ಪ್ರೀತಿಸಿ ಮದ್ವೆಯಾದ: ಡಿವೋರ್ಸ್‌ ಕೊಟ್ಟಿಲ್ಲವೆಂದು ಪತ್ನಿಯನ್ನು ಕೊಂದು ಅಳುತ್ತಾ ಠಾಣೆಗೆ ಓಡಿ ಡ್ರಾಮಾ ಮಾಡಿದ!

death
Published on

ವಿಜಯನಗರ (ಆಂಧ್ರಪ್ರದೇಶ): ಪ್ರೀತಿಸಿ ಮದುವೆಯಾದವಳನ್ನೇ ಸುಟ್ಟು ಕೊಲೆ ಮಾಡಿ ಆಕೆ ಕಾಣೆಯಾಗಿದ್ದಾಳೆಂದು ಅಳುತ್ತಾ ಪೊಲೀಸರಲ್ಲಿ ಡ್ರಾಮಾ ಮಾಡಿದ ಪತಿ ಈಗ ಸಿಕ್ಕಿಬಿದ್ದಿದ್ದಾನೆ. ಆಂಧ್ರಪ್ರದೇಶದ ವಿಜಯನಗರಂದ ಕೊತ್ತವಲಸ್​ ಮಂಡಲದ ಜೋಡಿಮೇರಕದಲ್ಲಿ ಈ ಭಯಾನಕ ಘಟನೆ ನಡೆದಿದೆ.


ಎಂಟು ವರ್ಷಗಳ ಹಿಂದೆ ಶ್ರೀಕಾಕುಳಂ ಜಿಲ್ಲೆಯ ಲಕ್ಷ್ಮೀ ಜೊತೆ ನಾಗರಾಜ್​ ಪ್ರೇಮ ವಿವಾಹವಾಗಿದ್ದ. ಈ ದಂಪತಿಗೆ ಒಬ್ಬ ಮಗು ಕೂಡ ಇದೆ. ಆದರೆ ಈ ವೇಳೆಗಾಗಲೇ ನಾಗರಾಜ್‌ ಇನ್ನೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿದ್ದಾನೆ. ಅದಕ್ಕಾಗಿ ವಿಚ್ಛೇದನ ನೀಡುವಂತೆ ಪತ್ನಿಗೆ ಹಿಂಸಿಸುತ್ತಿದ್ದ. ಆಕೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಕೊಲೆ ಮಾಡಿದ್ದಾನೆ ಈತ!

ಬೆಂಕಿ ಹಚ್ಚಿ ಕೊಲೆ ಮಾಡಿ ಆಕೆಯನ್ನು ಸುಟ್ಟುಹಾಕಿರುವ ನಾಗರಾಜ್‌, ನಂತರ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲು ಮಾಡಿದ್ದಾನೆ. ಅಳುತ್ತಾ ಠಾಣೆಗೆ ಹೋಗಿದ್ದ ಈತ ತನ್ನ ಹೆಂಡತಿ ಕೆಲ ದಿನಗಳಿಂದ ಕಾಣುತ್ತಿಲ್ಲ. ದಯವಿಟ್ಟು ಹುಡುಕಿಕೊಡಿ ಎಂದಿದ್ದಾನೆ.

ಈತನ ನಾಟಕವನ್ನು ಮೊದಲು ಪೊಲೀಸರು ನಿಜ ಎಂದು ನಂಬಿದ್ದರು. ಆದರೆ ತನಿಖೆ ವೇಳೆ ಇವನ ಬಗ್ಗೆ ಅನುಮಾನ ಶುರುವಾಗಿದೆ. ನಂತರ ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ತಾನು ಕೊಲೆ ಮಾಡಿದ್ದು ಹಾಗೂ ಅದರ ಉದ್ದೇಶವನ್ನು ಈತ ಬಾಯಿ ಬಿಟ್ಟಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net