ಅಪ್ರಾಪ್ತನಿಗೆ ಬೈಕ್ ನೀಡಿದ್ದಕ್ಕೆ 26500 ರೂ. ದಂಡ: ವಿಜಯಪುರ ನ್ಯಾಯಾಲಯದಿಂದ ಮಹತ್ವದ ತೀರ್ಪು! Vijayapura Court

Vijayapura Court
Published on

Vijayapura Court : ಅಪ್ರಾಪ್ತನಿಗೆ ಸಂಚಾರಿ ನಿಯಮ ಉಲ್ಲಂಘಿಸಿ ಚಾಲನೆ ಮಾಡಲು ಬೈಕ್ ನೀಡಿದ ಮಾಲೀಕನಿಗೆ ವಿಜಯಪುರ ಸ್ಥಳೀಯ ನ್ಯಾಯಾಲಯ 26,500 ದಂಡ ವಿಧಿಸಿದೆ.

2024 ನವೆಂಬರ 16 ರಂದು ವಿಜಯಪುರ ರೈಲ್ವೇ ನಿಲ್ದಾಣದ ಪರಿಸರದಲ್ಲಿ ಅಪ್ರಾಪ್ತ ಬಾಲಕ ಬೈಕ್ ಚಾಲನೆ ಮಾಡುತ್ತಿದ್ದ. ಕರ್ತವ್ಯದಲ್ಲಿದ್ದ ವಿಜಯಪುರ ರೈಲ್ವೇ ಠಾಣೆ ಪಿ.ಎಸ್.ಐ. ಶಿವಾನಂದ ಅರೇನಾಡ ಹಾಗೂ ಸಿಬ್ಬಂದಿ ಅಪ್ರಾಪ್ತನನ್ನು ವಾಹನ ಸಹಿತ ತಡೆದು ತಪಾಸಣೆ ನಡೆಸಿದ್ದಾರೆ.

ವಾಹನ ಚಾಲನೆ ಮಾಡಿದ ಅಪ್ರಾಪ್ತ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ಅಪ್ರಾಪ್ತನಿಗೆ ಬೈಕ್ ನೀಡಿದ ನಗರದ ಶಹಪುರ್ ಅಗಸಿ ನಿವಾಸಿ ಬೈಕ್ ಮಾಲೀಕ ಹುಸೇನಸಾಬ್ ರಾಂಪುರ ವಿರುದ್ಧ ಪಿ ಎಸ್ ಐ ಶಿವಾನಂದ ಅರೇನಾಡ ಪ್ರಕರಣ ದಾಖಳಿಸಿ, ವಾಹನ ವಶಕ್ಕೆ ಪಡೆದಿದ್ದರು.

ಸದರಿ ಪ್ರಕರಣದ ಕುರಿತು ವಿಚಾರ ನಡೆಸಿದ ವಿಜಯಪುರ ನಾಲ್ಕನೇ ಹೆಚ್ಚುವರಿ ದಿವಾಣಿ ಮತ್ತು ಪ್ರಥಮ ದರ್ಜೆ ನ್ಯಾಯಾಲಯ ಅಪ್ರಾಪ್ತನಿಗೆ ವಾಹನ ನೀಡಿದ ಮಾಲೀಕನಿಗೆ 26,500 ರೂ. ದಂಡ ವಿಧಿಸಿ ಅದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net