ಭೀಕರ ಅಪಘಾತ- ಬಿಗ್‌ಬಾಸ್‌ ಖ್ಯಾತಿಯ ನಟ ಮಹೇಶ್‌ ಪ್ರಜ್ಞಾಹೀನ: ಐಸಿಯುನಲ್ಲಿ ಚಿಕಿತ್ಸೆ

mahesh
Published on

ಹೈದರಾಬಾದ್: ಟಾಲಿವುಡ್‌ ನಟ, ನಿರ್ದೇಶಕ, ವಿಮರ್ಶಕ, ಬಿಗ್‌ಬಾಸ್‌ (ತೆಲಗು) ಖ್ಯಾತಿಯ ಕತ್ತಿ ಮಹೇಶ್‌ ಅವರು ಭೀಕರ ಅಪಘಾತವೊಂದಲ್ಲಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿತ್ತೂರಿನಿಂದ ಹೈದರಾಬಾದ್​ಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮಹೇಶ್‌ ಅವರು ಇನೋವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇವರ ಕಾರಿಗೆ ಟ್ರಕ್ ಡಿಕ್ಕಿಹೊಡೆದಿದೆ. ನೆಲ್ಲೂರಿನ ಹೊರವಲಯದ ಚಂದ್ರಶೇಖರಪುರಂ ಬಳಿ ಈ ಅಪಘಾತ ಸಂಭವಿಸಿದೆ.

 - Sakshi Post

ಕಾರು ನಜ್ಜುಗುಜ್ಜಾಗಿದ್ದು, ಕಾರ್‌ನಲ್ಲಿ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ಮಹೇಶ್‌ಗೆ ಪ್ರಾಣಾಪಾಯವಾಗಲಿಲ್ಲ. ಆದರೆ ಕಾರು ಜಖಂಗೊಂಡಿರುವ ಸ್ಥಿತಿ ನೋಡಿದರೆ, ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವುದಾಗಿ ಹೇಳಲಾಗುತ್ತಿದೆ. ಪ್ರಜ್ಞೆ ಕಳೆದುಕೊಂಡಿರುವ ಅವರನ್ನು ಸದ್ಯ ನೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಕಿರುಚಿತ್ರಗಳಲ್ಲಿಯೂ ಮಹೇಶ್‌ ಅವರು ಭಾರಿ ಜನಪ್ರಿಯರು. 2016ರಲ್ಲಿ ಕಿರುಚಿತ್ರ ಮಾಡಿದ್ದರು. ಇವರು ಹೆಚ್ಚು ಗುರುತಿಸಿಕೊಂಡಿರುವುದು ಸಿನಿಮಾ ವಿಮರ್ಶೆಯಲ್ಲಿ ವಿವಾದಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ. ನೇನೆ ರಾಜು ನೇನೆ ಮಂತ್ರಿ, ಕ್ರ್ಯಾಕ್​, ಅಮ್ಮ ರಾಜ್ಯಂ ಲೋ ಕಡಪ ಬಿದ್ದಲು ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2015ರಲ್ಲಿ ಪೆಸರಟ್ಟು ಸಿನಿಮಾ ಮೂಲಕ ಮಹೇಶ್ ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net