ಟ್ಯೂಷನ್‌ಗೆ ಹೋಗಿ ಬರುತ್ತಿರುವ ಬಾಲಕಿ ಕಿಡ್ನಾಪ್: ತಲ್ಲಣಗೊಂಡ ಬಾಗಲಕೋಟೆ- ಪಾಲಕರಲ್ಲಿ ಆತಂಕ

kidnap
ಸಾಂದರ್ಭಿಕ ಚಿತ್ರ
Published on

ಬಾಗಲಕೋಟೆ: ಟ್ಯೂಷನ್‌ ಮುಗಿಸಿ ಮನೆಗೆ ಹಿಂದಿರುತ್ತಿರುವ ವೇಳೆ ಬಾಲಕಿಯೊಬ್ಬಳನ್ನು ಅಪಹರಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಇದರಿಂದ ಪಾಲಕರಲ್ಲಿ ಭಾರಿ ಆತಂಕ ಸೃಷ್ಟಿಸಿದೆ.

ರಾತ್ರಿ 7.30 ರಿಂದ 7.45 ಮಧ್ಯೆ ಈ ಅಪಹರಣ ನಡೆದಿದೆ. ಅಣ್ಣನ ಜತೆ ಬಾಲಕಿ ಮನೆಗೆ ಬರುತ್ತಿರುವ ವೇಳೆ ನವನಗರದ ಬಳಿ ಈ ಘಟನೆ ನಡೆದಿದೆ.

ಬಿಹಾರ ಮೂಲದ ನಾಲ್ವರು ಈ ಕಿಡ್ನಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಬಂದ ನಾಲ್ವರು ಬಾಲಕಿಗೆ ಚಾಕಲೇಟ್ ತೋರಿಸಿ ಅಪಹರಿಸಿದ್ದಾರೆ ಎನ್ನಲಾಗಿದೆ. ಅಪಹರಣದ ನಂತರ ಹಿಂದಿಯಲ್ಲಿ ಮಾತನಾಡಿರುವ ಅಪಹರಣಕಾರರು ಬಾಲಕಿಯನ್ನು ಬಿಡುಗಡೆ ಮಾಡಬೇಕು ಎಂದರೆ 50 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಅಪಹರಣಕಾರರಿಗೆ ಪೊಲೀರು ಬಲೆ ಬೀಸಿದ್ದಾರೆ. ತಡರಾತ್ರಿ ಪ್ರಮುಖ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್, ವಾಹನ ತಪಾಸಣೆ ಕಾರ್ಯ ನಡೆಸಲಾಗಿದೆ. ಹುಬ್ಬಳ್ಳಿ ಬೈಪಾಸ್‌ನಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ನವನಗರದ ಒಳ ರಸ್ತೆಗೆ ಕಾರು ತೆಗೆದುಕೊಂಡು ಬಂದು ಬಾಲಕಿ ಅಪಹರಣ ಹೇಗೆ? ಇದು ಪೂರ್ವನಿಯೋಜಿತವೇ ಎಂಬ ಬಗ್ಗೆ ಪ್ರಶ್ನೆಗಳು ಹುಟ್ಟಿವೆ.

ಇತ್ತೀಚಿಗೆ ಜಿಲ್ಲೆಯಲ್ಲಿ ಸರಣಿ ಕಳ್ಳತನ, ದರೋಡೆ, ಡಕಾಯಿತಿ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಈಗ ಅಪಹರಣ ಕೇಸ್‌ ನಡೆದಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net