ಪೈಲಟ್​ ಎಡವಟ್ಟಿನಿಂದ ರಷ್ಯಾದ ಪ್ಯಾಸೆಂಜರ್​ ವಿಮಾನ ಪತನ! ಐವರು ಮಕ್ಕಳು ಸೇರಿ 43 ಮಂದಿ ದುರ್ಮರಣ! Russian plane

Russian plane
Published on

Russian plane : ನಾಪತ್ತೆಯಾಗಿದೆ ಎಂದು ವರದಿಯಾಗಿದ್ದ ರಷ್ಯಾ ವಿಮಾನ ಇದೀಗ ಪತನಗೊಂಡಿರುವುದಾಗಿ ತಿಳಿದುಬಂದಿದೆ. ಸುಮಾರು 43 ಜನರನ್ನು ಹೊತ್ತೊಯ್ಯುತ್ತಿದ್ದ An-24 ಪ್ರಯಾಣಿಕ ವಿಮಾನ ಚೀನಾದ ಗಡಿಯ ಸಮೀಪ ಪತನಗೊಂಡು ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ವಿಮಾನ ಹಾರಾಟದ ಮಧ್ಯದಲ್ಲೇ ವಾಯು ಸಂಚಾರ ನಿಯಂತ್ರಕರು ವಿಮಾನದ ಸಂಪರ್ಕವನ್ನು ಕಳೆದುಕೊಂಡರು. ಇದಾದ ಕೆಲವೇ ನಿಮಿಷಗಳಲ್ಲಿ ರಕ್ಷಣಾ ಸಿಬ್ಬಂದಿ ಉರಿಯುತ್ತಿರುವ ವಿಮಾನದ ಭಾಗಗಳನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿದೆ.

ಅಮುರ್ ಪ್ರದೇಶದ ಟಿಂಡಾ ಪಟ್ಟಣದಲ್ಲಿ ಕಳಪೆ ಗೋಚರತೆಯ ಕಾರಣ ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್​ ಮಾಡಿದ ಎಡವಟ್ಟು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವಿಶ್ಲೇಷಣೆ ಸೂಚಿಸಿದೆ.

ಪತನವಾದ An-24 ಪ್ರಯಾಣಿಕ ವಿಮಾನವನ್ನು ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸುತ್ತಿತ್ತು. ಟಿಂಡಾ ವಿಮಾನ ನಿಲ್ದಾಣಕ್ಕೆ ಆರಂಭಿಕ ಲ್ಯಾಂಡಿಂಗ್ ವಿಫಲವಾದ ನಂತರ ಎರಡನೇ ಲ್ಯಾಂಡಿಂಗ್‌ಗೆ ಪ್ರಯತ್ನಿಸುವಾಗ ವಿಮಾನ ರಾಡಾರ್‌ನಿಂದ ಕಣ್ಮರೆಯಾಯಿತು ಎಂದು ಸ್ಥಳೀಯ ತುರ್ತು ಸಚಿವಾಲಯ ತಿಳಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆರು ಸಿಬ್ಬಂದಿ ಮತ್ತು ಐದು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ರಷ್ಯಾದ ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಈ ಮೊದಲು ಹೇಳಿಕೆ ನೀಡಿದ್ದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಮೂರು ಜನರನ್ನು ಹೊತ್ತೊಯ್ಯುತ್ತಿದ್ದ ರಾಬಿನ್ಸನ್ R66 ಹೆಲಿಕಾಪ್ಟರ್ ಅದೇ ಅಮುರ್ ಪ್ರದೇಶದಲ್ಲಿ ಕಾಣೆಯಾಗಿತ್ತು. ಈ ಪ್ರದೇಶವು ಮಾಸ್ಕೋದಿಂದ ಪೂರ್ವಕ್ಕೆ ಸರಿಸುಮಾರು 6,600 ಕಿ.ಮೀ ದೂರದಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net