VIDEO: ಆಮೀರ್​ ಪುತ್ರಿ ಐರಾ ಖಾನ್​ ಎಂಗೇಜ್​ಮೆಂಟ್​: 2 ವರ್ಷಗಳ ಡೇಟಿಂಗ್​ ಬಳಿಕ ಸಿನಿಮಾ ಸ್ಟೈಲ್​ನಲ್ಲಿ ಪ್ರಪೋಸ್​!

1355852
Published on

ಮುಂಬೈ: ಕೆಲ ದಿನಗಳ ಹಿಂದೆ ತನ್ನ ಅಪ್ಪ ಆಮೀರ್​ ಖಾನ್​ ಎದುರು ಅತ್ಯಂತ ಕನಿಷ್ಠ ಈಜುಡುಗೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಭಾರಿ ಸುದ್ದಿಯಾಗಿದ್ದ ನಟಿ ಐರಾಖಾನ್​ಗೆ ಈಗ ಎಂಗೇಜ್​ಮೆಂಟ್​ ಸಂಭ್ರಮ. ಎರಡು ವರ್ಷಗಳ ಡೇಟಿಂಗ್​ ಬಳಿಕ ಪ್ರಿಯಕರ ನುಪೂರ್​ ಶಿಖರೆ ಜತೆ ಸಿನಿಮಾ ಸ್ಟೈಲ್​ನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ.

ಇದರ ವಿಡಿಯೋ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಐರಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದು ವೈರಲ್​ ಆಗಿದೆ.

ಸೈಕಲಿಂಗ್​ ಕಾರ್ಯಕ್ರಮವೊಂದರಲ್ಲಿ ನುಪೂರ್​ ಶಿಖರೆ ಅವರು, ಐರಾಗೆ ಅವರಿಗೆ ಉಂಗುರ ನೀಡಿ, ನೀನು ನನ್ನ ಮದುವೆ ಆಗುವೆಯಾ ಎಂದು ಪ್ರಸ್ತಾಪಿಸಿದ್ದಾರೆ. ಆಗ ಐರಾ 'ಹೌದು' ಎಂದಿದ್ದಾರೆ. ನಂತರ ಪರಸ್ಪರ ಚುಂಬಿಸಿಕೊಂಡಿದ್ದಾರೆ. ಹೀಗೆ ಅವರ ಎಂಗೇಜ್​ಮೆಂಟ್​ ನಡೆದಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಅಂದಹಾಗೆ ಐರಾ, ಅಮೀರ್​ ಖಾನ್ ಹಾಗೂ ಅವರ ಮೊದಲ ಹಿಂದೂ ಪತ್ನಿ​ ರೀನಾ ದಂಪತಿ ಪುತ್ರಿ. 2002ರಲ್ಲಿ ಅಮೀರ್​ ಖಾನ್​ ರೀನಾಗೆ ಡಿವೋರ್ಸ್​ ಕೊಟ್ಟಿದ್ದು, ಮತ್ತೋರ್ವ ಹಿಂದೂ ಮಹಿಳೆ ಕಿರಣ್​ ರಾವ್​ ಅವರನ್ನು 2005ರಲ್ಲಿ ಮದುವೆಯಾಗಿದ್ದರು, ಅವರಿಗೂ ಕಳೆದ ವರ್ಷ ವಿಚ್ಛೇದನ ನೀಡಿದ್ದಾರೆ. ಈ ಎರಡೂ ಮದುವೆಯಿಂದ ಐರಾ ಹೊರತುಪಡಿಸಿ ಜುನೈದ್ ಖಾನ್​, ಆಜಾದ್​ ರಾವ್​ ಖಾನ್​ ಎಂಬ ಮಕ್ಕಳು ಇದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net