

ಚೆನ್ನೈ: ಸಾಯಿ ಪಲ್ಲವಿ… ಈ ಹೆಸರು ಸರಳವಾಗಿರುವ ಹೆಣ್ಣು ಮಕ್ಕಳನ್ನು ಇಷ್ಟಪಡುವ ಹುಡುಗರ ಎದೆಬಡಿತವನ್ನು ಹೆಚ್ಚಿಸುತ್ತದೆ. ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಅವರ ಹೆಸರು ತೆಗೆದರೆ ಸಾಕು, ಕೇವಲ ಅವರ ಸೂಪರ್ ಹಿಟ್ ಸಿನಿಮಾಗಳಿಗೆ ಅಲ್ಲದೇ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಜನ ಚರ್ಚಿಸುತ್ತಾರೆ. ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ. ಜೊತೆಗೆ, ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ನಿರಾಕರಿಸಿ ವಿವಾದಗಳಿಗೂ ತುತ್ತಾಗಿದ್ದಾರೆ. ಅಲ್ಲದೆ, ಜನರ ನಂಬಿಕೆಗೆ ದ್ರೋಹ ಮಾಡುವ ಜಾಹೀರಾತುಗಳನ್ನು ನಿರಾಕರಿಸಿ ಜನರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ. ಸಿನಿ ರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಸಾಯಿ ಪಲ್ಲವಿ ಕುರಿತಾದ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸಾಯಿ ಪಲ್ಲವಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದು ಕೂಡ ಮದುವೆಯಾಗಿ ಎರಡು ಮಕ್ಕಳಿರುವ ನಟನೇ ಸಾಯಿ ಪಲ್ಲವಿ ಅವರ ಬಾಯ್ ಫ್ರೆಂಡ್ ಎಂಬ ಮಾತುಗಳು ಕೇಳಿಬರುತ್ತಿದೆ. ಸದ್ಯಕ್ಕೆ ಇದು ಬರಿ ವದಂತಿಯಷ್ಟೇ, ಇಂಥದ್ದೊಂದು ಗಾಳಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವದಂತಿಯ ಬಗ್ಗೆ ಸಾಯಿ ಪಲ್ಲವಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಇನ್ನೊಂದೆಡೆ ಸಾಯಿ ಪಲ್ಲವಿ ಅವರ ಅಭಿಮಾನಿಗಳು ಇದು ಖಂಡಿತ ಸುಳ್ಳು ಸುದ್ದಿ ಎಂದು ಹೇಳುತ್ತಿದ್ದಾರೆ.
ಅಂದಹಾಗೆ ಸಾಯಿ ಪಲ್ಲವಿ ಅವರ ಬಾಯ್ ಫ್ರೆಂಡ್ ದಕ್ಷಿಣ ಭಾರತದ ನಟ ಎಂಬುದು ಸದ್ಯದ ಗಾಸಿಪ್ ಆಗಿದೆ. ಬಹುಶಃ ಮಲಯಾಳಂ ನಟ ಇರಬಹುದಾ ಎಂಬ ಪ್ರಶ್ನೆಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ. ಇನ್ನು ಸಾಯಿ ಪಲ್ಲವಿ ಕುರಿತಾದ ಗಾಸಿಪ್‌ಗಳು ಹೊಸದೇನಲ್ಲ. ಈ ಹಿಂದೆಯೂ ನಟಿಯ ಬಗ್ಗೆ ನಾನಾ ರೀತಿಯ ಗಾಸಿಪ್‌ಗಳು ಹರಿದಾಡಿದ್ದವು.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಾಯಿ ಪಲ್ಲವಿ ಅವರು ಪ್ರಸ್ತುತ ತಮ್ಮ ಹೊಸ ಚಿತ್ರ 'ತಾಂಡೇಲ್' ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ನಾಗ ಚೈತನ್ಯ ನಾಯಕನಾಗಿ ನಟಿಸುತ್ತಿದ್ದಾರೆ. ‘ಲವ್ ಸ್ಟೋರಿ’ ನಂತರ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗುತಿದೆ. ಈ ಚಿತ್ರ ಡಿಸೆಂಬರ್ 20ರಂದು ಥಿಯೇಟರ್‌ಗೆ ಬರುವ ನಿರೀಕ್ಷೆಯಿದೆ. ಇಬ್ಬರ ನಡುವಿನ ಕೆಮಿಸ್ಟ್ರಿಯನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. (ಏಜೆನ್ಸೀಸ್)