More

    ಮದ್ಯ ನಿಷೇಧವಿದ್ದರೂ ಕುಡುಕರ ಹಾವಳಿ- ಅಧಿಕಾರಿಗಳ ಮೇಲೆ ಹಲ್ಲೆ: ವಾಹನ ಜಖಂ

    ಬೀದರ್‌: ದಾಳಿ ಮಾಡಲು ಬಂದ ಅಬಕಾರಿ ಅಧಿಕಾರಿಗಳ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿ ಕಾರು ಜಖಂಗೊಳಿಸಿದ ಘಟನೆ ಬೀದರ್ ನಗರದ ಪ್ರತಾಪ್ ನಗರದಲ್ಲಿ ನಡೆದಿದೆ.

    ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರನಲ್ಲಿ ಅಕ್ರಮ ಸಾರಾಯಿ ಮಾರಾಟ ದಂಧೆ ಜೋರಾಗಿ ಶುರುವಾಗಿದೆ. ಇದರ ವರದಿ ಆಧರಿಸಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಅಧಿಕಾರಿಗಳ ವಾಹನಗಳನ್ನು ಜಖಂ ಮಾಡಲಾಗಿದೆ.

    ಅಕ್ರಮ ಸಾರಾಯಿ ಮಾರಾಟದ ಅಡ್ಡೆ ಮೇಲೆ ‍ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ ಕಾರಿನ ಗಾಜು ಒಡೆದು ಹಾಕಲಾಗಿದೆ. ಕೂಡಲೇ ಅಬಕಾರಿ ಡೈವೈಎಸ್ಪಿ‌ ಆನಂದ, ಸರ್ಕಲ್ ಇನ್ಸ್ಪೆಕ್ಟರ್ ತ್ರಿವೇದಿ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಗಲಾಟೆ ಮಾಡುತ್ತಿದ್ದ ಖದೀಮರಿಗೆ ಲಾಠಿ ರುಚಿ ತೋರಿಸಿ ಬಂಧಿಸಿದ್ದಾರೆ.ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಸಂಜುಕುಮಾರ್, ನಂದುಕುಮಾರ್ ನನ್ನು ಬಂಧಿಸಲಾಗಿದೆ.

    ಸೋಂಕಿನಿಂದ ಗುಣಮುಖರಾದ ಖುಷಿಯಲ್ಲಿದ್ದ ಯುವ ಅಧಿಕಾರಿಯನ್ನು ಏಕಾಏಕಿ ಬಲಿ ಪಡೆದ ಕರೊನಾ!

    ಸೋಂಕಿತ ಬಾಲಕನಿಗೆ ಮರವೇ ಐಸೋಲೇಷನ್‌ ಸೆಂಟರ್‌! ಮನೆಯಲ್ಲಿಲ್ಲ ಜಾಗ, 11 ದಿನಗಳಿಂದ ಇಲ್ಲಿಯೇ ವಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts