More

    ಹಿಂಡನ್​ಬರ್ಗ್​ ನಂತರ ಈಗ ಅಮೆರಿಕದ ಇನ್ನೊಂದು ಕಂಪನಿಯ ವರದಿ: ಅದಾನಿ ಗ್ರೂಪ್​ನ ಎಲ್ಲ ಕಂಪನಿಗಳ ಷೇರುಗಳ ಬೆಲೆ ತೀವ್ರ ಕುಸಿತ

    ಮುಂಬೈ: ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಪವರ್‌ ಸೇರಿಂದತೆ ಅದಾನಿ ಗ್ರೂಪ್ ಬೆಂಬಲಿತ ಕಂಪನಿಯ ಎಲ್ಲ ಷೇರುಗಳು ಮಂಗಳವಾರ  ಕುಸಿತ ಕಂಡವು.

    ಅದಾನಿ ಹೆಸರಿನ ಏಳು ಕಂಪನಿಗಳಿವೆ. ಇದಲ್ಲದೆ, ಈ ಗುಂಪು ಸಿಮೆಂಟ್ ವಲಯದಲ್ಲಿ ಎರಡು ಮತ್ತು ಮಾಧ್ಯಮ ವಿಭಾಗದಲ್ಲಿ 1 ಕಂಪನಿಗಳನ್ನು ಹೊಂದಿದೆ. ಈ ಎಲ್ಲ ಕಂಪನಿಗಳ ಷೇರುಗಳ ಬೆಲೆ ಅಂದಾಜು 2% ರಿಂದ 6.5% ವ್ಯಾಪ್ತಿಯಲ್ಲಿ ಕುಸಿತ ಕಂಡಿವೆ.

    ಗ್ಲೋಬಲ್ ಸ್ಟ್ಯಾಂಡರ್ಡ್ (ಎಮರ್ಜಿಂಗ್ ಮಾರ್ಕೆಟ್ಸ್) ಸೂಚ್ಯಂಕದಲ್ಲಿ ಭಾರತದ ತೂಕವನ್ನು ಅಮೆರಿಕದ ಹಣಕಾಸು ಕಂಪನಿ ಎಂಎಸ್​ಸಿಐ ಹೆಚ್ಚಿಸಿದೆ. ಆದರೆ, ಅದಾನಿ ಷೇರುಗಳ ಸೂಚ್ಯಂಕದಲ್ಲಿ ತಾನು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ಎಂಎಸ್​ಸಿಐ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರುಗಳು ಕುಸಿತ ಕಂಡಿವೆ.

    ಸೂಚ್ಯಂಕ ಪೂರೈಕೆದಾರ ಸಂಸ್ಥೆಯಾದ ಎಂಎಸ್​ಸಿಐ ತನ್ನ ಫೆಬ್ರವರಿ ಪರಿಶೀಲನೆಯ ನಂತರ ತನ್ನ ಗ್ಲೋಬಲ್ ಸ್ಟ್ಯಾಂಡರ್ಡ್ (ಎಮರ್ಜಿಂಗ್ ಮಾರ್ಕೆಟ್ಸ್) ಸೂಚ್ಯಂಕದಲ್ಲಿ ಭಾರತದ ತೂಕವನ್ನು ಐತಿಹಾಸಿಕ ಗರಿಷ್ಠ 18.2 ಶೇಕಡಾಕ್ಕೆ ಏರಿಸಿದೆ. ನವೆಂಬರ್ 2020 ರಿಂದ ಈ ಸೂಚ್ಯಂಕದಲ್ಲಿ ಭಾರತದ ತೂಕವು ಸುಮಾರು ದ್ವಿಗುಣಗೊಂಡಿದೆ. ಎಂಎಸ್​ಸಿಐ ಗ್ಲೋಬಲ್ ಸ್ಟ್ಯಾಂಡರ್ಡ್ ಇಂಡೆಕ್ಸ್‌ನಲ್ಲಿ ಚೀನಾದ ನಂತರ ಭಾರತವು ಎರಡನೇ ಅತಿ ಹೆಚ್ಚು ತೂಕವನ್ನು ಹೊಂದಿದೆ. ಫೆಬ್ರವರಿ 12 ರಂದು ಎಂಎಸ್​ಸಿಐ ಸಂಸ್ಥೆಯು ಸೂಚ್ಯಂಕ ಕುರಿತ ವರದಿ ಬಿಡುಗಡೆ ಮಾಡಿದೆ.

    ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ, ಅದಾನಿಯ ಗ್ರೂಪ್​ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ 2.3% ರಷ್ಟು ಕುಸಿಯಿತು. ಅದಾನಿ ಪೋರ್ಟ್ಸ್ 1.9% ನಷ್ಟು ಕುಸಿತದೊಂದಿಗೆ ಕನಿಷ್ಠ ಕುಸಿತವನ್ನು ಅನುಭವಿಸಿತು. ಅದಾನಿ ಪವರ್ ಕಂಪನಿಯ ಷೇರುಗಳು ಶೇಕಡಾ 5%ರಷ್ಟು ಕುಸಿದು ಲೋವರ್ ಸರ್ಕ್ಯೂಟ್ ಹಿಟ್​ ಆದವು. ಅದಾನಿ ಗ್ರೀನ್ ಎನರ್ಜಿ ಷೇರು ಬಲೆ 6.10% ಕುಸಿತ ಕಂಡಿತು.

    ಏತನ್ಮಧ್ಯೆ, ಅದಾನಿ ಎನರ್ಜಿ ಸಲ್ಯೂಷನ್ಸ್ ಷೇರು ಬೆಲೆ 3.8% ರಷ್ಟು ಕುಸಿದರೆ, ಅದಾನಿ ಟೋಟಲ್ ಗ್ಯಾಸ್ ಷೇರು ಬೆಲೆ 3.91% ರಷ್ಟು ಕುಸಿದಿದೆ. ಅದಾನಿ ವಿಲ್ಮರ್ ಸ್ಟಾಕ್​ ದರ 2.9% ನಷ್ಟು ಕುಸಿದಿದೆ.

    ಸಿಮೆಂಟ್ ಸ್ಟಾಕ್‌ಗಳಾದ ಅಂಬುಜಾ ಮತ್ತು ಎಸಿಸಿ ಕ್ರಮವಾಗಿ 2.09% ಮತ್ತು 2.80% ರಷ್ಟು ಕುಸಿದವು. ಮಾಧ್ಯಮ ಸ್ಟಾಕ್ NDTV 4.5% ರಷ್ಟು ಕುಸಿದಿದೆ.

    2023 ರ ಜನವರಿ ಅಂತ್ಯದಲ್ಲಿ ಅಮೆರಿಕ ಕಿರು ಮಾರಾಟಗಾರ ಹಿಂಡೆನ್‌ಬರ್ಗ್‌ ಸಂಸ್ಥೆಯ ವರದಿ ನಂತರ ಅದಾನಿ ಸಮೂಹದ ಷೇರುಗಳು ಸಾಕಷ್ಟು ಕುಸಿತ ಕಂಡಿದ್ದವು.

    ಅದಾನಿ ಗ್ರೂಪ್​ ವಿರುದ್ಧ ಹಿಂಡೆನ್‌ಬರ್ಗ್‌ ಸಂಸ್ಥೆ ಮಾಡಿದ ಆರೋಪಗಳನ್ನು ತನಿಖೆ ಮಾಡಲು ಕಳೆದ ತಿಂಗಳು ಸೆಬಿಗೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಮಾರುಕಟ್ಟೆ ನಿಯಂತ್ರಕರ (ಸೆಬಿ) ತನಿಖೆಯಲ್ಲಿ ತನ್ನ ನಂಬಿಕೆಯನ್ನು ವ್ಯಕ್ತಪಡಿಸಿತ್ತು.
    ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವ ಅಥವಾ ಪ್ರಕರಣವನ್ನು ಭಾರತದ ಉನ್ನತ ತನಿಖಾಧಿಕಾರಿ ಸಿಬಿಐಗೆ ವರ್ಗಾಯಿಸುವ ಕೋರಿಕೆಯ ಮನವಿಗಳನ್ನು ಸಹ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

    ಕಳೆದ ಆರು ತಿಂಗಳಲ್ಲಿ, ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ 28.5%, ಅದಾನಿ ಪೋರ್ಟ್ಸ್ ಷೇರು ಬೆಲೆ 59%, ಅದಾನಿ ಪವರ್ ಷೇರು ಬೆಲೆ 91%, ಅದಾನಿ ಗ್ರೀನ್ ಷೇರು ಬೆಲೆ 89%, ಅದಾನಿ ಎನರ್ಜಿ ಸಲ್ಯೂಷನ್ಸ್ ಷೇರು ಬೆಲೆ 90%, ಅದಾನಿ ಟೋಟಲ್ ಗ್ಯಾಸ್ ಷೇರು ಬೆಲೆ 59%, ಅಂಬುಜಾ ಸಿಮೆಂಟ್ಸ್​ 28%, ACC ಸಿಮೆಂಟ್ಸ್​​ 37%, ಮತ್ತು NDTV 13% ರಷ್ಟು ಏರಿಕೆಯಾಗಿವೆ.

    ವಿಲೀನ ರದ್ದತಿಯ ಪರಿಣಾಮ: ಟಾಟಾ ಗ್ರೂಪ್ ಕಂಪನಿ ಟಿಆರ್​ಎಫ್ ಷೇರು ಬೆಲೆ 6 ದಿನಗಳಲ್ಲಿ 99.30% ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts