More

    ಸತ್ತು ಹೋಗಿದ್ದಾನೆಂದ ಅಲ್‌ ಕೈದಾ ಮುಖ್ಯಸ್ಥ ಜೀವಂತ! 26/11 ಮಾದರಿಯ ಮತ್ತೊಂದು ದಾಳಿ ಭಯದಲ್ಲಿ ಅಮೆರಿಕ…

    ಕಾಬುಲ್: 2001ರ ನವೆಂಬರ್‌ 9 ರಂದು (9/11) ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ದಾಳಿಯಿಂದ ಇಡೀ ಅಮೆರಿಕ ತತ್ತರಿಸಿ ಹೋಗಿತ್ತು. ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಲ್‌ ಕೈದಾ ಉಗ್ರರು. ಇದೀಗ 20 ವರ್ಷಗಳ ಬಳಿಕ ಅಮೆರಿಕ ಪುನಃ ಅದೇ ಭಯಾನಕತೆಯನ್ನು ಎದುರಿಸುವಂತಾಗಿದೆ.

    ಇದಕ್ಕೆ ಕಾರಣ, 9/11ರ ಘಟನೆಯ ನಂತರ ಸತ್ತು ಹೋಗಿದ್ದಾನೆ ಎನ್ನಲಾಗಿದ್ದ ಅಲ್‌ ಕೈದಾ ಮುಖ್ಯಸ್ಥ ಜೀವಂತ ಇರುವುದು ತಿಳಿದುಬಂದಿದ್ದು, ಆತ ಪುನಃ ಮತ್ತೊಂದು ಭಯೋತ್ಪಾದಕ ದಾಳಿಯ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್-ಜವಾಹಿರಿ ಎಂಬ ಈ ಮುಖ್ಯಸ್ಥನಿಂದ ವಿಡಿಯೋ ಒಂದು ಹೊರಬಂದಿದ್ದು ಅದರಲ್ಲಿ ಆತ ಬೆದರಿಕೆ ಹಾಕಿರುವುದಾಗಿ ಜಿಹಾದಿ ವೆಬ್‌ಸೈಟ್ ವಾಚ್ ಡಾಗ್ ಆಗಿರುವ ದಿ ಸೈಟ್ ಇಂಟೆಲಿಜೆನ್ಸ್ ಗ್ರೂಪ್ ಮಾಹಿತಿ ನೀಡಿದೆ.

    ವರ್ಲ್ಡ್‌ ಟ್ರೇಡ್‌ ಸೆಂಟರ್‌ ದಾಳಿಯ 20ನೇ ವರ್ಷದ ಸಮಯದಲ್ಲಿ ಕಾಣಿಸಿಕೊಂಡಿದ್ದ ಅಲ್‌- ವಜಾಹಿರಿ ಈಗ ವಿಡಿಯೋ ಮಾಡುವ ಮೂಲಕ ಬೆದರಿಕೆ ಹಾಕಿದ್ದಾನೆ. ಈ ವೀಡಿಯೊವನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ‘ಜೆರುಸಲೆಂ ಎಂದಿಗೂ ಯಹೂದಿಗಳ ಪಾಲಾಗದು’ ಎಂದು ವಿಡಿಯೊದಲ್ಲಿ ಜವಾಹಿರಿ ಹೇಳಿದ್ದಾನೆ. ಹಾಗೆಯೇ, ಅಲ್‌ ಕೈದಾ ನಡೆಸಿದ ಎರಡು ದಾಳಿಗಳನ್ನು ಆತ ಶ್ಲಾಘಿಸಿದ್ದಾನೆ. ರಷ್ಯಾ ಪಡೆಗಳ ಮೇಲೆ ಸಿರಿಯಾದಲ್ಲಿ ಈ ಜನವರಿಯಲ್ಲಿ ನಡೆಸಿದ ದಾಳಿ ಅದರಲ್ಲೊಂದು.

    ’ಪ್ರಸ್ತುತ ನಮ್ಮ ಬೇಡಿಕೆಯೆಂದರೆ ಶತ್ರುಗಳನ್ನು ದುರ್ಬಲಗೊಳಿಸುವುದು ಮತ್ತು ಅವನ ಮೇಲೆ ಮಿಲಿಟರಿ ಮತ್ತು ಆರ್ಥಿಕ ದಾಳಿಗಳನ್ನು ನಡೆಸುವ ಮೂಲಕ ಶತ್ರುಗಳನ್ನು ಮಂಡಿಯೂರಿ ಕುಳಿತುಕೊಳ್ಳುವಂತೆ ಮಾಡುವುದು. ಆದ್ದರಿಂದಲೇ ನಿಮ್ಮ ಪ್ರಭಾವ ವಲಯದಿಂದ ಹೊರಗೆ ಹೋಗಿ ಶತ್ರುಗಳ ಮೇಲೆ ದಾಳಿ ಮಾಡುವುದು ಬಹಳ ಮುಖ್ಯ. ಶತ್ರು ಮಣ್ಣಿನ ಮೇಲಿನ ದಾಳಿಗಳು ಬಹಳ ಮುಖ್ಯವಾಗುತ್ತವೆ. ಆದ್ದರಿಂದಲೇ ‘ತಾಲ್ ಅಲ್-ಸೈಮನ್’ ನಂತಹ ಕಾರ್ಯಾಚರಣೆಯು ಬಹಳ ಮುಖ್ಯವಾಗುತ್ತದೆ, ಇದು ಶತ್ರು ಸೈನ್ಯದ ಮೇಲಿನ ದಾಳಿಯ ನಿಖರವಾದ ಉದಾಹರಣೆಯಾಗಿದೆ ಎಂದು ವಿಡಿಯೋದಲ್ಲಿ ಆತ ಹೇಳಿದ್ದಾನೆ.

    ಅಪ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದಿರುವುದನ್ನು ಜವಾಹಿರಿ ಉಲ್ಲೇಖಿಸಿಲ್ಲ. ಆದರೆ, ಅಫ್ಘಾನಿಸ್ತಾನ ಯುದ್ಧದ 20ನೇ ವರ್ಷವನ್ನು ಪ್ರಸ್ತಾಪಿಸಿದ್ದಾನೆ.
    ಅಮೆರಿಕದ ಸೇನೆ ಹಿಂಪಡೆತ ಒಪ್ಪಂದವು 2020ರ ಫೆಬ್ರುವರಿಯಲ್ಲಿಯೇ ಆಗಿತ್ತು. ಜವಾಹಿರಿ ಸತ್ತಿದ್ದಾನೆ ಎಂಬ ವದಂತಿ 2020ರ ಕೊನೆಯ ಹೊತ್ತಿಗೆ ಕೇಳಿ ಬಂದಿತ್ತು. 2020ರ ಕೊನೆಯಲ್ಲಿಯೇ ಈ ವಿಡಿಯೊ ಚಿತ್ರೀಕರಣ ಆಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದೂ ಹೇಳಲಾಗಿದೆ.

    VIDEO: ಅಮೆರಿಕದ ಯುದ್ಧ ವಿಮಾನಕ್ಕೆ ಜೋಕಾಲಿ ಕಟ್ಟಿ ಆಡಿದ ತಾಲಿಬಾನಿಗಳು- ಗಹಗಹಿಸಿ ನಕ್ಕ ಚೀನಾ

    ನಡುಬೀದಿಯಲ್ಲಿ ಮಹಿಳೆಯ ಎಳೆದು ಎಸ್ಕೇಪ್‌ ಆಗಿದ್ದ ಜೆಡಿಎಸ್‌ ಮುಖಂಡ ಅಂದರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts