'ಚಿರು ಸ್ಮೋಕ್​ ಮಾಡ್ದಾಗ ಬೆಲ್ಟ್​ನಿಂದ ಹೊಡೆದಿದ್ದೆ, ಅವನ ಮಗನನ್ನೂ ನಾನೇ ಲಾಂಚ್​ ಮಾಡುವೆ'

1285947
Published on

ಬೆಂಗಳೂರು: ಎಲ್ಲರ ಬಾಯಲ್ಲಿ ಚಿರು ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ನಟ ಚಿರಂಜೀವಿ ಸರ್ಜಾ ಅವರು ಮೃತಪಟ್ಟು ಇಂದಿಗೆ ಎರಡು ವರ್ಷ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಚಿರು ಸಮಾಧಿಗೆ ಇಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಚಿರಂಜೀವಿ ಮಾವ ಅರ್ಜುನ್ ಸರ್ಜಾ ಚಿರು ಜತೆಗೆ ತಾವು ಕಳೆದ ದಿನಗಳನ್ನು ಮೆಲುಕು ಹಾಕಿದರು.

ಚಿರು ಒಂದು ದಿನ ಸ್ಮೋಕ್​ ಮಾಡುವುದನ್ನು ನೋಡಿದ್ದೆ. ಬೆಲ್ಟ್​ನಿಂದ ಹೊಡೆದಿದ್ದೆ. ಆ ದಿನ ಇಂದಿಗೂ ನನ್ನ ಕಣ್ಣಮುಂದೆ ಇದೆ ಎಂದು ಅರ್ಜುನ್​ ಸರ್ಜಾ ಭಾವುಕರಾಗಿ ಹೇಳಿದರು. ಚಿರುನನ್ನು ಚಿರುನ ಎತ್ತಿ ಆಡಿಸಿದ್ದೆ, ನಾನೇ ಶಾಲೆಗೆ ಬಿಟ್ಟು ಬರುತ್ತಿದ್ದೆ. ಆಕ್ಟಿಂಗ್ ಸ್ಕೂಲ್‌ಗೆ ಕಳುಹಿಸಿದ್ದೆ. ಈಗ ಅವನು ನಮ್ಮ ಜತೆ ಇಲ್ಲ ಎಂದರೆ ನಂಬಲಿಕ್ಕೇ ಆಗುತ್ತಿಲ್ಲ ಎಂದರು.

ನನ್ನ ಅಣ್ಣನೇ ಚಿರು ಸಿನಿಮಾ ನಿರ್ದೇಶನ ಮಾಡಿದ್ದು, ನಾನು ಆ ಸಿನಿಮಾ ನಿರ್ಮಾಣ ಮಾಡಿ ವಾಯುಪುತ್ರ ಮೂಲಕ ಲಾಂಚ್ ಮಾಡಿದ್ವಿ. ಚಿರು ಅಗಲಿಕೆ ಮಾಸದ ಗಾಯ. ಅವನ ಮಗ ನಮಗೆ ನೆಮ್ಮದಿ ಕೊಡುತ್ತಿದ್ದಾನೆ. ಅವನು ಇಲ್ಲ ಅನ್ನುವ ಕೊರಗು ಸ್ವಲ್ಪ ಕಡಿಮೆ ಮಾಡಿದ್ದಾನೆ. ಚಿರುನನ್ನು ನಾವೇ ಲಾಂಚ್ ಮಾಡಿದ್ದು, ಅದರಂತೆ ಅವನ ಮಗನನ್ನು ನಾನೇ ಲಾಂಚ್ ಮಾಡುತ್ತೇನೆ’ ಎಂದು ಅರ್ಜುನ್​ ಸರ್ಜಾ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net