More

    ಲೋಕಸಭಾ ಚುನಾವಣೆ ಬಳಿಕ ರಷ್ಯಾ, ಯೂಕ್ರೇನ್​ಗೆ ಬರುವಂತೆ ಪ್ರಧಾನಿ ಮೋದಿಗೆ ಆಹ್ವಾನ: ಶಾಂತಿ ಮಂತ್ರ ಜಪಿಸಿದ ನಮೋ

    ನವದೆಹಲಿ: ಯುದ್ಧಪೀಡಿತ ರಷ್ಯಾ ಮತ್ತು ಯೂಕ್ರೇನ್​ನ ಅಧ್ಯಕ್ಷರ ಜತೆ ಬುಧವಾರ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಉಭಯ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಶಾಂತಿಗಾಗಿ ಭಾರತದ ಬದ್ಧತೆಯನ್ನು ಪುನರುಚ್ಛರಿಸಿದರು.

    ಲೋಕಸಭಾ ಚುನಾವಣೆ ಬಳಿಕ ತಮ್ಮ ದೇಶಕ್ಕೆ ಬರುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಮತ್ತು ಯೂಕ್ರೇನ್​ ಅಧ್ಯಕ್ಷ ವೋಲೊಡಿಮಿರ್​ ಝೆಲೆನ್ಸ್ಕಿ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಪುಟಿನ್ ಜತೆ ಮಾತನಾಡಿದೆ ಮತ್ತು ರಷ್ಯಾದ ಅಧ್ಯಕ್ಷರಾಗಿ ಮರು ಆಯ್ಕೆಯಾದಕ್ಕಾಗಿ ಅವರನ್ನು ಅಭಿನಂದಿಸಿದೆ. ಮುಂದಿನ ವರ್ಷಗಳಲ್ಲಿ ಭಾರತ-ರಷ್ಯಾ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಆಳಗೊಳಿಸಲು ಮತ್ತು ವಿಸ್ತರಿಸಲು ನಾವು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದರು.

    ಮತ್ತೊಂದು ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, ಭಾರತ-ಯೂಕ್ರೇನ್ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ಶಾಂತಿಗಾಗಿ ನಡೆಯುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಮತ್ತು ಆದಷ್ಟು ಬೇಗ ಯುದ್ಧಕ್ಕೆ ಅಂತ್ಯವನ್ನು ಹಾಡಲು ಭಾರತದ ನಿರಂತರ ಬೆಂಬಲವನ್ನು ತಿಳಿಸಿದರು. ನಮ್ಮ ಜನಕೇಂದ್ರಿತ ವಿಧಾನದಿಂದ ಮಾರ್ಗದರ್ಶಿಸಲ್ಪಟ್ಟ ಮಾನವೀಯ ನೆರವು ನೀಡುವುದನ್ನು ಭಾರತ ಮುಂದುವರಿಸಲಿದೆ ಎಂದು ಭರವಸೆ ನೀಡಿದರು.

    ಪ್ರಧಾನಿ ಮೋದಿ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಝೆಲೆನ್ಸ್ಕಿ, ನಾನು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದೆ. ಯೂಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ, ಮಾನವೀಯ ನೆರವು ಮತ್ತು ಶಾಂತಿ ಸೂತ್ರ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆಗೆ ಭಾರತದ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ. ಪ್ರಸ್ತುತ ಸ್ವಿಡ್ಜರ್ಲೆಂಡ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯಲ್ಲಿ ಭಾರತ ಪಾಲ್ಗೊಳ್ಳುವುದನ್ನು ನೋಡುವುದು ನಮಗೆ ತುಂಬಾ ಮುಖ್ಯವಾಗಿದೆ ಎಂದಿದ್ದಾರೆ.

    ನಮ್ಮ ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಯ ಕುರಿತು ನಾವು ಚರ್ಚಿಸಿದ್ದೇವೆ. ಯೂಕ್ರೇನ್ ಭಾರತದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಆಸಕ್ತಿ ಹೊಂದಿದೆ, ವಿಶೇಷವಾಗಿ ಕೃಷಿ ರಫ್ತು, ವಾಯುಯಾನ ಸಹಕಾರ ಮತ್ತು ಔಷಧೀಯ ಹಾಗೂ ಕೈಗಾರಿಕಾ ಉತ್ಪನ್ನ ವ್ಯಾಪಾರದಲ್ಲಿ ಯೂಕ್ರೇನ್ ಆಸಕ್ತಿ ಹೊಂದಿದೆ ಎಂದು ಝೆಲೆನ್ಸ್ಕಿ ಹೇಳಿದರು.

    ಯೂಕ್ರೇನಿಯನ್ ಶಿಕ್ಷಣ ಸಂಸ್ಥೆಗಳಿಗೆ ಭಾರತೀಯ ವಿದ್ಯಾರ್ಥಿಗಳನ್ನು ಮತ್ತೆ ಸ್ವಾಗತಿಸಲು ಕೈವ್ ಬಯಸುತ್ತದೆ ಎಂದು ಝೆಲೆನ್ಸ್ಕಿ ಹೇಳಿದರು. 2022 ರ ಫೆಬ್ರವರಿ ತಿಂಗಳಲ್ಲಿ ಯೂಕ್ರೇನ್‌ ಮತ್ತು ರಷ್ಯಾ ನಡುವೆ ಶುರುವಾದ ಯುದ್ಧದ ನಂತರ ಭಾರತ ಸರ್ಕಾರವು ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಸಿಕೊಂಡಿತು. ಅಲ್ಲಿ ಈಗಲೂ ಯುದ್ಧ ಮುಂದುವರಿದಿದೆ. (ಏಜೆನ್ಸೀಸ್​)

    ವಿರಾಟ್​ ಕೊಹ್ಲಿ ಹೆಂಡತಿ… ಕೀಳುಮಟ್ಟದ ಕಾಮೆಂಟ್​ ಮಾಡಿದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ!

    ಅನಿಶ್ಚಿತ ಪರೀಕ್ಷೆ ಮಕ್ಕಳಿಗೇಕೆ ಶಿಕ್ಷೆ?; ಪಾಲಕರು, ವಿದ್ಯಾರ್ಥಿಗಳಿಗೆ ನಿದ್ರೆಯಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts