More

    ನಾಲ್ಕನೆಯ ಗಂಡನದ್ದೂ ರಕ್ತಸಿಕ್ತ ದೇಹ ನೋಡಲಾರೆ: ಶಾಂತಿ ಸ್ಥಾಪಿಸಿ… ತುಂಬು ಗರ್ಭಿಣಿಯ ಗೋಳಾಟ

    ಕಾಬೂಲ್: ಅಪಘಾನಿಸ್ತಾನ ಮತ್ತು ತಾಲಿಬಾನ್​ ನಡುವೆ ಕಾಬೂಲ್​ನಲ್ಲಿ ಘರ್ಷಣೆ ಶುರುವಾಗಿದೆ. ಒಮ್ಮೆ ಎರಡು ದೇಶಗಳ ನಡುವೆ ಹೋರಾಟ ಶುರುವಾಯಿತೆಂದರೆ ಯಾರು ಬಲಿಯಾಗುತ್ತಾರೋ ಹೇಳುವುದು ಕಷ್ಟ. ಸೈನಿಕರ ಪತ್ನಿ ಮತ್ತು ಕುಟುಂಬಸ್ಥರು ಆತನ ಬರುವಿಕೆಗಾಗಿ ಕಾಯುವ ದೃಶ್ಯ ನಿಜಕ್ಕೂ ಮನಮಿಡಿಯುವಂಥದ್ದು.

    ಅಂಥದ್ದೇ ಒಂದು ಚಿತ್ರ ಈ ಯುದ್ಧದ ಭೀಕರತೆಯನ್ನು ತೋರಿದೆ. ಇದಾಗಲೇ ಮೂರು ಗಂಡಂದಿರನ್ನು ಕಳೆದುಕೊಂಡು ನಾಲ್ಕನೇ ಮದುವೆಯಾಗಿರುವ ಈ ಗರ್ಭಿಣಿ ತನ್ನ ಗಂಡನನ್ನು ಪ್ರಾಣಾಪಾಯದಿಂದ ಪಾರು ಮಾಡಲು ಪ್ರಾರ್ಥನೆ ಮಾಡುತ್ತಿದ್ದಾಳೆ. ದೇಶ ದೇಶಗಳ ನಡುವೆ ಶಾಂತಿ ಸ್ಥಾಪಿಸಿ ಎಂದು ಕೋರಿಕೊಳ್ಳುತ್ತಿದ್ದಾಳೆ.

    ಈಕೆಯ ಹೆಸರು ಬೀಬಿ. ಈಕೆಯ ನಾಲ್ಕನೆಯ ಗಂಡ ಅಮೀನುಲ್ಲಾಳಿಗೆ ಪ್ರಾರ್ಥಿಸುತ್ತಿದ್ದಾಳೆ. ಈ ಹಿಂದೆ ಒಂದೇ ಕುಟುಂಬದ ಮೂರು ಸಹೋದರರನ್ನು ಮದುವೆಯಾಗಿದ್ದಾಳೆ (ಎಲ್ಲರೂ ತಾಲಿಬಾನ್​ ಸೈನಿಕರಿಂದ ಹತ್ಯೆಯಾಗಿದ್ದಾರೆ). ಇದೀಗ ನಾಲ್ಕನೆಯ ಸಹೋದರನನ್ನು ಮದುವೆಯಾಗಿದ್ದು, ಗರ್ಭಿಣಿಯಾಗಿದ್ದಾಳೆ. ಇದಾಗಲೇ ನಾಲ್ಕು ಮಕ್ಕಳನ್ನು ಹೊಂದಿರುವ ಈಕೆಗಿದು ಐದನೇ ಮಗು. ಇದೇ ವೇಳೆಗೆ ಘರ್ಷಣೆ ಶುರುವಾಗಿದ್ದು, ಗಂಡ ತಾಲಿಬಾನ್​ ಉಗ್ರರ ವಿರುದ್ಧ ಹೋರಾಟಕ್ಕೆ ಹೋಗಿದ್ದಾನೆ. ಈ ಗರ್ಭಿಣಿಯ ಕಣ್ಣೀರು ಮನಕಲಕುವಂತಿದೆ.

    ಕತಾರ್​ನಲ್ಲಿ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೂ ಘರ್ಷಣೆ ನಿಂತಿಲ್ಲ. ಇದಕ್ಕೆ ಅಂತ್ಯವಿಲ್ಲವೇನೋ ಎನ್ನುವಂತೆ ಘರ್ಷಣೆ ನಡೆಯುತ್ತಿದೆ. ಕಳೆದ ವಾರದಲ್ಲಿ ಅಫಘಾನ್ ಭದ್ರತಾ ಪಡೆಗಳ ಕನಿಷ್ಠ 60 ಸೈನಿಕರು ಮೃತಪಟ್ಟಿದ್ದಾರೆ. ಇನ್ನಾದರೂ ಎರಡೂ ದೇಶಗಳು ಮಾತುಕತೆ ಮಾಡಿ ಶಾಂತಿಸ್ಥಾಪನೆ ಮಾಡಿ ಎಂದು ಮಹಿಳೆ ಗೋಗರೆಯುತ್ತಿದ್ದಾಳೆ. ಈಗಾಗಲೇ ಮೃತಪಟ್ಟಿರುವ ತನ್ನ ಮೂರು ಗಂಡಂದಿರ ಫೋಟೋ ಜತೆ ಈಗಿನ ಗಂಡನ ಫೋಟೊ ಹಿಡಿದು ನಿಂತಿರುವ ಈ ಮಹಿಳೆಯ ಗೋಳು ಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ.

    ಇದನ್ನೂ ಓದಿ: ಆಕೆ ನಿಮ್ಮವಳಾಗಬೇಕೆ? ಹಾಗಿದ್ದರೆ ಡಾನ್ಸ್​ ಮಾಡಿ, ಏಳು ದಿನ ಅವಳನ್ನು ಕರಕೊಂಡು ಹೋಗಿ!

    ಪೂರ್ವ ಅಫ್ಘಾನಿಸ್ತಾನದ ಪರ್ವತ ಕುನಾರ್ ಪ್ರಾಂತ್ಯದ ಸಡೆಕಾಬಾದ್ ಪ್ರದೇಶದಲ್ಲಿ ವಾಸಿಸುವ 33 ವರ್ಷದ ಬೀಬಿಗೆ ಮೊದಲ ಮೂರು ಗಂಡಂದಿರಿಂದ ಐದು ಮಕ್ಕಳಿದ್ದು, ಅವರನ್ನು ತಾನು ಅನಾಥರನ್ನಾಗಿ ನೋಡಲು ಸಾಧ್ಯವಿಲ್ಲ ಎಂದಿದ್ದಾಳೆ.

    ಸೈನಿಕನಾಗಿದ್ದ ಅಮೀನುಲ್ಲಾನ ಹಿರಿಯ ಸಹೋದರನೊಂದಿಗೆ ಮೊದಲ ಬಾರಿಗೆ ಮದುವೆಯಾದಾಗ ಬೀಬಿಗೆ 18 ವರ್ಷ. ತಾಲಿಬಾನ್ ಜತೆಗಿನ ಯುದ್ಧದಲ್ಲಿ ಆತ ಮೃತಪಟ್ಟ. ಕೆಲವೇ ತಿಂಗಳುಗಳಲ್ಲಿ, ಅವಳು ಗಂಡನ ತಮ್ಮನನ್ನು ಮದುವೆಯಾದಳು.

    ಅವನೂ ಸೈನಿಕ. ಈತನಿಂದ ಎರಡನೆಯ ಬಾರಿ ಗರ್ಭಿಣಿಯಾಗಿದ್ದಾಗಲೇ ಆತನೂ ಸತ್ತಿದ್ದು, ತಾನು ರಕ್ತಸಿಕ್ತ ದೇಹವನ್ನು ನೋಡಿದ್ದೆ. ನಂತರ ಮೂರನೆಯ ಬಾರಿಯೂ ಹೀಗೆ ಆಗಿದೆ. ಇನ್ನು ನಾಲ್ಕನೆಯ ಪತಿಯಿಂದ ಇದೀಗ ಐದನೇ ಮಗುವಿನ ಗರ್ಭಿಣಿಯಾಗಿದ್ದು, ತಾನು ಮತ್ತೆ ರಕ್ತಸಿಕ್ತ ದೇಹ ನೋಡಲಾರೆ ಎಂದಿದ್ದಾಳೆ ಬೀಬಿ.  ಇಲ್ಲಿಯ ಪಶ್ತೂನ್ ಸಮಾಜದಲ್ಲಿ ವಿಧವೆಯರು ಕುಟುಂಬದಿಂದ ಹೊರಗೆ ಮದುವೆಯಾಗಬಾರದು ಎಂಬ ನಂಬಿಕೆಯಿಂದಾಗಿ ವಿಧವೆಯರು ಗಂಡನ ಅಣ್ಣತಮ್ಮಂದಿರನ್ನು ಮದುವೆಯಾಗುವುದು ಜನಾಂಗೀಯ ಪಶ್ತೂನ್ ಸಮಾಜದಲ್ಲಿ ಸಾಮಾನ್ಯವಾಗಿದೆ.

    ಉಡುಪಿ ಜಿಲ್ಲೆಯ ಬಂದರಿನಲ್ಲಿ ವಿಚಿತ್ರ ವಸ್ತು ಪತ್ತೆ!

    ಶೂಟಿಂಗ್​ನಲ್ಲಿ ತಗುಲಿದ ಸೋಂಕು: ನಟಿ ಆಶಾಲತಾ ಕರೊನಾಕ್ಕೆ ಬಲಿ

    ರೈತರ ವ್ಯಾಪಾರ ಸುಲಭ ಮಾಡುವ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಸಿಕ್ಕಿತು ಅಂಗೀಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts