ಪ್ರವಾಹದಲ್ಲಿ ಏರ್‌ಲಿಫ್ಟ್‌: ಯೋಧರ ಸಾಹಸಮಯ ರೋಚಕ ವಿಡಿಯೋ

airlift
Published on

ಮಧ್ಯಪ್ರದೇಶ: ಅತಿವೃಷ್ಟಿ, ಅನಾವೃಷ್ಟಿ ಏನೇ ಇರಲಿ... ಸೇನಾ ಸಿಬ್ಬಂದಿಯ ಕಾರ್ಯ ಶ್ಲಾಘನೀಯವಾದುದು. ಅಂಥದ್ದೊಂದು ಒಂದು ಪರಿಸ್ಥಿತಿಯಲ್ಲಿ ಸೇನಾಪಡೆಗಳು ತೋರಿಸಿರುವ ಸಾಹಸಮಯ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿದ್ದು ಅದೀಗ ಸಕತ್‌ ವೈರಲ್‌ ಆಗಿದೆ.

ಮಧ್ಯಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಇಲ್ಲಿನ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಈ ಸಂದರ್ಭದಲ್ಲಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರನ್ನು ಏರ್ ಲಿಫ್ಟ್ ಮಾಡಿ ರಕ್ಷಿಸಿದ್ದಾರೆ ದ್ದು, ಭಾರತೀಯ ವಾಯು ಪಡೆಯ ಸಿಬ್ಬಂದಿ.

ಬಾಲಘಾಟ್‌ನ ಮೊವಾಡ್ ಗ್ರಾಮದಲ್ಲಿ ವೈಂಗಂಗಾ ನದಿಯು ಉಕ್ಕಿ ಹರಿಯುತ್ತಿದ್ದು, ದಡದಲ್ಲಿ ವಾಸಿಸುತ್ತಿದ್ದ ಹಲವರ ಮನೆಗಳು ಮುಳುಗಡೆಯಾಗಿದೆ. ಹಲವರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದ್ದು ಅದಾಗ್ಯೂ ಕೆಲವರು ಸಿಲುಕಿಕೊಂಡಿದ್ದರು. ಹೀಗಾಗಿ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಕ್ಕೆ ಮುಂದಾಗಿತ್ತು.

ಹೆಲಿಕಾಫ್ಟರ್ ಮೂಲಕ ಓರ್ವ ವೃದ್ಧ ಸೇರಿದಂತೆ ಮೂವರನ್ನು ಏರ್ ಲಿಫ್ಟ್ ಮಾಡಲಾಗಿದೆ. ವಾಯುಪಡೆಯ ಸಿಬ್ಬಂದಿ, ಹಗ್ಗದ ಸಹಾಯದಿಂದ ವೃದ್ದ, ಸೇರಿದಂತೆ ಮೂವರನ್ನು ರಕ್ಷಿಸಿದ್ದಾರೆ. ಇದರ ವಿಡಿಯೋವನ್ನು ಖುದ್ದು ಭಾರತೀಯ ವಾಯುಸೇನೆ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಯೋಧರಿಗೆ ಶ್ಲಾಘನೆಗಳ ಸುರಿಮಳೆಯೇ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net