ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ: ರೈತ ಹನುಮಂತಪ್ಪಗೌಡ ಅನಿಸಿಕೆ

manvi
ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಶನಿವಾರ ರೈತರಿಗಾಗಿ ಹಮ್ಮಿಕೊಂಡಿದ್ದ ತಿರುಗಲು ಬಂಡಿ, ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ರೈತ ಹನುಮಂತಪ್ಪಗೌಡ ಮಾತನಾಡಿದರು.
Published on

ಮಾನ್ವಿ: ಕ್ರೀಡೆ ಇಲ್ಲದ ಜೀವನ ಕೀಟ ತಿಂದಹಾಗೆ ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲ, ಆದ್ದರಿಂದ ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳಲ್ಲಿ ಯುವಕರು ಭಾಗವಹಿಸಿ ಸದೃಢರಾಗಬೇಕು ಎಂದು ರೈತ ಹನುಮಂತಪ್ಪಗೌಡ ಹೇಳಿದರು.


ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಆಷಾಢ ಮಾಸದ ನಿಮಿತ್ತ ಶನಿವಾರ ರೈತರಿಗಾಗಿ ಹಮ್ಮಿಕೊಂಡಿದ್ದ ತಿರುಗಲು ಬಂಡಿ, ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಮಾತನಾಡಿದರು. ಮುಂಗಾರು ಬಿತ್ತನೆ ಆರಂಭದಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಆಷಾಢ ಮಾಸದಲ್ಲಿ ಇಂತಹ ಸ್ಪರ್ಧೆ ಏರ್ಪಡಿಸಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು ಎಂದರು.


ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ 15 ಕ್ಕೂ ಹೆಚ್ಚು ರೈತರು ಜೋಡಿ ಎತ್ತುಗಳೊಂದಿಗೆ ಭಾಗವಹಿಸಿದರು. ಪ್ರಥಮ ಸ್ಥಾನ ಪಡೆದ ಮೌನೇಶ್ ಬಡಿಗೇರ್ ಎತ್ತುಗಳಿಗೆ ಎಂಟು ತೊಲೆ ಬೆಳ್ಳಿ ಕಡಗ, ದ್ವಿತೀಯ ಆದೆಪ್ಪ ಬಲ್ಲಟ್ಟಗಿ ಎತ್ತುಗಳಿಗೆ ಐದು ತೊಲೆ ಬೆಳ್ಳಿ ಕಡಗ, ತೃತೀಯಾ ಸ್ಥಾನ ಪಡೆದ ಎಸ್. ಬಸವರಾಜ್ ಎತ್ತುಗಳಿಗೆ ಎರಡುವರೆ ತೊಲೆ ಬೆಳ್ಳಿ ಕಡಗವನ್ನು ಬಹುಮಾನವಾಗಿ ಪಡೆದುಕೊಂಡವು.


ವಿಜೇತ ಎತ್ತುಗಳಿಗೆ ಬಹುಮಾನ ನೀಡಲಾಯಿತು. ಪ್ರಮುಖರಾದ ಹನುಮಂತಪ್ಪಗೌಡ ಪೊಲೀಸ್ ಪಾಟೀಲ್, ಶರಣಪ್ಪ ಅಗಸೆ ಮುಂದಿನ, ಹನುಮಯ್ಯ ನಾಯಕ, ಭೀಮಣ್ಣ, ಅಂಬಯ್ಯಗೌಡ, ಮುದುಕಪ್ಪ ಗಲಗ್, ರಾಜಪ್ಪಗೌಡ, ಸಿದ್ದಪ್ಪ, ಬಸವರಾಜ್ ಅಗಸೆ ಮುಂದಿನ, ಮಾಂತೇಶ, ಅಂಬಣ್ಣ, ಅಮರಪ್ಪ, ನಾಗರಾಜ, ಮುದುಕಪ್ಪ, ಶಿವಪುತ್ರಪ್ಪ, ಶರಣಪ್ಪ, ಚಂದ್ರಪ್ಪ, ಎ.ಕೇಮ್ರಾಜ್, ಅಮಾತೆಪ್ಪ, ಅಮರಪ್ಪ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net