More

    ಪತಿ ಯುವಕರಂತೆ ಕಾಣಿಸ್ತಾರೆ, ನಾನೋ ವಯಸ್ಸಾದವಳಂತೆ ಕಾಣಿಸ್ತೇನೆ- ಪರಿಹಾರ ಹೇಳಿ…

    ಪತಿ ಯುವಕರಂತೆ ಕಾಣಿಸ್ತಾರೆ, ನಾನೋ ವಯಸ್ಸಾದವಳಂತೆ ಕಾಣಿಸ್ತೇನೆ- ಪರಿಹಾರ ಹೇಳಿ...ಪ್ರಶ್ನೆ: ವಯಸ್ಸು 35. ಪತಿಯ ವಯಸ್ಸು 40. ಅವರು ನೋಡುವುದಕ್ಕೆ ಇನ್ನೂ 25ರ ಯುವಕನಂತೆ ಕಾಣಿಸುತ್ತಾರೆ. ಆದರೆ, ನಾನು 50 ವರ್ಷದವಳಂತೆ ಕಾಣುತ್ತೇನೆ. ಇದರಿಂದ ಕೀಳರಿಮೆ ಉಂಟಾಗಿದೆ. ನನಗೆ ಅಲರ್ಜಿ ಮತ್ತು ಒಣಚರ್ಮದ ಸಮಸ್ಯೆ ಇದೆ. ಮುಖದಲ್ಲಿ ಸಣ್ಣ ಸಣ್ಣ ಮಚ್ಚೆಗಳು, ಗುಳ್ಳೆಗಳು, ಹಣೆಯಲ್ಲಿ ಮತ್ತು ಕಣ್ಣಿನ ಸುತ್ತ ನೆರಿಗೆಗಳಿವೆ. ಹೊಟ್ಟೆಯ ಸುತ್ತ ಬೊಜ್ಜೂ ಬಂದಿದೆ. ಬಿಳಿಕೂದಲು ಸಹ ಕಾಣಿಸಿಕೊಂಡಿದೆ. ಇವುಗಳಿಂದ ತುಂಬ ಬೇಸರವಾಗಿದೆ. ಇದಕ್ಕೇನು ಮಾಡಲಿ?

    ಉತ್ತರ: ನಿಮ್ಮ ಸಮಸ್ಯೆ ಸಮಸ್ಯೆಯೇ ಅಲ್ಲ. ನೀವೇ ತುಂಬ ಚಿಂತೆ ಮಾಡುತ್ತ ಕೀಳರಿಮೆ ಬೆಳೆಸಿಕೊಂಡಿದ್ದೀರಿ. ಪ್ರತಿದಿನ ನಿಯಮಿತ ವ್ಯಾಯಾಮ ಮಾಡುತ್ತ ಸೊಪ್ಪು, ತರಕಾರಿ, ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿರಿ. ದಿನಕ್ಕೆ ಮೂರು ಲೀಟರ್ ನೀರು ಕುಡಿಯಿರಿ. ಬೊಜ್ಜು ಕರಗುತ್ತದೆ. ಚರ್ಮವೂ ಕಾಂತಿಯುತವಾಗುತ್ತದೆ.

    ಚೆನ್ನಾಗಿ ನಿದ್ರೆ ಮಾಡಿ. ದಿನಕ್ಕೆ ಎಂಟು ಗಂಟೆ ಕಾಲ ನಿದ್ರಿಸಿ. ಬಿಳಿಗೂದಲಿಗೆ ಮೆಹೆಂದಿ ಬಳಸಿ. ಮನಸ್ಸು, ದೇಹವನ್ನು ಚಟುವಟಿಕೆಯಿಂದ ಇರಿಸಿಕೊಂಡಲ್ಲಿ ನೀವೂ ಚಿಕ್ಕವರಾಗಿಯೇ ಕಾಣುವಿರಿ.

    ಒಣಚರ್ಮದ ತೊಂದರೆಗೆ ವಾರಕ್ಕೊಮ್ಮೆ ಎಳ್ಳೆಣ್ಣೆಯನ್ನು ಬಿಸಿ ಮಾಡಿ ಮೈಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಅಲರ್ಜಿ ಸಮಸ್ಯೆಗೆ ಚಿಕಿತ್ಸೆ ಪಡೆಯಿರಿ. ಅಲ್ಲದೆ, ಪುಸ್ತಕ ಓದುವುದು, ಸಂಗೀತ ಕೇಳುವುದು, ಯೋಗ ಮುಂತಾದವುಗಳಲ್ಲಿ ನಿಮಗಿಷ್ಟವಾದ ಹವ್ಯಾಸ ಬೆಳೆಸಿಕೊಳ್ಳಿ. ಅನವಶ್ಯಕ ಚಿಂತೆ ಬಿಡಿ.

    ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…

    ರಕ್ತಶುದ್ಧಿ ಔಷಧ ಸೇವಿಸಿದರೂ ಮೊಡವೆ ಕಾಟ ತಪ್ಪುತ್ತಿಲ್ಲ- ಏನು ಮಾಡಲಿ?

    ಅಧಿಕ ಬೊಜ್ಜಿನಿಂದ ಕೊರಗುತ್ತಿದ್ದೇನೆ- ಆಯುರ್ವೇದ ಪರಿಹಾರವೇನು?

    ಅನಿಯಮಿತ ಮೂತ್ರ ಸಮಸ್ಯೆಯೆ?ಆಯುರ್ವೇದ ವೈದ್ಯರ ಪರಿಹಾರ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts