ಬೆಂಗಳೂರು : ರಾಜರಾಜೇಶ್ವರಿ ನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ರನ್ ಅಡಿಕ್ಟೃ್ ಸಂಸ್ಥೆ ಆಯೋಜಿಸಿದ್ದ 7ನೇ ವಾರ್ಷಿಕ ಮ್ಯಾರಥಾನ್ ಯಶಸ್ವಿಯಾಗಿ ನಡೆಯಿತು.
10 ಕಿ.ಮೀ. 5ಕಿ.ಮೀ. 3 ಕಿ.ಮೀ. ವಿಭಾಗದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡು ಮ್ಯಾರಥಾನ್‌ನಲ್ಲಿ ಓಡಿದರು.
ಓಟದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸದ್ವನ ಫಾರ್ಮ್ಸ್, ಬಿಜಿಎಸ್ ಗ್ಲೆನಿಗಲ್ಸ್ ಆಸ್ಪತ್ರೆ, ಪ್ರವೀಣ್ ಜುವೆಲ್ಸ್ ಮತ್ತಿತರ ಹಲವು ಸಂಘ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದವು. ಪ್ಲಾಸ್ಟಿಕ್ ವಸ್ತುಗಳ ಬಳಕೆ ತಡೆಗಟ್ಟಲು ಅದಮ್ಯ ಚೇತನ ಸಂಸ್ಥೆಯ ಸಹಯೋಗದೊಂದಿಗೆ 4 ಸಾವಿರಕ್ಕೂ ಹೆಚ್ಚು ಸ್ಟೀಲ್ ತಟ್ಟೆ, ಲೋಟ, ಚಮಚಗಳನ್ನು ಬಳಸಿ ಕಾರ್ಯಕ್ರಮವನ್ನು ಪರಿಸರ ಸ್ನೇಹಿಯಾಗಿಸಲಾಗಿತ್ತು.
ರನ್ ಅಡಿಕ್ಟೃ್ ಸಂಸ್ಥೆಯು ಸ್ವಯಂಸೇವಕರಿಂದ ಮುನ್ನಡೆಯುತ್ತಿರುವ ಸಂಪೂರ್ಣ ಲಾಭ ರಹಿತ ಸಂಸ್ಥೆಯಾಗಿದ್ದು, ಸಮಾಜದ ಎಲ್ಲಾ ಕ್ಷೇತ್ರಗಳ ಪರಿಣತರು ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದುವರೆಗೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 2.25ಲಕ್ಷ ನೋಟ್ ಬುಕ್‌ಗಳನ್ನು, 800 ಕ್ಕೂ ಹೆಚ್ಚು ಡೆಸ್ಕ್‌ಗಳನ್ನು, ಆಟದ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡಿತ್ತು.
ವಾಸ್ತು ಪ್ರಕಾರ ಮನೆಯ ಅಲಂಕಾರ; ಎಲ್ಲೆಲ್ಲಿ ಯಾವ ವಸ್ತುಗಳಿರಬೇಕೆಂದು ತಿಳಿದಿರಬೇಕು