More

    ಎಲೆಕ್ಟ್ರಿಕ್ ವಾಹನ ತಯಾರಿಕೆಗಾಗಿ ಸರ್ಕಾರದ ಜತೆ ರೂ. 40 ಸಾವಿರ ಕೋಟಿಯ ಒಪ್ಪಂದ: ಜಿಂದಾಲ್​ ಕಂಪನಿ ಷೇರು ಬೆಲೆ ಶೀಘ್ರವೇ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು

    ಮುಂಬೈ: ಸಜ್ಜನ್ ಜಿಂದಾಲ್ ಗ್ರೂಪ್‌ನ JSW ಎನರ್ಜಿ ಲಿಮಿಟೆಡ್ (JSW ENERGY Ltd.) ಕಂಪನಿಯು ಎಲೆಕ್ಟ್ರಿಕ್ ವಾಹನ ಯೋಜನೆಗಾಗಿ ದೊಡ್ಡ ಒಪ್ಪಂದವನ್ನು ಮಾಡಿಕೊಂಡಿದೆ. ಇದರ ಪ್ರಕಾರ ಈ ಕಂಪನಿಯು ಒಡಿಶಾದಲ್ಲಿ 40,000 ಕೋಟಿ ರೂ. ಹೂಡಿಕೆ ಮಾಡಲಿದೆ.

    ಎಲೆಕ್ಟ್ರಿಕ್ ವಾಹನ ತಯಾರಿಕೆ ಯೋಜನೆ ಇದಾಗಿದೆ. ಇದಕ್ಕಾಗಿ ಜೆಎಸ್‌ಡಬ್ಲ್ಯು ಗ್ರೂಪ್ ರಾಜ್ಯ ಸರ್ಕಾರದೊಂದಿಗೆ ತಿಳಿವಳಿಕೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ.


    JSW ಗ್ರೂಪ್ ಕಟಕ್ ಜಿಲ್ಲೆಯೊಳಗೆ ವಿದ್ಯುತ್ ವಾಹನ (EV) ಮತ್ತು ಘಟಕಗಳಿಗೆ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುತ್ತದೆ. ಇದಲ್ಲದೆ, ತಾಮ್ರ ಸ್ಮೆಲ್ಟರ್ ಮತ್ತು ಲಿಥಿಯಂ ಸಂಸ್ಕರಣಾಗಾರವನ್ನು ಜಗತ್‌ಸಿಂಗ್‌ಪುರ ಜಿಲ್ಲೆಯ ಪರಾದೀಪ್‌ನಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.

    ಈ ಎರಡೂ ಯೋಜನೆಗಳಿಗೆ ನಿರ್ದಿಷ್ಟ ಪ್ರೋತ್ಸಾಹಕ ಪ್ಯಾಕೇಜ್ ಅನ್ನು ಕ್ಯಾಬಿನೆಟ್ ಅನುಮೋದಿಸಿದ ಎರಡು ದಿನಗಳ ನಂತರ ಈ ಎಂಒಯುಗೆ ಸಹಿ ಹಾಕಲಾಗಿದೆ.

    JSW ಗ್ರೂಪ್‌ನ ಇಂಧನ ಕಂಪನಿಯಾದ JSW ಎನರ್ಜಿಯ ಷೇರುಗಳು ಈಗ ಕುಸಿತದಲ್ಲಿವೆ. ಈ ಒಪ್ಪಂದದ ಹಿನ್ನೆಲೆಯಲ್ಲಿ ಷೇರುಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಬೇಡಿಕೆ ಬರಲಿದೆ ಎಂಬ ವಿಶ್ವಾಸ ತಜ್ಞರದ್ದಾಗಿದೆ.

    ಮಂಗಳವಾರದಂದು ಷೇರಿನ ಬೆಲೆ 487 ರೂ. ಇತ್ತು. ಈ ಷೇರಿನ 52 ವಾರದ ಗರಿಷ್ಠ 521.65 ರೂ. ಆಗಿದೆ.
    ಮುಂದಿನ ದಿನಗಳಲ್ಲಿ ಈ ಷೇರಿನ ಬೆಲೆ ರೂ 550 ದಾಟಬಹುದು ಎಂಬುದು ತಜ್ಞರ ಅಂದಾಜು. ಬ್ರೋಕರೇಜ್ ಸಂಸ್ಥೆ ಪ್ರಕಾರ, ಷೇರುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

    ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಜೆಎಸ್‌ಡಬ್ಲ್ಯು ಎನರ್ಜಿಯ ಲಾಭದಲ್ಲಿ ಜಿಗಿತ ಕಂಡುಬಂದಿದೆ. ವ್ಯವಹಾರದ ನಿವ್ವಳ ಲಾಭವು 28 ಪ್ರತಿಶತದಷ್ಟು ಹೆಚ್ಚಾಗಿದ್ದು, ರೂ. 231 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ, ಲಾಭ ಅಂದಾಜು 180 ಕೋಟಿ ರೂ. ಆಗಿತ್ತು.

    ಇದೇ ತ್ರೈಮಾಸಿಕದಲ್ಲಿ ಒಟ್ಟು ಆದಾಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ 13 ಪ್ರತಿಶತದಷ್ಟು ಹೆಚ್ಚಾಗಿದ್ದು, 2661 ಕೋಟಿ ರೂ.ಗೆ ತಲುಪಿದೆ.

    ಜೆಎಸ್‌ಡಬ್ಲ್ಯೂ ಎನರ್ಜಿ ಲಿಮಿಟೆಡ್, ಭಾರತ ಮೂಲದ ವಿದ್ಯುತ್ ಕಂಪನಿಯಾಗಿದ್ದು, ದೊಡ್ಡ ಇಂಧನ ಪೂರೈಕೆದಾರನಾಗಿದೆ. ಉಷ್ಣ ಮತ್ತು ನವೀಕರಿಸಬಹುದಾದ ಇಂಧನ ಪೂರೈಸುತ್ತದೆ.

    ಉಷ್ಣ ವಿಭಾಗ: ಒಡೆತನದ ಸ್ಥಾವರಗಳು ಮತ್ತು ಸಂಬಂಧಿತ ಸೇವೆಗಳಿಂದ ಕಲ್ಲಿದ್ದಲು, ಲಿಗ್ನೈಟ್, ತೈಲ ಮತ್ತು ಅನಿಲದಿಂದ ವಿದ್ಯುತ್ ಉತ್ಪಾದನೆ.

    ನವೀಕರಿಸಬಹುದಾದ ವಿಭಾಗ: ಜಲ, ಗಾಳಿ ಮತ್ತು ಸೌರಶಕ್ತಿಯಂತಹ ನವೀಕರಿಸಬಹುದಾದ ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ.

    ಕರ್ನಾಟಕದ ವಿಜಯನಗರ, ಬಸ್ಪಾ, ಬಾರ್ಮರ್ ಕರ್ಚಮ್ ವಾಂಗ್ಟೂ ಮತ್ತು ರತ್ನಾಗಿರಿಯಲ್ಲಿ ಇದರ ಘಟಕಗಳಿವೆ.

    ಮಂಗಳವಾರ ಸಾಕಷ್ಟು ಏರಿಕೆ ಕಂಡ 4 ಷೇರುಗಳು: ಬುಧವಾರ ಕೂಡ ಈ ಸ್ಟಾಕ್​ಗಳಲ್ಲಿ ದೊರೆಯಬಹುದು ಲಾಭ

     

    ನಿವೃತ್ತಿ ನಂತರದ ಸುಭದ್ರ ಜೀವನಕ್ಕಾಗಿ ಸೂಕ್ತ ಹೂಡಿಕೆ ಯೋಜನೆ ಅಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts