ಸೋಂಕಿನಿಂದ ಗುಣಮುಖರಾದ ಖುಷಿಯಲ್ಲಿದ್ದ ಯುವ ಅಧಿಕಾರಿಯನ್ನು ಏಕಾಏಕಿ ಬಲಿ ಪಡೆದ ಕರೊನಾ!

ಬೀದರ್‌: ಬೀದರ್‌ನ ಭೂ ಕಂದಾಯ ವಿಭಾಗದ ಸಹಾಯಕ ನಿರ್ದೇಶಕ, ಯುವ ಅಧಿಕಾರಿ ರವಿಕುಮಾರ (32) ಕರೊನಾಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲಿನ ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪೂರ್ಣ ಗುಣಮುಖರಾಗಿ ಡಿಸ್ಚಾಜ್೯ ಹಂತಕ್ಕೆ ಬಂದ ವೇಳೆ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿ ಸಾವು ಸಂಭವಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಡಿಸಿ ಕಚೇರಿಯ ಭೂ ಕಂದಾಯ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಮೈಸೂರಿನವರು. ಕರೊನಾದಿಂದ ಗುಣಮುಖರಾಗಿದ್ದ ಹಿನ್ನೆಲೆಯಲ್ಲಿ ಡಿಸ್ಚಾಜ್೯ ಆಗುವ ಹಂತದಲ್ಲಿದ್ದರು. … Continue reading ಸೋಂಕಿನಿಂದ ಗುಣಮುಖರಾದ ಖುಷಿಯಲ್ಲಿದ್ದ ಯುವ ಅಧಿಕಾರಿಯನ್ನು ಏಕಾಏಕಿ ಬಲಿ ಪಡೆದ ಕರೊನಾ!