ಆರ್‌ಟಿಇ 2ನೇ ಸುತ್ತಿನ ಲಾಟರಿ: 921 ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ

RTE
Published on

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿರುವ ಶೇ.25 ಸೀಟುಗಳ ಭರ್ತಿಗಾಗಿ ಸೋಮವಾರ ನಡೆದ ಎರಡನೇ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ 921 ಮಕ್ಕಳಿಗೆ ಸೀಟು ಹಂಚಿಕೆ ಮಾಡಲಾಗಿದೆ.

ಎರಡನೇ ಸುತ್ತಿನ ಲಾಟರಿಯಲ್ಲಿ 7,328 ಮಕ್ಕಳನ್ನು ಪರಿಗಣಿಸಲಾಗಿತ್ತು. ಇದರಲ್ಲಿ 921 ಮಕ್ಕಲಿಗೆ ಸೀಟು ಹಂಚಿಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳ ಪಾಲಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಲಾಗಿದೆ. ಹಂಚಿಕೆಯಾಗಿರುವ ಶಾಲೆಗಳಲ್ಲಿ ಮಕ್ಕಳು ದಾಖಲಾಗಲು ಜೂ.21ಕೊನೆಯ ದಿನವಾಗಿದೆ. ಸೀಟು ಹಂಚಿಕೆ ವಿವರಗಳನ್ನು ಇಲಾಖೆ ವೆಬ್‌ಸೈಟ್ ಡಿಡಿಡಿ.ಠ್ಚಟಟ್ಝಛಿಛ್ಠ್ಚಠಿಜಿಟ್ಞ.ಚ್ಟ್ಞಠಿ.ಜಟ.ಜ್ಞಿ ನಲ್ಲಿ ಪಡೆಯಬಹುದಾಗಿದೆ.

ಮೊದಲನೆ ಸುತ್ತಿನಲ್ಲಿ ಲಭ್ಯವಿದ್ದ 11,454 ಸೀಟುಗಳಿಗೆ 11,096 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 3,769 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. 2,097 ಮಕ್ಕಳು ದಾಖಲಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net