ಅಮ್ಮನ ಅಕ್ರಮಕ್ಕೆ ಮಗಳೇ ಸಾಕ್ಷಿ: ಕರುಳಕುಡಿಯನ್ನೇ ಸಾಯಿಸಿದಾಕೆಗೆ ಜೀವಾವಧಿ ಶಿಕ್ಷೆ

chamrajnagara court
Published on

ಚಾಮರಾಜನಗರ: ಅಕ್ರಮ ಸಂಬಂಧದಿಂದ ಹುಟ್ಟಿದ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮಹಿಳೆಗೆ ಚಾಮರಾಜನಗರ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

ಮದುವೆಯಾಗಿ ಮಗಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಹನೂರು ತಾಲೂಕಿನ ಚಿಕ್ಕಮಾಲಾಪುರದ ಚಂದ್ರಮ್ಮ, ಈ ಸಂಬಂಧದಿಂದ ಹುಟ್ಟಿದ ಮಗುವನ್ನು ಬ್ಲೇಡ್‌ನಿಂದ ಕೊಯ್ದು ಕೊಲೆ ಮಾಡಿದ್ದಳು!

ತಾಯಿಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತನ್ನ ತಾಯಿ ಮಾಡಿರುವ ಬರ್ಬರ ಕೃತ್ಯದ ಬಗ್ಗೆ ಖುದ್ದು ಮಗಳೇ ಸಾಕ್ಷಿ ನೀಡಿದ್ದಳು.

2015ರಲ್ಲಿ ಈ ಘಟನೆ ನಡೆದಿದೆ. ಐದು ವರ್ಷಗಳಿಂದ ಚಾಮರಾಜನಗರದ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಇದೀಗ ಆದೇಶ ಹೊರಬಿದ್ದಿದೆ. ಚಂದ್ರಮ್ಮಳಿಗೆ ಜೀವಾವಧಿ ಶಿಕ್ಷೆಯ ಜತೆಗೆ 15 ಸಾವಿರ ರೂಪಾಯಿಗಳ ದಂಡವನ್ನು ಕೋರ್ಟ್‌ ವಿಧಿಸಿದೆ.

ಅಕ್ರಮ ಸಂಬಂಧದಿಂದ ಚಂದ್ರಮ್ಮಾ 2015ರಲ್ಲಿ ಗರ್ಭಿಣಿಯಾಗಿದ್ದಳು. ಚಿಕಿತ್ಸೆಗಾಗಿ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಳು. ಗಂಡು ಮಗು ಹುಟ್ಟಿತ್ತು. ಮಗುವನ್ನು ಎಲ್ಲರಿಗೂ ತೋರಿಸಲು ಭಯಪಟ್ಟಿದ್ದ ಈಕೆ, ಅಲ್ಲಿಯೇ ಇದ್ದ ಬ್ಲೇಡ್‌ ಜತೆ ಮಗುವನ್ನು ತೆಗೆದುಕೊಂಡು ಎಸ್ಕೇಪ್‌ ಆಗಿದ್ದಳು.

ನಂತೆ ಅದೇ ಬ್ಲೇಡ್‌ನಿಂದ ಮಗುವನ್ನು ಕೊಲೆ ಮಾಡಿ ಕೆರೆಗೆ ಎಸೆದು ಪರಾರಿಯಾಗಿದ್ದಳು. ಮಗುವಿನ ಶವ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು. ತನ್ನ ತಾಯಿಯ ಅಕ್ರಮದ ಬಗ್ಗೆ ಅರಿವಿದ್ದ ಮಗಳೇ ತಾಯಿಯ ವಿರುದ್ಧ ಸಾಕ್ಷಿ ನುಡಿದಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net