More

    ಯೂಕ್ರೇನ್‌ನಲ್ಲಿ ಸಿಲುಕಿರೋ ಕನ್ನಡಿಗರ ರಕ್ಷಣೆಗೆ ಹೊಸ ವೆಬ್‌ ಪೋರ್ಟಲ್‌: ಸಿಕ್ಕಿವೆ 346 ವಿದ್ಯಾರ್ಥಿಗಳ ಮಾಹಿತಿ…

    ಬೆಂಗಳೂರು: ಯೂಕ್ರೇನ್‌ನಲ್ಲಿ ಕರ್ನಾಟಕದ 346 ವಿದ್ಯಾರ್ಥಿಗಳು ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಈ ಮಾಹಿತಿ ನೀಡಿದ್ದಾರೆ. ಬೆಂಗಳೂರು 115, ಮೈಸೂರು 30, ವಿಜಯಪುರ 24, ಬಾಗಲಕೋಟೆ 22, ತುಮಕೂರು 16, ಹಾವೇರಿ 14, ದಾವಣಗೆರೆ 12, ಚಿಕ್ಕಮಗಳೂರು 10, ಹಾಸನ 10, ರಾಯಚೂರು 10, ಚಿಕ್ಕಬಳ್ಳಾಪುರ 9, ದಕ್ಷಿಣ ಕನ್ನಡ 9, ಕೊಡಗು 9, ಬಳ್ಳಾರಿ 6, ಧಾರವಾಡ 6, ಉಡುಪಿ 6, ಗದಗ 5, ಕಲಬುರಗಿ 5, ಚಾಮರಾಜನಗರ 4, ಕೋಲಾರ 4, ಮಂಡ್ಯ 4, ಬೀದರ್ 3, ಚಿತ್ರದುರ್ಗ 3, ಶಿವಮೊಗ್ಗ 3, ರಾಮನಗರ 2, ಉತ್ತರ ಕನ್ನಡ 2, ವಿಜಯನಗರ 1, ಬೆಂಗಳೂರು ಗ್ರಾಮಾಂತರ, ಕೊಪ್ಪಳ ತಲಾ ಒಬ್ಬರು ಎಂಬ ಮಾಹಿತಿ ಸಿಕ್ಕಿದೆ.

    ಇದರ ಬೆನ್ನಲ್ಲೇ, ಯೂಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೆಬ್ ಪೋರ್ಟಲ್​​ ಅನ್ನು ಅಭಿವೃದ್ಧಿಪಡಿಸಿದೆ.

    ಈ ವೆಬ್ ಪೋರ್ಟಲ್ ಮೂಲಕ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ಜನರ ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ಈ ಪೋರ್ಟಲ್ ನೋಡಲ್​ ಅಧಿಕಾರಿ ಮನೋಜ್​ ರಾಜನ್​ ಮತ್ತು ತಂಡ ಕೇವಲ 12 ಗಂಟೆಯೊಳಗೆ ಈ ಪೋರ್ಟಲ್​​ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಯೂಕ್ರೇನ್‌ನಲ್ಲಿ ಸಿಲುಕಿರುವವರ ಬಗ್ಗೆ ವಿವರ ನೀಡಿದರೆ ಅವರ ರಕ್ಷಣೆ ಸುಲಭವಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.

    ಈ ಲಿಂಕ್‌ ಕ್ಲಿಕ್‌ ಮಾಡಿದರೆ ನಿಮಗೆ ವಿವರ ಲಭ್ಯ: http://ukraine.karnataka.tech

    ಯೂಕ್ರೇನ್‌ನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ಕ್ರಮ: ಸಿಎಂ ಬೊಮ್ಮಾಯಿ ಹೇಳಿಕೆ

    ದಮ್ಮಯ್ಯ ನಮ್ಮನ್ನು ಕಾಪಾಡಿ… ಎಂದು ಭಾರತದ ಕಾಲಿಗೆ ಬಿದ್ದಿರೋ ಇದೇ ಯೂಕ್ರೇನ್‌ ಈ ಹಿಂದೆ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts