RTO ಅಧಿಕಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಫರ್​ ನೀಡಿದ ಜನಾರ್ದನ ರೆಡ್ಡಿ!

krpp offer to rto
Published on

ಬಳ್ಳಾರಿ: ಬಳ್ಳಾರಿಯ RTO ಕಚೇರಿ ಅಧಿಕಾರಿಯೊಬ್ಬರಿಗೆ ಜನಾರ್ದನ ರೆಡ್ಡಿ ಗಾಳ ಹಾಕಿದ್ದಾರೆ. ಬಳ್ಳಾರಿಯ ಸಾರಿಗೆ ಇಲಾಖೆಯಲ್ಲಿ ಎಫ್​ಡಿಎ ಆಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕೆಆರ್​ಪಿಪಿ ಪಕ್ಷದಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದಾರೆ.

ಇವರಿಗೆ ನೆಲಮಂಗಲದಿಂದ ಕೆಆರ್​ಪಿಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಕೇಳಲಾಗಿದೆ ಎನ್ನಲಾಗಿದೆ. ಸಾರಿಗೆ ಇಲಾಖೆ ಸಿಬ್ಬಂದಿ ಎನ್. ನಾಗೇಶಕುಮಾರ್ ಕಂಬಾಳುಗೆ ಟಿಕೆಟ್ ಆಫರ್ ನೀಡಲಾಗಿದೆ. ಇವರು ನೆಲಮಂಗಲದ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಆಕ್ಷಾಂಕಿಯಾಗಿದ್ದರು.

ಆದರೆ ಕೆಆರ್ ಪಿಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗಿದೆ. ನಾಗೇಶ್​ ಕುಮಾರ್ ಜತೆ ಜನಾರ್ದನ ರೆಡ್ಡಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ. ಇವರು ಬೆಂಬಲಿಗರು ಹಾಗೂ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ ಸ್ಪರ್ಧೆಗೆ ಇಳಿಯುವ ಬಗ್ಗೆ ಆಲೋಚಿಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net