ವಿಲೀನ ರದ್ದತಿಯ ಪರಿಣಾಮ: ಟಾಟಾ ಗ್ರೂಪ್ ಕಂಪನಿ ಟಿಆರ್​ಎಫ್ ಷೇರು ಬೆಲೆ 6 ದಿನಗಳಲ್ಲಿ 99.30% ಏರಿಕೆ

trf-1
Published on

ಮುಂಬೈ: ಟಾಟಾ ಗ್ರೂಪ್ ಕಂಪನಿ ಟಿಆರ್​ಎಫ್ ಷೇರುಗಳ ಬೆಲೆ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದೆ. ಕಳೆದ ಆರು ವಹಿವಾಟು ದಿನಗಳಿಂದ ಷೇರುಗಳಿಗೆ ವ್ಯಾಪಕ ಬೇಡಿಕೆ ಬಂದಿದೆ.

ಮಂಗಳವಾರ, ಫೆ. 13ರಂದು ಟಾಟಾ ಗ್ರೂಪ್‌ಗ್ರೂನ ಈ ಷೇರು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ಮಂಗಳವಾರ ಇಂಟ್ರಾ ಡೇ ವಹಿವಾಟಿನಲ್ಲಿ ಟಾಟಾ ಸಮೂಹದ ಟಿಆರ್‌ಎಫ್ ಷೇರುಗಳು ಶೇ.7.7ರಷ್ಟು ಏರಿಕೆಯಾಗಿ 509.95 ರೂಪಾಯಿ ತಲುಪಿದವು. ಈ ಮೂಲಕ 13 ವರ್ಷಗಳ ಗರಿಷ್ಠ ಮಟ್ಟ ಮುಟ್ಟಿದವು. ಕಳೆದ ಐದು ದಿನಗಳಲ್ಲಿ ಈ ಸ್ಟಾಕ್ 85% ರಷ್ಟು ಹೆಚ್ಚಾಗಿದೆ. ಇಂದಿನ ಏರಿಕೆಯೊಂದಿಗೆ, ಆರು ದಿನಗಳಲ್ಲಿ ಸ್ಟಾಕ್ ಸುಮಾರು 99.30% ಏರಿಕೆಯಾಗಿದೆ.

ಷೇರುಗಳ ಏರಿಕೆಗೆ ಕಾರಣವಿದೆ. ಕಳೆದ ವಾರವೇ ಟಾಟಾ ಗ್ರೂಪ್​ನ ಟಾಟಾ ಸ್ಟೀಲ್ ಮತ್ತು ಟಿಆರ್‌ಎಫ್ ವಿಲೀನ ಪ್ರಸ್ತಾಪವನ್ನು ರದ್ದುಗೊಳಿಸಲಾಗಿದೆ. ಈ ಸುದ್ದಿಯ ನಂತರ ಕಳೆದ ಬುಧವಾರದ ವಹಿವಾಟು ಇಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಕಂಪನಿ ಟಿಆರ್‌ಎಫ್ ಲಿಮಿಟೆಡ್‌ನ ಷೇರುಗಳಲ್ಲಿ 20 ಪ್ರತಿಶತದಷ್ಟು ಏರಿಕೆಯಾಗಿ ಅಪ್ಪರ್​ ಸರ್ಕ್ಯೂಟ್ ಹಿಟ್​ ಆಗಿತ್ತು.

ಈ ಕಂಪನಿಯ ಕಾರ್ಯಕ್ಷಮತೆಯ ಸುಧಾರಣೆಯ ದೃಷ್ಟಿಯಿಂದ, ಅದನ್ನು ವಿಲೀನಗೊಳಿಸದಿರಲು ನಿರ್ಧರಿಸಲಾಗಿದೆ. ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್, ಟಿನ್‌ಪ್ಲೇಟ್ ಕಂಪನಿ ಆಫ್ ಇಂಡಿಯಾ, ಟಾಟಾ ಮೆಟಾಲಿಕ್ಸ್, ದಿ ಇಂಡಿಯನ್ ಸ್ಟೀಲ್ ಮತ್ತು ವೈರ್ ಪ್ರಾಡಕ್ಟ್ಸ್, ಟಾಟಾ ಸ್ಟೀಲ್ ಮೈನಿಂಗ್ ಲಿಮಿಟೆಡ್ ಮತ್ತು ಎಸ್ & ಟಿ ಮೈನಿಂಗ್ ಕಂಪನಿ ಸೇರಿದಂತೆ ಒಂಬತ್ತು ಕಾರ್ಯತಂತ್ರದ ವ್ಯವಹಾರಗಳ ಏಕೀಕರಣಕ್ಕಾಗಿ ಯೋಜನೆಗಳನ್ನು ಘೋಷಿಸಿತ್ತು.

ಟಾಟಾ ಸ್ಟೀಲ್ ಮೈನಿಂಗ್ ಲಿಮಿಟೆಡ್‌ನ ವಿಲೀನವು ಸೆಪ್ಟೆಂಬರ್ 1, 2023 ರಿಂದ ಆಗಿದೆ. ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ವಿಲೀನವು ನವೆಂಬರ್ 15, 2023 ರಿಂದ ಜಾರಿಗೆ ಬಂದಿದೆ. ಡಿಸೆಂಬರ್ 1, 2023 ರಿಂದ ಜಾರಿಗೆ ಬರುವಂತೆ S&T ಮೈನಿಂಗ್ ಕಂಪನಿ ಲಿಮಿಟೆಡ್ ಮತ್ತು ಜನವರಿ 15, 2024 ರಿಂದ ಜಾರಿಗೆ ಬರುವಂತೆ ದಿ ಟಿನ್‌ಪ್ಲೇಟ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್‌ನ ವಿಲೀನ ಮಾಡಲಾಗಿದೆ. ಇದಲ್ಲದೆ, ಟಾಟಾ ಮೆಟಾಲಿಕ್ಸ್ ಲಿಮಿಟೆಡ್‌ನ ವಿಲೀನವು ಫೆಬ್ರವರಿ 1, 2024 ರಿಂದ ಜಾರಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net