ರೈತರ ವ್ಯಾಪಾರ ಸುಲಭ ಮಾಡುವ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಸಿಕ್ಕಿತು ಅಂಗೀಕಾರ

ನವದೆಹಲಿ: ದ್ವಿದಳಧಾನ್ಯಗಳು, ಎಣ್ಣೆಕಾಳು, ಖಾದ್ಯತೈಲ, ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡುವ ‘ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ’ಗೆ ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ಸೆ.15ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಈ ಮಸೂದೆಗೆ ರಾಜ್ಯಸಭೆಯಲ್ಲಿ ಇಂದು ಧ್ವನಿಮತದ ಅಂಗೀಕಾರ ದೊರೆಯಿತು. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಅವರ ವ್ಯಾಪಾರವನ್ನು ಸುಲಭ ಮಾಡುವ ಮಹತ್ವದ ಹೆಜ್ಜೆ ಇದು ಕೇಂದ್ರ ಹೇಳಿದೆ. ಇದರಿಂದಾಗಿ ಇನ್ನು ಮುಂದೆ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಸಾಧ್ಯವಾಗಿದೆ. ಸುಗ್ಗಿಯ ನಂತರ ಶೇಖರಣಾ … Continue reading ರೈತರ ವ್ಯಾಪಾರ ಸುಲಭ ಮಾಡುವ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಸಿಕ್ಕಿತು ಅಂಗೀಕಾರ