ಮಾವಿನ ಚಟ್ನಿ ವಿಚಾರಕ್ಕೆ ಗಲಾಟೆ; ಕೊಲೆಯಲ್ಲಿ ಅಂತ್ಯ: ಏನಿದು ಪ್ರಕರಣ? | Murder

dk - 2025-05-20T201802.600
Published on

Murder: ಮಾವಿನ ಚಟ್ನಿ ವಿಚಾರಕ್ಕೆ ಗಂಡ-ಹೆಂಡತಿ ಸಣ್ಣ ಗಲಾಟೆ ಮಾಡಿಕೊಂಡಿದ್ದು, ಇದೀಗ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಮಂಡಲದಲ್ಲಿ ಇತ್ತೀಚಿಗೆ ನಡೆದಿದೆ.

ಪಂಡೆಲ್ಲಾ ಗ್ರಾಮದ ನಿವಾಸಿ ಸುರ ಅಂಜಲಿ ಮೃತೆ ಎಂದು ಗುರುತಿಸಲಾಗಿದೆ. ಆರೋಪಿ ಸುರ ರಾಜ್​​ಕುಮಾರ್​ ಅನ್ನು ಬಂಧಿಸಲಾಗಿದೆ. ದಂಪತಿಗಳಿಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾವಿನ ಚಟ್ನಿ ವಿಚಾರಕ್ಕೆ ಗಲಾಟೆ

ಭಾನುವಾರ ಸಂಜೆ ಸುರ ಅಂಜಲಿ ಮಾವಿನ ಚಟ್ನಿ ಮಾಡಲು ತಯಾರಿ ಮಾಡುತ್ತಿದ್ದಾಳೆ. ಇದಕ್ಕೆ ಬೇಕಾದ ಸಾಮಾಗ್ರಿಗಳನ್ನು ದಿನಸಿ ಅಂಗಡಿಯಿಂದ ತರಿಸಿಕೊಂಡಿದ್ದಾಳೆ. ಆದರೆ, ಬೊಳ್ಳಳ್ಳಿ ತರೊಸೋದು ಮರೆತ್ತಿದ್ದಾಳೆ. ಈ ವಿಚಾರವನ್ನು ಗಂಡ ಸುರ ರಾಜ್​ಕುಮಾರ್​ ಬಳಿ ಪ್ರಸ್ತಾಪಿಸಿದ್ದಾಳೆ. ನಾನು ಪದೇಪದೆ ದಿನಸಿ ಅಂಗಡಿಗೆ ಹೋಗಲ್ಲ ಎಂದಿದ್ದಾನೆ. ಇಬ್ಬರ ನಡುವೆ ಸಣ್ಣದಾಗಿ ಗಲಾಟೆಯಾಗಿದೆ. ಇದರಿಂದ ಕೋಪಗೊಂಡ ರಾಜ್​ಕುಮಾರ್ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net