ದೇಶಭಕ್ತ ಮಕ್ಕಳ ಜನನಕ್ಕಾಗಿ ಆರ್​ಎಸ್​ಎಸ್​​ನಿಂದ ಗರ್ಭ ಸಂಸ್ಕಾರ ಅಭಿಯಾನ

pregnant women
ಸಾಂದರ್ಭಿಕ ಚಿತ್ರ
Published on

- ಗರ್ಭಿಣಿಯರಿಗೆ ಭಗವದ್ಗೀತೆ, ರಾಮಾಯಣ ಪಾಠ

ನವದೆಹಲಿ: ದೇಶಭಕ್ತ ಮಕ್ಕಳ ಜನನಕ್ಕಾಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ-ಸಂಯೋಜಿತ ಸಂಸ್ಥೆಯು ಇಂದಿನಿಂದ ಗರ್ಭ ಸಂಸ್ಕಾರ ಅಭಿಯಾನವನ್ನು ಪ್ರಾರಂಭಿಸಲಿದೆ.

ಈ ಕಾರ್ಯಕ್ರಮದ ಉದ್ದೇಶ: ಈ ಅಭಿಯಾನದ ಅಡಿಯಲ್ಲಿ ಗರ್ಭಿಣಿಯರಿಗೆ ರಾಮಾಯಣ, ಭಗವದ್ಗೀತೆ ಬೋಧಿಸಿ, ಗರ್ಭದಿಂದಲೇ ಶಿಶುಗಳಿಗೆ ಸಂಸ್ಕಾರವನ್ನು ಕಲಿಸುವ ಒಂದು ಪ್ರಯತ್ನ ಇದಾಗಿದೆ. ಮತ್ತು ಯೋಗಾಭ್ಯಾಸ ಮಾಡಲು ಪ್ರೋತ್ಸಾಹಿಸಲಾಗುತ್ತದೆ ಇದರಿಂದ “ಸುಸಂಸ್ಕೃತ ಮತ್ತು ದೇಶಭಕ್ತ” ಶಿಶುಗಳು ಹುಟ್ಟುತ್ತವೆ ಎನ್ನುವ ನಂಬಿಕೆಯಾಗಿದೆ.

ಗರ್ಭ ಸಂಸ್ಕಾರ ಅಭಿಯಾನ ಕಾರ್ಯಕ್ರಮ:  ಆರ್‌ಎಸ್‌ಎಸ್​ಗೆ ಸಮಾನಾಂತರವಾಗಿರುವ ಮಹಿಳಾ ಸಂಘಟನೆಯಾದ ರಾಷ್ಟ್ರ ಸೇವಿಕಾ ಸಂಘದ ಸಂವರ್ಧಿನಿ ನ್ಯಾಸ್ ವಿಭಾಗಕ್ಕೆ ಸಂಬಂಧಿಸಿದ ವೈದ್ಯರು ಈ ಕಾರ್ಯಕ್ರಮವನ್ನು ದೇಶಾದ್ಯಂತ ಜಾರಿಗೊಳಿಸಲಿದ್ದಾರೆ. ದೇಶದಲ್ಲಿ ಐದು ಪ್ರದೇಶಗಳಾಗಿ ವಿಂಗಡಿಸಿದ್ದೇವೆ ಮತ್ತು ಪ್ರತಿಯೊಂದೂ 10 ವೈದ್ಯರ ತಂಡವನ್ನು ಹೊಂದಿದ್ದು, ಅವರು ಕಾರ್ಯಕ್ರಮವನ್ನು ಕಾರ್ಯಗತಗೊಳಿಸುತ್ತಾರೆ. ಈ ಪ್ರತಿಯೊಬ್ಬ ವೈದ್ಯರು ತಮ್ಮ ತಮ್ಮ ಪ್ರದೇಶಗಳಲ್ಲಿ 20 ಮಂದಿ ಗರ್ಭಿಣಿಯರಿಗೆ ಮಾರ್ಗದರ್ಶನ ನೀಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸುತ್ತಾರೆ ”ಎಂದು ಸಂವರ್ಧಿನಿ ನ್ಯಾಸ್ ಕಾರ್ಯಕಾರಿ ತಿಳಿಸಿದ್ದಾರೆ.

pregnant

ಗರ್ಭ ಸಂಸ್ಕಾರ ಕಾರ್ಯಕ್ರಮದ ಅನುಷ್ಠಾನದ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗಾಗಿ ನ್ಯಾಸ್‌ನ ಎಂಟು ಸದಸ್ಯರ ಕೇಂದ್ರ ತಂಡವನ್ನು ರಚಿಸಲಾಗಿದೆ. ಕೇಂದ್ರ ತಂಡವು ಆಯುರ್ವೇದ, ಹೋಮಿಯೋಪತಿ ಮತ್ತು ಅಲೋಪತಿ ವೈದ್ಯರು ವಿಷಯ ತಜ್ಞರನ್ನು ಒಳಗೊಂಡಿದೆ.

ನಿರೀಕ್ಷಿತ ತಾಯಂದಿರು ಮತ್ತು ಅವರ ಕುಟುಂಬಗಳಿಗೆ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು, ಉತ್ತಮ ಪರಿಸರ ಮತ್ತು ವಾತಾವರಣವನ್ನು ಒದಗಿಸುವುದು ಸೇರಿದಂತೆ ಉತ್ತಮ ಮಗುವನ್ನು ಹೊಂದುವ ವಿವಿಧ ಅಂಶಗಳ ಕುರಿತು ಮಾರ್ಗದರ್ಶನ ನೀಡಲಾಗುವುದು. ಯೋಗಾಭ್ಯಾಸವು ಸಹಜ ಹೆರಿಗೆಯಾಗಲು ಗರ್ಭಿಣಿಯರಿಗೆ ಸಹಾಯವಾಗುತ್ತದೆ. ಇಂಥ ಅಭ್ಯಾಸಗಳು ಶಿಶುಗಳ ಮೆದುಳಿನ ಮೇಲೆ ಆಳವಾದ ಧನಾತ್ಮಕ ಪರಿಣಾಮ ಬೀರುತ್ತವೆ. ನಾಲ್ಕು ತಿಂಗಳ ಗರ್ಭದಲ್ಲಿರುವ ಮಗು ಕೇಳಲು ಪ್ರಾರಂಭಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ನ್ಯಾಸ್ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.

Pregnant lady

ತೆಲಂಗಾಣ ರಾಜ್ಯಪಾಲೆ ತಮಿಳಿ ಸಾಯಿ ಸೌಂದರರಾಜನ್ ಮತ್ತು ಇತರ ಗಣ್ಯರು ವರ್ಚುವಲ್ ಲಾಂಚ್ ಈವೆಂಟ್‌ನಲ್ಲಿ ಉಪಸ್ಥಿತರಿರುತ್ತಾರೆ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net