More

    ಯೂಕ್ರೇನ್ ಮೇಲೆ ಪರೋಕ್ಷ ದಾಳಿ ನಡೆಸುತ್ತಿದೆ ಅಮೆರಿಕ! ಹಿಂದೆ ಮಾಡಿದ್ದು ಈಗ ಉಲ್ಟಾ ಹೊಡೆಯುತ್ತಿದೆಯಾ?

    ನವದೆಹಲಿ: ಹಿಂದೆ ಮಾಡಿದ ಕೆಲಸ ಅಮೆರಿಕಗೆ ಈಗ ಉಲ್ಟಾ ಹೊಡೆಯುತ್ತಿದೆ. ಹೌದು, ಅಮೆರಿಕ ತರಬೇತುಗೊಳಿಸಿದ್ದ ಅಫ್ಘಾನ್​​ ಸೈನಿಕರನ್ನು ಈಗ ರಷ್ಯಾ ಯುದ್ಧದಲ್ಲಿ ಬಳಸಿಕೊಳ್ಳುತ್ತಿದೆ.

    ಹಿಂದೆ ತಾಲಿಬಾನ್ ವಿರುದ್ಧ ಹೋರಾಡಲು ಅಫ್ಘಾನಿಸ್ತಾನದ ಸೈನಿಕರನ್ನು ಅಮೆರಿಕ ಹಾಗೂ ಬ್ರಿಟನ್​ ಜಂಟಿಯಾಗಿ ತರಬೇತುಗೊಳಿಸಿದ್ದರು. ಆದರೆ ಅಮೆರಿಕ ಅಫ್ಘಾನಿಸ್ತಾನದಿಂದ ಹಿಂತಿರುಗಿದ ಮೇಲೆ ಆ ಸೈನಿಕರು ನಿರುದ್ಯೋಗಿಗಳಾದರು. ಅಮೆರಿಕನ್ನರು ಬಿಟ್ಟು ಹೋಗುವಾಗ ಸುಮಾರು 30,000 ಅಫ್ಘಾನ್​ ಸೈನಿಕರು ಸೇವೆಯಲ್ಲಿದ್ದರು. ಕೆಲವರು ದೇಶ ಬಿಟ್ಟು ಹೋದರೂ ಅನೇಕರಿಗೆ ಇದು ಸಾಧ್ಯವಾಗಿಲ್ಲ.

    ಸದ್ಯಕ್ಕೆ ಬರಿಗೈಯಲ್ಲಿರುವ ಅಫ್ಘಾನ್ ಸೈನಿಕರನ್ನು ರಷ್ಯಾ ಬಾಡಿಗೆ ಸೈನಿಕರ ಹಾಗೆ ಬಳಸಿಕೊಳ್ಳುತ್ತಿದೆ. ವರದಿಗಳ ಪ್ರಕಾರ ಸುಮಾರು 10,000 ಸೈನಿಕರು ಹೊಟ್ಟೆಪಾಡಿಗಾಗಿ ಪುತಿನ್ ತೋರಿಸಿದ ದಾರಿಯಲ್ಲಿ ನಡೆಯುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts