಲ್ಲಿ ಸೌಜನ್ಯಾ ಗಣಾಚಾರಿ ಪ್ರಥಮ, ಮೇಘಾ ಕೆಲಗೇರಿ ದ್ವಿತೀಯ ಹಾಗೂ ಸುನೀತಾ ಲಮಾಣಿ ತೃತೀಯ ಸ್ಥಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts