ವಾಟ್ಸ್​ಆ್ಯಪ್​ನಲ್ಲಿ ಮಹಿಳೆಯರಿಗೆ ಮೆಸೇಜ್​ ಕಳುಹಿಸಿ ತಲೆಬೋಳಿಸಿಕೊಂಡ ಚಿಕ್ಕೋಡಿ ಕಾಮುಕ!

chikkodi
Published on

ಚಿಕ್ಕೋಡಿ (ಬೆಳಗಾವಿ): ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿ ಗ್ರಾಮಸ್ಥರು ಬುದ್ಧಿ ಕಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ.

ಸುಧಾಕರ್ ಡುಮ್ಮಗೋಳ ಗ್ರಾಮಸ್ಥರಿಂದ ತಲೆ ಬೊಳಿಸಲ್ಪಟ್ಟ ವ್ಯಕ್ತಿ, ವಾಟ್ಸ್​ಆ್ಯಪ್​ನಲ್ಲಿ ಅಸಹ್ಯವಾಗಿ ಮೆಸೇಜ್ ಮಾಡುತ್ತಿದ್ದ ಸುಧಾಕರ್ ಡುಮ್ಮಗೋಳ ಎಂಬಾತನಿಗೆ ಗ್ರಾಮಸ್ಥರೆಲ್ಲರೂ ಸೇರಿ ಧರ್ಮದೇಟು ನೀಡಿ ತಲೆ ಬೋಳಿಸಿ ಪಾಠ ಕಲಿಸಿದ್ದಾರೆ.

ಈತನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ತನ್ನ ಖಯಾಲಿ ಈತ ಮುಂದುವರೆಸಿದ್ದ. ಆದ್ದರಿಂದ ತಲೆಯನ್ನು ಬೋಳಿಸಿ ಅದರ ವಿಡಿಯೋ ಮಾಡಿದ್ದಾರೆ. ನಂತರ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಘಟನೆಯಿಂದ ಅವಮಾನಗೊಂಡ ಸುಧಾಕರ್ ಇದೀಗ ಊರು ಬಿಟ್ಟು ತಲೆ ಮರೆಸಿಕೊಂಡಿದ್ದಾನೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net