More

    10 ವರ್ಷದಿಂದ ರಷ್ಯಾ ಯುದ್ಧ ಯುದ್ಧ ಅಂತ ಕಥೆ ಹೇಳ್ತಾ ಇದೆ, ಹೆದ್ರಬೇಡಿ ಎಂದರು… ಈಗ ನೋಡಿ ನಮ್‌ ಸ್ಥಿತಿ…

    ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಯುದ್ಧದ ಮೂನ್ಸೂಚನೆ ಹಿನ್ನೆಲೆಯಲ್ಲಿ ತಾಯ್ನಡಿಗೆ ಮರಳುವಂತೆ ಒತ್ತಾಯಿಸುತ್ತಲೇ ಇದ್ದೆವು, ಆದರೆ 10 ವರ್ಷದಿಂದ ರಷ್ಯಾ ಯುದ್ಧದ ಕಥೆ ಹೇಳುತ್ತಲೇ ಇದೆ ಹೆದರಬೇಡಿ, ಅಂತಿಮ ವರ್ಷದ ಪರೀಕ್ಷೆ ಬಳಿಕ ನಿಮ್ಮ ದೇಶಕ್ಕೆ ಮರಳುವಿರಂತೆ ಎಂದು ಕಾಲೇಜು ಆಡಳಿತ ಮಂಡಳಿ ತಡೆಯುತ್ತಾ ಬಂದಿತ್ತು. ಆದರೆ ಇಂದಿನ ಸನ್ನಿವೇಶ ನೋಡಿ ಮೈನಡುಗುತ್ತಿದೆ, ಮಗಳನ್ನು ಅಲ್ಲಿ ಬಿಟ್ಟು ನಾವು ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯನಾ?

    ‘ವಿಜಯವಾಣಿ’ಯೊಂದಿಗೆ ಹೀಗೆಂದು ಆತಂಕ ತೋಡಿಕೊಂಡವರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ನಿವಾಸಿ ಎನ್.ಮುನಿರಾಜು. ಇವರ ದ್ವೀತಿಯ ಪುತ್ರಿ ಎಂ.ಸುಧೀಕ್ಷಾ ಯೂಕ್ರೇನ್‌ನ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

    ವಿಮಾನ ನಿಲ್ದಾಣ ಧ್ವಂಸ:
    ಯೂಕ್ರೇನ್‌ನ ಕೀವ್ ನಗರದಿಂದ ಪಾಲಕರೊಂದಿಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿರುವ ಸುಧೀಕ್ಷಾ ಬಾಂಬ್‌ಗಳು ಸಿಡಿಯುತ್ತಿರುವ ಸದ್ದಿನಿಂದ ತುಂಬಾ ಆತಂಕವಾಗುತ್ತಿದೆ, ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಇರಲೂ ಆಗುತ್ತಿಲ್ಲ, ಯೂಕ್ರೇನ್‌ನ ಕೀವ್ ವಿಮಾನನಿಲ್ದಾಣ ಧ್ವಂಸಗೊಂಡಿರುವುದರಿಂದ ತಾಯ್ನಡಿಗೆ ಮರಳಲೂ ಆಗುತ್ತಿಲ್ಲ ಎಂದು ತಾವು ಅನುಭವಿಸುತ್ತಿರುವ ತೊಳಲಾಟ ತೋಡಿಕೊಂಡಿದ್ದಾರೆ.

    ಬಂಕರ್‌ಗಳಲ್ಲಿ ಸುರಕ್ಷಿತ:
    ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಬಂಕರ್‌ಗಳಲ್ಲಿ ರಕ್ಷಣೆ ನೀಡಿದ್ದಾರೆ. 15 ದಿನಕ್ಕಾಗುವಷ್ಟು ಆಹಾರ ಸಾಮಾಗ್ರಿ ದಾಸ್ತಾನು ಮಾಡಿಕೊಂಡಿದ್ದಾರೆ. ಬಂಕರ್‌ಗಳಲ್ಲೇ ಆನ್‌ಲೈನ್ ತರಗತಿ ನಡೆಸಲಾಗುತ್ತಿದೆ ಎಂದು ಸುಧೀಕ್ಷಾ ಮಾಹಿತಿ ನೀಡಿದ್ದಾರೆ.

    ನೆರೆ ವಿಮಾನಯಾನ:
    ಕೀವ್ ನಗರದ ವಿಮಾನನಿಲ್ದಾಣ ಧ್ವಂಸಗೊಂಡಿರುವುದರಿಂದ ನೆರೆ ದೇಶಗಳ ವಿಮಾನಯಾನದ ಮೂಲಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಡಿಗೆ ಕಳುಹಿಸಿಕೊಡುವ ಬಗ್ಗೆ ಅಲ್ಲಿನ ವಿಶ್ವವಿದ್ಯಾಲಯ ಭರವಸೆ ನೀಡಿದೆ, ನಾವೂ ರಾಜ್ಯ ರಾಜ್ಯ ಕೇಂದ್ರದ ಸಹಕಾರ ಕೋರಿದ್ದು, ದೇಶದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಡಿಗೆ ಕರೆತರಲಿದ್ದಾರೆ ಎಂಬ ಭರವಸೆಯಲ್ಲಿ ಎದುರುನೋಡುತ್ತಿದ್ದೇವೆ ಎಂದು ಮುನಿರಾಜು ತಿಳಿಸಿದ್ದಾರೆ.

    ಎಂಬಿಬಿಎಸ್‌ ಕಲಿಯಲು ಯೂಕ್ರೇನ್‌, ರಷ್ಯಕ್ಕೆ ಹೋಗುವುದೇಕೆ? ಭಾರತದಲ್ಲಿ ಇಲ್ಲದ್ದು ಅಂಥದ್ದೇನಿದೆ ಅಲ್ಲಿ ಗೊತ್ತಾ?

    ಯೂಕ್ರೇನ್‌ನಲ್ಲಿ ಸಿಲುಕಿರೋ ಕನ್ನಡಿಗರ ರಕ್ಷಣೆಗೆ ಹೊಸ ವೆಬ್‌ ಪೋರ್ಟಲ್‌: ಸಿಕ್ಕಿವೆ 346 ವಿದ್ಯಾರ್ಥಿಗಳ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts