

ನವದೆಹಲಿ: ಬಾಲಿವುಡ್ ಅಮೀರ್ ಖಾನ್ ತಮ್ಮ ಎರಡನೆಯ ಹಿಂದೂ ಪತ್ನಿಗೆ ವಿಚ್ಛೇದನ ನೀಡಿ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಇದೀಗ ಅವರ ಮೊದಲ ಪತ್ನಿಯಿಂದ ಹುಟ್ಟಿದ ಮಗಳು ಇರಾಖಾನ್ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾಳೆ.
ತಮ್ಮ ಬಾಯ್ಫ್ರೆಂಡ್ ಜತೆ ಡೇಟಿಂಗ್ ಮಾಡುತ್ತಿರುವ, ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ಅನ್ನು ಅವರು ಶೇರ್ ಮಾಡಿದ್ದಾರೆ. ಫಿಟ್ನೆಟ್ ತರಬೇತುದಾರ ನೂಪುರ್ ಶಿಖಾರೆ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಇರಾ, ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ನೀವು ನನ್ನ ನಿರೂಪಕ ನನ್ನ ಲವ್, ಡ್ರೀಮ್ಬಾಯ್ ಇತ್ಯಾದಿ ಹ್ಯಾಷ್ಟ್ಯಾಗ್ಗಳು ಸ್ಟುಪಿಡ್ ಎನ್ನಿಸುತ್ತವೆ. ಅವೆಲ್ಲವುಗಳಿಗಿಂತಲೂ ಹೆಚ್ಚಾಗಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ.
ಇರಾ ಖಾನ್ ಈ ವರ್ಷದ ಆರಂಭದಲ್ಲಿ ಪ್ರಾಮಿಸ್ ಡೇ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ನೂಪುರ್ ಶಿಖಾರೆ ಜತೆಗಿನ ಸಂಬಂಧವನ್ನು ಬಹಿರಂಗಗೊಳಿಸಿದ್ದಳು. ಈ ದಂಪತಿಗೆ ಜುನೈದ್ ಎಂಬ ಮಗನೂ ಇದ್ದಾನೆ.
ಇಲ್ಲಿದೆ ನೋಡಿ ವಿಡಿಯೋ: