More

    ಐಪಿಒದಲ್ಲಿ ಮೊದಲ ದಿನವೇ 29 ಪಟ್ಟು ಅರ್ಜಿ; ಷೇರು ಹಂಚಿಕೆಯಾದರೆ ಮೊದಲ ದಿನವೇ 80% ಲಾಭ; ನೀವು ಹೂಡಿಕೆ ಮಾಡಲು ಫೆ. 15ರವರೆಗೆ ಅವಕಾಶ

    ಮುಂಬೈ: ಇನಿಷಿಯಲ್ ಪಬ್ಲಿಕ್​ ಆಫರ್​ (ಐಪಿಒ) ಮೂಲಕ ವಿಭೋರ್ ಸ್ಟೀಲ್ ಟ್ಯೂಬ್ಸ್ (Vibhor Steel Tubes) ಕಂಪನಿಯು ಸಾರ್ವಜನಿಕರಿಗೆ ಷೇರುಗಳನ್ನು ಹಂಚಿಕೆ ಮಾಡುತ್ತಿದೆ. ಈ ಐಪಿಒ ಮಂಗಳವಾರ, ಫೆ. 13ರಂದು ಆರಂಭವಾಗಿದ್ದು, ಈ ಮೊದಲ ದಿನವೇ ಹೂಡಿಕೆದಾರರು ಷೇರು ಖರೀದಿಸಲು ಐಪಿಒಗೆ ಭಾರಿ ಪ್ರಮಾಣದಲ್ಲಿ ಅರ್ಜಿ ಹಾಕಿದ್ದಾರೆ.

    ಮೊದಲ ದಿನವೇ ಈ ಐಪಿಒಗೆ 29 ಪಟ್ಟು ಚಂದಾದಾರಿಕೆಯಾಗಿದೆ. ಅಂದರೆ, ಹಂಚಿಕೆಯಾಗುವ ಒಟ್ಟು ಷೇರುಗಳಿಗಿಂತ 13 ಪಟ್ಟು ಅರ್ಜಿಗಳು ಐಪಿಒದಲ್ಲಿ ಸಲ್ಲಿಕೆಯಾಗಿವೆ.

    ಈ ಐಪಿಒದಲ್ಲಿ ಪ್ರತಿ ಷೇರಿನ ಬೆಲೆ 141 ರಿಂದ 151 ರೂಪಾಯಿ ನಿಗದಿಪಡಿಸಲಾಗಿದೆ. ಈ ಐಪಿಒದಲ್ಲಿ ಅರ್ಜಿ ಸಲ್ಲಿಸಲು ಫೆಬ್ರವರಿ 15 ರವರೆಗೆ ಸಮಯಾವಕಾಶ ನೀಡಲಾಗಿದೆ. ಕಂಪನಿಯ ಐಪಿಒಗೆ ಗ್ರೇ ಮಾರ್ಕೆಟ್‌ನಲ್ಲೂ ಬಲವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೈಭೋರ್ ಸ್ಟೀಲ್ ಟ್ಯೂಬ್ಸ್ ಷೇರುಗಳ ಬೆಲೆ ಗ್ರೇ ಮಾರ್ಕೆಟ್‌ನಲ್ಲಿ 80% ರಷ್ಟು ಏರಿಕೆಯಾಗಿದೆ. ಹೀಗಾಗಿ, ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ಮೊದಲ ದಿನವೇ ಈ ಐಪಿಒ ಷೇರು ಬೆಲೆ 270 ರೂಪಾಯಿ ದಾಟುತ್ತದೆ ಎನ್ನಲಾಗಿದೆ.

    ಕಂಪನಿಯ ಷೇರುಗಳನ್ನು ಫೆಬ್ರವರಿ 20 ರಂದು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುವುದು. ಈ ಐಪಿಒದಲ್ಲಿ ಅರ್ಜಿ ಸಲ್ಲಿಸಿದ ಯಾವ ಹೂಡಿಕೆದಾರರಿಗೆ ಷೇರುಗಳು ಹಂಚಿಕೆಯಾಗುತ್ತವೆಯೋ ಅವರು ಪಟ್ಟಿ ಮಾಡಿದ ಮೊದಲ ದಿನವೇ 80% ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಐಪಿಒದಲ್ಲಿ ಅರ್ಜಿ ಸಲ್ಲಿಸಲು ಫೆ. 15 ಕೊನೆಯ ದಿನವಾಗಿದೆ.

    ಈ ಐಪಿಒದಲ್ಲಿ ಮೊದಲ ದಿನ ಚಿಲ್ಲರೆ ಹೂಡಿಕೆದಾರರ ಕೋಟಾದಡಿ 35.24 ಬಾರಿ ಚಂದಾದಾರಿಕೆಯಾಗಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರ (NII) ಕೋಟಾದಲ್ಲಿ 51.92 ಬಾರಿ ಚಂದಾದಾರಿಕೆಯಾಗಿದೆ. ಅರ್ಹ ಸಾಂಸ್ಥಿಕ ಖರೀದಿದಾರರ ಕೋಟಾದಲ್ಲಿ 3.81 ಬಾರಿ ಚಂದಾದಾರಿಕೆಯಾಗಿದೆ. ನೌಕರರ ಕೋಟಾದಡಿ 29.87 ಬಾರಿ ಚಂದಾದಾರಿಕೆಯಾಗಿದೆ. ಕಂಪನಿಯ ಐಪಿಒದ ಒಟ್ಟು ಗಾತ್ರ 72.17 ಕೋಟಿ ರೂಪಾಯಿ ಇದೆ. ಕಂಪನಿಯ IPO ನಲ್ಲಿ ಚಿಲ್ಲರೆ ಹೂಡಿಕೆದಾರರು ಕನಿಷ್ಠ 1 ಲಾಟ್ ಮತ್ತು ಗರಿಷ್ಠ 13 ಲಾಟ್‌ಗಳನ್ನು ಖರೀದಿಸಲು ಅವಕಾಶವಿದೆ.

    ಬ್ಯಾಂಕಿಂಗ್, ಐಟಿ ಷೇರು ಖರೀದಿ ಜೋರು: 482 ಅಂಕಗಳ ಏರಿಕೆಯೊಂದಿಗೆ ಸೂಚ್ಯಂಕ ಚೇತರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts